ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರು

  • vvvvv ,

ಸಾಹಸ ತರದ ಉದಾಹರಣೆಗಳು ಬೇರೆ ಜಾತಿಯ ಇತಿಹಾಸದಲ್ಲಿ ವಿರಳವಾಗಿವೆಯೆಂದು ಹೇಳಬಹುದು. ರಜಪೂತರು ಸ್ವದೇಶ, ಸ್ವಜಾತಿ, ಮತ್ತು ಸ್ವಧರ್ಮ ಈ ತ್ರಿಮೂರ್ತಿಗಳ ಉಪಾಸಕರು. ಸ್ವದೇಶದ ಸ್ವಾತಂತ್ರ್ಯದ ಸಲುವಾಗಿ, ಸ್ವಜಾತಿಯ ಮಾನರಕ್ಷ ಣೆಯ ಸಲುವಾಗಿ, ಸ್ವಧರ್ಮದ ಗೌರವವೃದ್ಧಿಗಾಗಿ ಇವರು ಸದಾ ಪ್ರಾಣವಿಸರ್ಜನೆ ಮಾಡುವದಕ್ಕೆ ತತ್ಪರರಾಗಿರುತ್ತಿದ್ದರುವಿಶೇಷವಾಗಿ ಸ್ತ್ರೀಯರ ಮಾನ-ಧರ್ಮ ಗಳನ್ನು ಸಂರಕ್ಷಿಸುವದಕ್ಕೆ ಹಿಂದೆಗೆದ ರಜಪೂತನು ದೊರೆಯುವಂತಿಲ್ಲ ಇವರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುವದನ್ನು ನೋಡಿ, ಎಂದೂ ಸಹಿಸುತ್ತಿದ್ದಿಲ್ಲ. ಇವರು ಯಾವತ್ತನ್ನು ಬಿಡಲಿಕ್ಕೆ ಸಿದ್ದರಾಗುತ್ತಿದ್ದರು ಆದರೆ ಸ್ತ್ರೀಯರ ಧರ್ಮ ವಿಕ್ರಯಕ್ಕೆ ಎಂದೂ ಮನಸ್ಸು ಮಾಡುತ್ತಿದ್ದಿಲ್ಲ ಸ್ವದೇಶದ ಸಲುವಾಗಿ, ಅಥವಾ ಸ್ವಧರ್ಮದ ಸಲುವಾಗಿ ಯುದ್ಧ ಮಾಡುತ್ತಿರುವಾಗ ತಮಗೆ ಅಪಜಯ ಬರುವ ದೆಂಬದನ್ನು ತಿಳಿದ ಕೂಡಲೇ, ಇವರು ತಮ್ಮ ಯಾವತ್ತು ಸ್ತ್ರೀಯರನ್ನು ಪ್ರಜ್ವಲಿತ ಚಿತೆಗೆ ಆಹುತಿಯಾಗಿ ಕೊಟ್ಟು ಬಿಡುತ್ತಿದ್ದರು, ಮತ್ತು ತಾವು ರುದ್ರಮೂರ್ತಿ ಯನ್ನು ಧಾರಣಮಾಡಿ, ಶತ್ರುಗಳನ್ನು ಸಂಹರಿಸುತ್ತ ವೀರಸ್ವರ್ಗವನ್ನು ಪಡೆಯುತ್ತಿ ದ್ದರು. ಎಷ್ಟೋ ಸಾರೆ ರಾಜಸ್ತಾನದ ಮೇಲೆ ಭೀಷಣ ದಾಳಿಗಳು ನಾಗಿಬಂದವು. ಎಷ್ಟೋ ಸಾರೆ ಯವನರಿಂದ ರಾಜಸ್ತಾನವು ಸುಲಿಗೆ ಮಾಡಲ್ಪಟ್ಟಿತು, ಆದರೆ ರಜ ಪೂತ ರಮಣಿಯರು ಧರ್ಮಕ್ಕೆ ತಮ್ಮ ಸತೀತ್ವರಕ್ಷಣೆಗೆ-ಜಲಾಂಜಲಿಯನ್ನು ಕೊಡಲಿಲ್ಲ. ರಜಪೂತರ ಈ ವಿಶೇಷಗುಣವು ಅವರ ಕೀರ್ತಿಯನ್ನು ಅಕ್ಷಯ ಅಕ್ಷರಗಳಿಂದ ರಕ್ಷಿಸುತ್ತಿರುವದು. ರಜಪೂತರಂತೆ ಸತ್ಯನಿಷ್ಟ ಮನಷ್ಯರು ವಿರಳವೆಂದು ಹೇಳಬಹುದು. ರಜಪೂತರ ಸ್ವಾಭಾವಿಕವಾಗಿ ಆಡಿದ ಮಾತೂ, ಪ್ರತಿಜ್ಞೆಯೂ ಸರಿಯಾಗಿದ್ದಿತು. ರಜಪೂತ ವೀರರು ಸತ್ಯಭಂಗವನ್ನೆಂದೂ ಮಾಡಿಲ್ಲ; ಅದರಿಂದ ಅವರು ಯಾವದಾ ದರೊಂದು ಕಾರ್ಯವನ್ನು ಮಾಡುತ್ತೇವೆಂದು ಹೇಳಿದ ಬಳಿಕ, ಅದನ್ನವರು ಮಾಡ ಲಿಕ್ಕಿಲ್ಲವೆಂಬ ಸಂದೇಹ ತೆಗೆದುಕೊಳ್ಳುವ ಕಾರಣವೇ ಇದ್ದಿಲ್ಲ. ತಮ್ಮ ಬಾಯಿಂದ ಹೊರಟ ಮಾತನ್ನು ಕಡೆಗಾಣಿಸುವದಕ್ಕೆ, ರಜಪೂತರು ತಮ್ಮ ಯಾವತ್ತನ್ನು ಕಳೆ ದುಕೊಳ್ಳು ವದಕ್ಕೆ ಹಿಂದೆಗೆಯುತ್ತಿದ್ದಿಲ್ಲ. ರಜಪೂತರ ಇತಿಹಾಸವನ್ನು ಮೊದಲಿ