ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರು. ೧೩ ಇಲ್ಲವೆ ದೇಹತ್ಯಾಗ ” ವೆಂಬ ನೀತಿಯ ಸತ್ಯತೆಯು ರಜಪೂತರ ಚರಿತ್ರೆಯ ಪ್ರತಿ ಯೊಂದು ಅಕ್ಷರದಲ್ಲಿ ಕಾಣುತ್ತಿರುವದು ಧರ್ಮಪುಲಿಯ ವಿಖ್ಯಾತ ಘಟ್ಟದ ಮಾರ್ಗದಲ್ಲಿ ಸ್ವದೇಶದ ಸಲುವಾಗಿ ಆತ್ಮ ತ್ಯಾಗಮಾಡಿ ಗ್ರೀಕವೀರನಾದ ಅವನಿಡ ಸನು ಜಗದ್ವಿಖ್ಯಾತನಾಗಿದ್ದಾನೆ, ಆದರೆ ರಾಜಸ್ತಾನದಲ್ಲಿ ಧರ್ಮಪುಲಿಯಂತಹ ಯುದ್ಧಗಳಾಗದ ಪ್ರದೇಶವೊಂದೂ ಇಲ್ಲ, ಮತ್ತು ಅವನಿಡಸನಂತಹ ವೀರರು ಹುಟ್ಟಿದ ಹಳ್ಳಿಗಳೂ ಕೂಡ ಇಲ್ಲ. ಒಬ್ಬ ಅವನಿಡಸನ ವೀರತ್ವ ಸಾಹಸಗಳಿಂದ ಜಗತ್ತು ಮುಗ್ಧವಾಗಿದೆ, ಆದರೆ ರಾಜಸ್ತಾನದ ಗಿರಿಕಂದರಗಳಲ್ಲಿಯೂ, ಮರು ಭೂಮಿಯಲ್ಲಿಯೂ ಆದ, ಇಂತಹ ನೂರಾರು ಲಿವನಿಡಸರ ಕೀರ್ತಿಕಥೆಗಳು ಜನರ ಕಣ್ಣಿಗೆ ಸಹ ಬೀಳದೆ, ಹೋಗಿವೆಯೆಂಬದಕ್ಕೆ ಸಂದೇಹವಿಲ್ಲ* ಗ್ರೀಕ ರಂತೆ ರಜಪೂತರ ಐತಿಹಾಸಿಕ ಸ್ಮಾಗ್ರ ವಿವರಣೆಯು ಇಲ್ಲದಿರುವದು ರಜಪೂತರ ದುರ್ದೈವವಾಗಿದೆ. • , ತೃತೀಯ ಪರಿಚ್ಛೇದ. ಇಸಜೀವ ಪೂರ್ವಪುರುಷರು. ಕ್ಷೀರೋದಧಿ ಮಥನದಿ ಬಹು 1 ಸಾರಸದಾರ್ಥಗಳೊಗೆದ ತೆರದಿಂದಲಿ ಮೇ | ಮರದ ರಾಣುವ೦ಶವಿ | ಸುರಗುಣಿಗಳಾದ ಸೇಕ ಜನರುದಯಿಸಿದರf || ೧ || ಸೂರ್ಯವಂಶೀಯ ಶ್ರೀರಾಮಚಂದ್ರನ ಹಿರಿಯ ಮಗನಾದ ಲವನು ತನ್ನ ಹೆಸರಿನಿಂದ ಲವಕೊಟ ಅಧವಾ ಲಾಹೋರವನ್ನು ಸ್ಥಾಪಿಸಿದನು. ಅಲ್ಲಿಂದ ಅವನ ವಂಶಜರಲ್ಲಿ ಕೆಲವರು ಹಿಂದುಸ್ತಾನದ ದಕ್ಷಿಣಕ್ಕೆ ಹೋಗಿ, ಸೌರಾಷ್ಟ್ರ, ವಲ್ಲಭೀಪುರ ಮೊದಲಾದ ರಾಜ್ಯಗಳನ್ನು ಸ್ಥಾಪಿಸಿದರು. ಇವರಲ್ಲಿ ಕನಕಸೇನ

  • 16 There is not a petty state 11 Rajasthan that has not had its Thermspyloe, and scarcely a city that has not produced its Leonidas. But the mantle of ages has shrouded from view what the magic pen of the historian might have consecrated to endless admiration.” Tod's Rajasthan Vol. I, P. 8,

-