ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವಪುರುಷರು ೧೬ – ೧rA - r u r f * *

  • *
  • * *

/ tv r V r 2 vv - A / ಗಿ ಬಾಹುಷನ ತರುವಾಯ ಈ ವಂಶದಲ್ಲಿ ಭೀಮಸಿಂಹನು ಹೆಸರಾದನು. ಇವನು ತನ್ನ ಅಣ್ಣನ ಅಲ್ಪವಯಸ್ಸಿನ ಬಾಲಕನನ್ನು ಪಟ್ಟಕ್ಕೆ ಕುಳ್ಳಿರಿಸಿ, ತಾನೇ ರಾಜ್ಯ ಕಾರಭಾರ ಸಾಗಿಸುತ್ತಿದ್ದನು. ಈ ಸಮಯದಲ್ಲಿ ದಿಲೀಶ್ವರನಾದ ಅಲ್ಲಾವು ದ್ವೀನನು ಚಿತೋಡದ ಮೇಲೆ ಮೊದಲನೆಯ ಸಾರೆ ದಂಡೆತ್ತಿ ಬಂದನು. ಈ ಸಾರೆ ಪರಾಣರು ಭೀಮಸಿಂಹನ ಹೆಂಡತಿಯಾದ ಸತೀ ಪದ್ವಿನಿಯ ಕೌಶಲ್ಯದಿಂದ ಅಪಮಾನಿತರಾಗಿ ಯಾವ ಲಾಭವನ್ನು ಹೊಂದದೆ, ಹಿಂದಿರುಗಿ ಹೋಗಬೇಕಾ ಯಿತು, ಆದರೆ ತುಸು ದಿವಸಗಳಲ್ಲಿ ಅಲ್ಲಾವುದ್ದೀನನು ಬಹು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಬಂದು, ಪುನಃ ಚಿತೋಡವನ್ನಾಕ್ರಮಿಸಿದನು. ಈ ಸಾರೆ ರಾಣಾ ಲಕ್ಷಣಸಿಂಹನು ತನ್ನ ಮಕ್ಕಳೊಡನೆ ರಣಭೂಮಿಯಲ್ಲಿ ಪ್ರಾಣಬಿಟ್ಟನು. ಆದರೂ ಚಿತೋಡದ ರಕ್ಷಣೆಯಾಗಲಿಲ್ಲ; ಅಲ್ಲಾವುದ್ದೀನನು ಕೋಟೆಯನ್ನು ಕೈವಶ ಮಾಡಿಕೊಂಡು, ಅಮಾನುಷಕ ಅತ್ಯಾಚಾರಗಳನ್ನು ಮಾಡಿದನು. ರಾಣಾನ ಒಬ್ಬ ಮಗನು ತನ್ನ ಪರಿವಾರದೊಡನೆ ಓಡಿಹೋಗಿದ್ದನು. ಮುಂದೆ ಕೆಲವು ದಿವಸಗಳಾದ ಮೇಲೆ ರಾಣಾನ ಮೊಮ್ಮಗನಾದ ಹಮೀರನು ಚಿತೋಡದ ಪುನ ರುದ್ದಾರ ಮಾಡಿದನು. ಹಮೀರನ ವೀರತ್ವದ ಕತೆಯು, ರಾಜಸ್ಥಾನದ ಇತಿಹಾ ಸದಲ್ಲಿ ಬಹು ಗೌರವವನ್ನು ಪಡೆದಿದೆ ಮುಂದೆ ಸುಮಾರು ನೂರು ವರುಷಗಳಾದ ಮೇಲೆ, ಸಿಂಹಾಸನಕ್ಕೆ ಬಂದ ರಾಣಾ ಕುಂಭನು, ಚಿತೋಡದ ರಾಜರಲ್ಲಿ ಹೆಸರಾಗಿ ಹೋದನು. ಇವನ ಆಳಿಕೆ ಯಲ್ಲಿ ಮಾಳವ-ಗುಜರಾಧಗಳ ಅರಸನು ಬಹು ಸೈನ್ಯದೊಡನೆ ಮೇವಾಡದ ಮೇಲೆ ದಂಡೆತ್ತಿ ಬಂದನು. ರಾಣಾನು ಇವನನ್ನು ಸಂಪೂರ್ಣವಾಗಿ ಸೋಲಿಸಿ, ಬಂದಿಯನ್ನಾಗಿ ಮಾಡಿದನು. ಈ ಸಂಗತಿಯ ಸ್ಮಾರಕಕ್ಕಾಗಿ ರಾಣಾನು ಚಿತೋ ಡದಲ್ಲಿ ಬಹು ಕೌಶಲ್ಯದಿಂದ ನಿರ್ಮಿತವಾದ ಒಂದು ಜಯಸ್ತಂಭವನ್ನು ಕಟ್ಟಿಸಿ ದ್ದಾನೆ. ಇದು ಈ ವರೆಗೂ ಅದೆ. ಇದರ ಹೊರತು ಇವನ ಸಮಯದ ಇನ್ನು ಅನೇಕ ಕೀರ್ತಿಮಂದಿರಗಳಿವೆ. ಮೇವಾಡದ ರಕ್ಷಣೆಗಾಗಿರುವ ೮೪ ಕೋಟೆ ಗಳಲ್ಲಿ ೩೨ ಕೋಟೆಗಳನ್ನು ಇವನು ಕಟ್ಟಿಸಿದನೆಂದು ಹೇಳುತ್ತಿರುವರು. ಪ್ರಖ್ಯಾ ತವಾದ ಕುಂಭಮೇರು ಅಥವಾ ಕಮಲಮೂರ ದುರ್ಗವು ಇವನ ಕೀರ್ತಿಯನ್ನು ಈ ವರೆಗೂ ಸಾರಿ ಹೇಳುತ್ತಲಿದೆ. ಈ ಕಮಲಮಿರ ಕೋಟೆಯ ವಿಷಯವಾಗಿ ನಾವು ಮುಂದೆ ಹೇಳುವೆವು.