ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಮಹಾರಾಣಾ ಪ್ರತಾಪ ಸಿಂಹ •••• + 2 / / P+++ + + + 1/2 ಕ! "+ v // • • ಗಳುಂಟಾದವು ಇದೊಳ್ಳೆ ಸಮಯವೆಂದು ಭಾವಿಸಿ, ಗುಜರಾಧದ ಮುಸಲ್ಮಾನ ಅರಸನು ಮೇವಾಡದ ಮೇಲೆ ದಂಡೆತ್ತಿ ಬಂದು, ಎರಡನೆಯ ಸಾರೆ ಚಿತೋಡ ವನ್ನು ಧ್ವಂಸಮಾಡಿದನು. ತುಸು ದಿವಸಗಳಲ್ಲಿ ಸಂಗ್ರಾಮಸಿಂಹನ ತಮ್ಮನ ಮಗ ನಾದ ಬಿನಬೀರನು ಸರದಾರರ ಸಹಾಯದಿಂದ ಸಿಂಹಾಸನವನ್ನೇರಿದನು; ಯಾ ಕಂದರೆ ರಾಣಾ ವಿಕ್ರಮಜಿತನು ಬಹಳ ಕೆಟ್ಟ ಅರಸನಾಗಿದ್ದನು. ಈ ಸಮಯದಲ್ಲಿ ಸಂಗ್ರಾಮಸಿಂಹನ ಆರು ವರ್ಷದ ಮಗನೊಬ್ಬನಿದ್ದನು. ಇವನ ಹೆಸರು ಉದಯ ಸಿಂಹನೆಂಬದಾಗಿತ್ತು. ಇವನು ದೊಡ್ಡವನಾಗುವ ವರೆಗೆ ಬನಬೀರನು ರಾಜ್ಯ ಕಾರಭಾರ ಸಾಗಿಸಬೇಕೆಂದು ಸರದಾರರು ಗೊತ್ತು ಮಾಡಿದ್ದರು; ಆದರೆ ದುಷ್ಟ ನಾದ ಬನಬೀರನು ಸಂಗ್ರಾಮಸಿಂಹನ ವಂಶವನ್ನು ನಾಶಮಾಡಿ, ಶಾಶ್ವತವಾದ ಸಿಂಹಾಸನವನ್ನು ಪಡೆಯಬೇಕೆಂದು ಇಚ್ಚಿಸಿದನು. ಅದಕ್ಕಾಗಿ ಅವನು ರಾಣಾ ವಿಕ್ರಮಜಿತನನ್ನು ಕೊಂದು, ರಕ್ತದಿಂದ ಕೂಡಿದ ಕೈಗಳಿಂದ ಉದಯಸಿಂಹನ ಶಯನಗೃಹವನ್ನು ಹೊಕ್ಕನು. ಉದಯಸಿಂಹನ ರಕ್ಷಣೆಯ ಭಾರವನ್ನು ಮನ್ನಾ ಎಂಬ ದಾಸಿಯು ವಹಿಸಿದ್ದಳು. ಈ ಉದಾರಹೃದಯಳಾದ ದಾಸಿಯ ಅನಾ ಮಾನ್ಯ ಸ್ವಾರ್ಧ ತ್ಯಾಗದಿಂದ ಉದಯಸಿಂಹನು ಜೀವಿಸಿದನು. ಪನ್ನಾ ದಾಸಿಗೆ ಒಬ್ಬ ಮಗನಿದ್ದನು ಇವನು ಉದಯಸಿಂಹನ ಓರಿಗೆಯವನಾಗಿದ್ದನು ಇವರಿ ಬ್ಬರೂ ಮಲಗಿದ್ದರು ಪನ್ನಾ ದಾಸಿಯು ಬನಬೀರನು ಬರುವದಕ್ಕಿಂತ ಮೊದಲೇ, ತನ್ನ ಮಗನನ್ನು ಉದಯಸಿಂಹನ ಹಾಸುಗೆಯ ಮೇಲೆ ಮಲಗಿಸಿ, ಉದಯಸಿಂಹ ನನ್ನು ಎರಡನೆಯ ಕಡೆಗೆ ಕಳುಹಿಸಿದಳು. ನೀಚ ಬನಬೀರನು ದಾಸಿಯ ಮಗ ನನ್ನು ಕೊಂದನು. ಉದಯಸಿಂಹನು ರಕ್ಷಣೆಯನ್ನು ಹೊಂದಿದನು. ದೈವೀ-ಸ್ವಭಾವದ ಪನ್ನಾ ದಾಸಿಯು ಉದಯಸಿಂಹನನ್ನು ತೆಗೆದುಕೊಂಡು ಓಡಿಹೋದಳು. ಪನ್ನಾ ದಾಸಿಯಂಧ ಅಲೌಕಿಕ ಗುಣಗಳುಳ್ಳ ಸ್ತ್ರೀರತ್ನವನು: ಹುಟ್ಟಿಸಿದ ರಜಪೂತಜಾತಿಯ ಹೃದಯಬಲದ ಉನ್ನತಿಯನ್ನು ವರ್ಣಿಸಲು ಭಾಷೆ ಯಲ್ಲಿ ಶಬ್ದಗಳಿಲ್ಲ ರಾಜನ ಸಲುವಾಗಿ ಪ್ರಜೆಗಳ ಕರ್ತವ್ಯವೇನು ? ಒಡೆಯನ ಸಲುವಾಗಿ ಸೇವಕನ ಕೆಲಸವೇನು ? ಎಂಬದನ್ನು ಪನ್ನಾ ದಾಸಿಯು ತನ್ನ ಕೃತಿ ಯಿಂದ ಸಾರಿಹೇಳಿದ್ದಾಳೆ. ಉದಯಸಿಂಹನ ರಕ್ಷಣೆಯಾಗದಿದ್ದಲ್ಲಿ ಮಹಾರಾಣಾನ ಪವಿತ್ರ ವಂಶವು ಅಳಿದು ಹೋಗುತ್ತಿದ್ದಿತು. ಪನ್ನಾ ದಾಸಿಯು ಕುಲರಕ್ಷಣೆಯನ್ನು ಮಾಡಿ, ಪ್ರತಾಪಸಿಂಹನಂತಹ ಮಹಾ ಪರಾಕ್ರಮಿಯನ್ನು ಹುಟ್ಟಿಸುವದಕ್ಕೆ ಕಾರ