ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ , , , , , , , An \ r\ N ನೆಂಬವನು ಮೊದಲು ಜನ್ಮಭೂಮಿಯನ್ನು ಬಿಟ್ಟು, ದಕ್ಷಿಣಕ್ಕೆ ಹೊರಟನೆಂದು ಹೇಳುತ್ತಿರುವರು. ಇವನ ವಂಶದೊಳಗಿನ ಶಿಲಾದಿತ್ಯನೆಂಬ ಹೆಸರಿನ ಅರಸನು ವಲ್ಲಭೀಪುರದ ಅರಸನಾಗಿದ್ದನು. ಈ ಸಮಯದಲ್ಲಿ ಮಧ್ಯ ಏಶಿಯದಿಂದ ಹಣ ಮೊದಲಾದ ಜನಾಂಗದವರು ಬಂದು, ಹಿಂದುಸ್ತಾನವನ್ನು ಪ್ರವೇಶಿಸಿ, ಕೆಲವು ರಾಜ್ಯ ಗಳನ್ನು ತೆಗೆದುಕೊಂಡು, ಅಧಿಕಾರ ನಡಿಸತೊಡಗಿದರು. ಇವರು ಶಿಲಾದಿತ್ಯನನ್ನು ಸೋಲಿಸಿ ಕೊಂದರು, ಮತ್ತು ರಾಜಧಾನಿಯಾದ ವಲ್ಲಭೀಪುರವನ್ನು ಸಂಪೂರ್ಣ ವಾಗಿ ನಾಶಮಾಡಿದರುಈ ಸಮಯದಲ್ಲಿ ಶಿಲಾದಿತ್ಯನ ಹೆಂಡತಿಯಾದ ಪುಷ್ಪ ವತಿಯು ಗರ್ಭವತಿಯಾಗಿದ್ದಳು. ಅವಳು ದೂರದಲ್ಲಿರುವರೊಂದು ಭವಾನೀ ಗುಡಿಗೆ ದೇವತಾದರ್ಶನಕ್ಕಾಗಿ ಹೋದ್ದರಿಂದ, ಶತ್ರುಗಳ ಕೈಯಿಂದ ಪಾರಾದಳು. ಅವಳು ತಿರುಗಿ ಬರುವಾಗ, ಹಾದಿಯಲ್ಲಿಯೇ ಹೂಣರ ಅತ್ಯಾಚಾರಗಳನ್ನು ಕೇಳಿ, ಅಧೀರಳಾದಳು ಅವಳು ಪರ್ವತದ ಒಂದು ಗುಹೆಯನ್ನಾಶ್ರಯಿಸಿ, ಅಲ್ಲಿ ಒಂದು ಗಂಡು ಕೂಸನ್ನು ಹಡೆದಳು ಆ ಹುಡುಗನು ಗುಹೆಯಲ್ಲಿ ಹುಟ್ಟಿದ್ದರಿಂದ ಅವನಿಗೆ ಗುಹಾದಿತ್ಯ, ಅಧವಾ ಗೋಹನೆಂಬ ಹೆಸರು ಬಂದಿತು ಮೇವಾಡದ ರಜಪೂತರು ಈ ಗುಹಾದಿತ್ಯನ ವಂಶದವರಾದ್ದರಿಂದ ಅವರು ಗುಹಿಲೋಟ್ ವಂಶಜರೆಂದು ಪರಿಚಿತರಾದರು. ಪುಷ್ಪವತೀ ರಾಣಿಯು ಸದ್ಯಃ ಪ್ರಸೂತ ಕೂಸನ್ನು ಕಮಲಾವತಿಯೆಂಬ ಒಬ್ಬ ಬ್ರಾಹ್ಮಣಿಯ ಕೈಯಲ್ಲಿ ಕೊಟ್ಟು, ಚಿತಾರೋಹಣಮಾಡಿ ಪ್ರಾಣಬಿಟ್ಟಳು. ಮುಂದೆ ಗುಹಾದಿತ್ಯನು ಆ ಬ್ರಾಹ್ಮಣನ ಮನೆಯಲ್ಲಿ ಬ್ರಾಹ್ಮಣರ ಮಕ್ಕಳಂತೆ ಪಾಲಿತನಾಗತೊಡಗಿದನು. ಸಾಧಾರಣ ಜನರು ಅವನನ್ನು ಬ್ರಾಹ್ಮಣನೆಂದು ತಿಳಿ ಯುತ್ತಿದ್ದರು. ಆ ಗುಹಾದಿತ್ಯನ ಮಗನು ಬಾಪ್ಪಾದಿತ್ಯ, ಅಧವಾ ಬಾಪ್ಪಾರಾವ ಳನು ... ಚಿತೋಡದ ಶಿಲಾಲಿಪಿಯಿಂದ ಈ ಬಾಪ್ಪಾರಾವಳನು ಬ್ರಾಹ್ಮಣನಿದ್ದ 8 ಗುಹಾದಿತ್ಯನಿಗೆ ಗುಹಿಲನೆಂಬ ಹೆಸರಿದ್ದಂತೆಯ ಕಂಡುಬರುವದು ಇವನ ವಂಶಜರು ಗುಹಿಲಪುತ್ರ, ಗೋಲವುತ್ರ ಮೊದಲಾದ ಹೆಸರುಗಳಿಂದಲೂ ಪರಿಚಿತರಾಗಿದ್ದಾರೆ ರಾಣಾ ಕುಂಭನ ಕಾಲದಲ್ಲಿಯು ಏಕಲಿಂಗ ದೇವಸ್ಥಾನದಲ್ಲಿರುವದೊಂದು ಶಿಲಾಲಿಪಿಯಲ್ಲಿ ಬರೆದದ್ದೇ ನಂದರೆ 14 ಜಯತಿ ಶ್ರೀಗುಹದ ಪ್ರಭವಃ ಶ್ರೀಗುಹಿಲವಂಶಸ್ಯ >> - J A S. B. 1909 P P. 172, 180. ಈ ಗುಹಾದಿತ್ಯನ ತರುವಾಯ ಈ ವಂಶದ ಎಂಟು ಜನರು ಇದರ ಪ್ರದೇಶದಲ್ಲಿ ಅಜ್ಞಾತ ವಾಸದಿಂದ ಕಾಲಕಳೆದರೆ೦ದು ಟಾಡ್ ಸಾಹೇಬರು ಹೇಳಿದ್ದಾರೆ. ಇವರಲ್ಲಿಯ ಕಡೆಯವನ