ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾವಸಿಂಹ v vvvvvvvvvvvvv vv vv • • •••••••••••••••• ಹೆಚ್ಚು ಎತ್ತರವಾಗುತ್ತ ಹೋಗಿದೆ. ಮತ್ತು ನಾನಾ ಸಾಲುಗಳಾಗಿ ಕ್ರಮವಾಗಿ ಪಶ್ಚಿಮದಿಕ್ಕಿಗೆ ೫೦ ಮೈಲುಗಳ ವರೆಗೆ ವಿಸ್ತಾರವಾಗುತ್ತ ಹೋಗಿದೆ. ಈ ಸಾಲು ಗಳ ಮೇಲೆ ಅನೇಕ ಉನ್ನತವಾದ ಶಿಖರಗಳು ಆಕಾಶವನ್ನು ಮುಟ್ಟುವಂತೆ ನಿಂತುಕೊಂಡಿರುವವು. ಮೇವಾಡ ರಾಜ್ಯದಲ್ಲಿರುವ ಪರ್ವತದ ಈ ಭಾಗವು ದುರ್ಗಮವೂ ಭಯಂಕರ ಅಡವಿಗಳಿಂದ ತುಂಬಿದ್ದೂ ಆಗಿದೆ. ಈಗ ಮಾರವಾ ಡದ ಸಮಪ್ರದೇಶದಲ್ಲಿ ದೇಸುರಿಯೆಂಬ ಒಂದು ಸಣ್ಣ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಚಕ್ಕಡಿಗಳು ನಡೆಯುತ್ತವೆ. ಆದರೆ ನಮ್ಮ ಕಥಾನಕ ಕಾಲದಲ್ಲಿ ಈ ಮಾರ್ಗವಿರಲಿಲ್ಲ. ಆ ಕಾಲದಲ್ಲಿ ಇಲ್ಲಿ ಭಯಂಕರವಾದ ಅನೇಕ ಅಂಕು ಡೊಂಕಾದ ಘಟ್ಟದ ಮಾರ್ಗಗಳು ಇದ್ದವು ಅದರಿಂದ ಒಂದು ಕುದುರೆಯಾ ಗಲಿ, ಒಂಟೆಯಾಗಲಿ, ಬಹು ಕಷ್ಟದಿಂದ ಈ ಮಾರ್ಗವನ್ನು ನಡೆದು ಹೋಗ ಬಹುದಾಗಿತ್ತು. ಈ ದಾರಿಯ ಎರಡೂ ಬದಿಗಳಲ್ಲಿ ಉನ್ನತವಾದ ಪರ್ವತದ ಸಾಲುಗಳು ಇದ್ದವು. ಸಾಮಾನ್ಯ ಮನುಷ್ಯರು ಸಹ ಇವುಗಳ ಶಿಖರಗಳ ಮೇಲೆ ನಿಂತಾಗಲಿ, ಗವಿಗಳಲ್ಲಿ ಅಡಗಿಯಾಗಲಿ ಕಲ್ಲನ್ನೆಸೆದು ದೊಡ್ಡ ಶತ್ರು ಸೈನ್ಯವನ್ನು ನಾಶಮಾಡಬಹುದಾಗಿದ್ದಿತು. ದೇವಿರದ ತರುವಾಯ ಪರ್ವತವನ್ನು ದಾಟಿಹೋಗುವದಕ್ಕಿರುವ ಮಾರ್ಗ ಗಗಳಲ್ಲಿ, ಸೋಮೇಶ್ವರದ ದಾರಿಯು ಮೊದಲನೆಯದು, ಇದರ ಮುಂದೆ ಇದ್ದ ಮೊದಲಿನ ಘಟ್ಟದ ಹಾದಿಯು ಈಗ ದೇಸುರಿಯ ಮಾರ್ಗವಾಗಿದೆ. ಇದರ ತರುವಾಯ ಹಾತಿಗಡ ಘಟ್ಟದ ಮಾರ್ಗವಿರುವದು ಇದರಲ್ಲಿ ಕೈಲಬಾರ ನಗ ರವೂ ಕಮಲಮೂರ ದುರ್ಗವೂ ಇರುವವು. ಒಂದು ಕಾಲದಲ್ಲಿ ಕೈಲಬಾರ ಪಟ್ಟ ಣವು, ಮೇವಾಡದ ರಾಜಧಾನಿಯಾಗಿದ್ದಿತು; ಮೊಗಲರು ಕಮಲಮೀರದುರ್ಗ ವನ್ನು ಕೈವಶಮಾಡಿಕೊಳ್ಳುವದಕ್ಕೆ ತಮ್ಮ ಯಾವಚ್ಛಕ್ತಿಯನ್ನು ಉಪಯೋಗಿಸಿ ದರು. ಇದರ ದಕ್ಷಿಣದಲ್ಲಿ ಆರು ಮೈಲಿನ ಮೇಲೆ ಸದ್ರಿಘಟ್ಟದ ಮಾರ್ಗವಿರುವದು. ಇದರಲ್ಲಿರುವ ರಾಮಪುರದ ವಿಖ್ಯಾತ ಜೈನಮಂದಿರಗಳು, ಭಯಂಕರ ಅಡವಿಗ ಳೊಳಗಿಂದ ತಲೆಯನ್ನೆತ್ತಿ ಒಂದು ಪುರಾತನ ಪಟ್ಟಣದ ಗೌರವವನ್ನು ಸಾರಿ ಹೇಳುತ್ತಿರುವವು. ಸದ್ರಿಯ ದಕ್ಷಿಣಕ್ಕೆ ಹೇಳತಕ್ಕಂಧ ದೊಡ್ಡ ಮಟ್ಟದ ಮಾರ್ಗಗ ಳಿಲ್ಲ. ಈ ಸ್ಥಳದಿಂದ ದುರಾರೋಹವಾದ ಪರ್ವತಾವಳಿಯು ಅಬೂಶಿಖರದವರೆಗೆ ವಿಸ್ತಾರವಾಗಿದೆ. ಅಬೂಶಿಖರದ ಜೈನಮಂದಿರಗಳು ಜಗತ್ತಿನ ಜನರಲ್ಲಿ ಆಶ್ಚ