ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ೧೨ M ನಿಂದ ಕಡೆಯವರೆಗೆ ಓದಿದರೂ, ಮೋಸ, ಅಸತ್ಯ, ಕೃತಘ್ನತೆಗಳೆಲ್ಲಿಯೂ ದೊರೆ ಯುವಂತಿಲ್ಲ. ರಜಪೂತರ ನೀತಿಶಾಸ್ತ್ರದಲ್ಲಿ ಗುಣಚೋರ ” ( ಕೃತಘ್ನ ) ಮತ್ತು (1 ಸತ್‌ಚೋರ ' ( ವಿಶ್ವಾಸಘಾತಕ ) ರಂತಹ ಪಾತಕಿಗಳು ಬೇರೆ ಯಾರೂ ಇಲ್ಲಿ - ರಜಪೂತರ ಚರಿತ್ರೆಯಲ್ಲಿ ನೀಚತೆಯು ಲೇಶಮಾತ್ರವೂ ದೊರೆಯುವಂತಿಲ್ಲ. ಸದ್ಯದ ಹಿಂದೂ ಜನರಂತೆ ರಜಪೂತರು, ಅತಿಧಿಸೇವೆಯೂ, ಆಿತಪಾಲನವೂ ಮುಖ್ಯ ಧರ್ಮವೆಂದು ತಿಳಿಯುತ್ತಿದ್ದರು ಇವರು ಅತಿಧಿಯನ್ನು ತಪ್ಪದೆ ಸತ್ಕರಿಸು ತಿದ್ದರು, ಶರಣುಬಂದವರಿಗೆ ಆಶ್ರಯ ಕೊಡದೆ ತಿರುಗಿ ಕಳಿಸಿಕೊಡುತ್ತಿದ್ದಿಲ್ಲ. ಶರಣುಬಂದ ಮನುಷ್ಯರ ಪೂರ್ವಾಪರಾಧವು ಎಷ್ಟೇ ಇರಲಿ, ಅದನ್ನು ರಜಿ ಪೂತರು ಎಣಿಸುತ್ತಿದ್ದಿಲ್ಲ, ಅವನ ರಕ್ಷಣೆಗೆ ಬೇಕಾದಷ್ಟು ಆಪತ್ತುಗಳು ಬರುತ್ತಿ ರಲಿ, ಅದನ್ನು ರಜಪೂತರು ಚಿಂತಿಸುತ್ತಿದ್ದಿಲ್ಲ, ಶರಣುಬಂದವನಿಗೆ ಆಶ್ರಯಕೊಡು ವದು ಅವಶ್ಯವಾದದ್ದಂದು ಅವರು ಭಾವಿಸುತ್ತಿದ್ದರು ಅದರಿಂದ ಬೇಕಾದ ಮನುಷ್ಯನು ಹೋದರೂ ಅವರಲ್ಲಿ ತಪ್ಪದೆ ಆಶ್ರಯವನ್ನು ಹೊಂದುತ್ತಿದ್ದನು. ಕ್ಷಮಿಸುವದಕ್ಕೆ ತತ್ಪರರಾಗಿದ್ದ ಇವರಂತಹ ಉದಾರರನ್ನು ನೋಡುವದು ವಿರಳ ಶತ್ರುವಿನ ಅತ್ಯಾಚಾರದಿಂದ ಬೇಕಾದಷ್ಟು ದುಃಖ ಹೊಂದಿರಲಿ, ಆ ಶತ್ರುವು ಸೋಲಲಾಗಿ, ಇಲ್ಲವೆ ಶರಣುಬರಲಾಗಿ ರಜಪೂತರು ಕ್ಷಮಿಸುವದಕ್ಕೆ ತತ್ಪರರು ರಜಪೂತರು ಅನೇಕ ಯುದ್ಧ ಮಾಡಿದ್ದಾರೆ, ದೇಶಗಳನ್ನು ಜಯಸಿದ್ದಾರೆ, ಸುಲಿಗೆ ಮಾಡಿದ್ದಾರೆ, ಆದರೆ ಸ್ತ್ರೀಯರ ಮೇಲೆ ಅತ್ಯಾಚಾರವನ್ನೆಂದೂ ಮಾಡಿಲ್ಲ ಅಧ ರ್ಮಯುದ್ದ ಮಾಡುವದಕ್ಕೂ ದುರ್ಬಲರನ್ನು ಕೊಲ್ಲುವದಕ್ಕೂ ರಜಪೂತರು ಎಂದೂ ಮನಸ್ಸು ಮಾಡಲಿಲ್ಲ ರಜಪೂತರ ಇತಿಹಾಸವು ಮೊದಲಿನಿಂದ ಕಡೆಯವರೆಗೆ, ಅವರ ಆತ್ಮ ಯಜ್ಞದ ಕಥೆಯನ್ನು ಹೇಳುತ್ತದೆ. ಸ್ವಾರ್ಧ ತ್ಯಾಗದ ಉತ್ತಮ ಉದಾಹರಣೆ ಯನ್ನು ತೋರಿಸಿದವರಲ್ಲಿ ಇವರಿಗೆ ಸಮಾನರಾದವರಾರೂ ಇಲ್ಲ ಇವರು ಸ್ವದೇ ಶದ ರಾಜನನ್ನು ದೇವರಂತೆ ತಿಳಿಯುತ್ತಿದ್ದರು, ಜನ್ಮಭೂಮಿಯನ್ನು ತಾಯಿ ಗಿಂತಲೂ ಹೆಚ್ಚಾಗಿ ಭಾವಿಸುತ್ತಿದ್ದರು. ರಾಜನ ಸಲುವಾಗಿ-ದೇಶದ ಸಲುವಾಗಿಜನಾಂಗದ ಸಲುವಾಗಿ ಆತ್ಮವಿಸರ್ಜನೆಮಾಡಿದ ಉದಾಹರಣೆಗಳು, ರಜಪೂತ ಇತಿಹಾಸದ ಪ್ರತಿ ಪುಟಗಳಲ್ಲಿ ಒಡೆದು ಕಾಣುತ್ತಿರುವವು. ( ಕಾರ್ಯಸಾಧನೆ,