ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮವೂ ಬಾಲ್ಯವೂ ೨೫ ಶಕ್ತನು ಮೇವಾಡಕ್ಕೆ ಕಲಂಕಸ್ವರೂಪನಾಗುವನೆಂದು, ಅವನ ಜನ್ಮ ಪತ್ರಿಕೆ ಯಲ್ಲಿ ನಿರ್ಧರಿಸಲ್ಪಟ್ಟಿತ್ತು. ಉದಯಸಿಂಹನು ಈ ಕಾರಣದಿಂದ ಶಕ್ತಸಿಂಹನ ವಿಷ ಯವಾಗಿ ವಿರಕ್ತನಾಗಿದ್ದನು. ಶಕ್ತನು ಐದು ವರ್ಷದವನಿದ್ದಾಗ ಒಂದು ಹೊಸ ಕತ್ತಿಯು ತಯಾರಾಗಿ ಬಂದಿತು. ಇದರ ತೀಕ್ಷಧಾರೆಯನ್ನು ಪರೀಕ್ಷೆ ಮಾಡುವ ದಿತ್ತು. ಈ ಸಮಯದಲ್ಲಿ ಶಕ್ತನು, ಶಸ್ತ್ರಕಾರನಿಂದ ಕತ್ತಿಯನ್ನು ಕಿತ್ತು ಕೊಂಡು, ತಂದೆಯನ್ನು ಕೇಳಿದ್ದೇನಂದರೆ - ಶರೀರವನ್ನು ಕೊಯ್ದಲ್ಲವೇ ಶಸ್ತದ ಧಾರೆ ಯನ್ನು ಪರೀಕ್ಷೆ ಮಾಡುವದು ? ” ಕೂಡಲೇ ಶಕ್ತನು ತನ್ನ ಅಂಗುಲಿಯ ಮೇಲೆ ಆ ಆಯುಧವನ್ನು ಪ್ರಯೋಗಿಸಿಕೊಂಡನು. ಗಾಯವಾದ ಸ್ಥಳದಿಂದ ರಕ್ತವು ಹೊರಚಿಮ್ಮ ಹತ್ತಿತು; ಆದರೆ ಬಾಲಕನ ಮುಖದಲ್ಲಿ ವೇದನೆಯ ದುಃಖದ ಲೇಶ ಮಾತ್ರ ಚಿನ್ಗವೂ ಕಾಣಬರಲಿಲ್ಲ ಎಲ್ಲರೂ ಸ್ತಬ್ದ ರಾಗಿ ಕುಳಿತುಬಿಟ್ಟರು; ಆದರೆ ಉದಯಸಿಂಹನಿಗೆ ಸಿಟ್ಟು ಬಂದಿತು ಅವನು ಜಾತಕಪತ್ರದ ವಿಷಯವಾಗಿ ವಿಚಾ ರಿಸಿಯಾಗಲಿ, ಅಥವಾ ಬೇರೆ ಕಾರಣಗಳಿಂದಾಗಲಿ ಮಗನ ತಲೆ ಕಡೆಯುವ ಅಪ್ಪಣೆ ಮಾಡಿದನು; ಆದರೆ ಸಾಲುಂಬ್ರದ ಸರದಾರನು ಇದು ಸರಿಯಲ್ಲವೆಂದು ಉದಯಸಿಂಹನಿಗೆ ಹೇಳಿ, ಬಾಲಕ ಶಕ್ತನ ಪ್ರಾಣವನ್ನು ಬದುಕಿಸಿದನು. ಪ್ರತಿವರುಷ ವಸಂತಾಗಮನದ ಪ್ರಾರಂಭದಲ್ಲಿ ರಾಜಸ್ತಾನದಲ್ಲಿ ಆಹೇ ರಿಯಾ ' ಎಂಬೊಂದು ಮಹೋತ್ಸವವಾಗುತ್ತಿರುವದು. ಈ ದಿವಸದ ಬೇಟೆಯ ಪರಿಣಾಮದಿಂದ ಆ ಸಂವತ್ಸರದ ಯುದ್ಧ ಮೊದಲಾದವುಗಳ ಪರಿಣಾಮವನ್ನೂ ದೇಶದ ಶುಭಾಶುಭಗಳನ್ನೂ ಗೊತ್ತು ಮಾಡುತ್ತಿದ್ದರು. ಅದರಿಂದ ಈ ದಿವಸ ಪ್ರತಿ ಯೊಬ್ಬ ರಜಪೂತವೀರನು ಬೇಟೆಯಲ್ಲಿ ತನ್ನ ಯಾವಚ್ಛಕ್ತಿಯನ್ನು ಪ್ರಯೋಗಿಸ ಲಿಕ್ಕೆ ಉತ್ಸುಕನಾಗಿರುತ್ತಿದ್ದನು ಪ್ರತಾಪ-ಶಕ್ತರೂ, ಇವರ ತಮ್ಮಂದಿರೂ ಪ್ರತಿ ವರುಷ ಮಹೋತ್ಸಾಹದಿಂದ ಈ ವೀರೋತ್ಸವದಲ್ಲಿ ಕೂಡುತ್ತಿದ್ದರು; ಮತ್ತು ವೀರಶ್ರೇಷ್ಠರಾರೆಂಬದನ್ನು ನಿರ್ಧರಿಸುವದಕ್ಕೆ ತಮ್ಮ ಯಾವತ್ತು ಬಲವನ್ನು ಪಯೋಗಿಸುತ್ತಿದ್ದರು. - ರಜಪೂತರನ್ನು ವೀರಧರ್ಮದಲ್ಲಿ ಉತ್ಸಾಹಿತರನ್ನಾಗಿ ಮಾಡುವದಕ್ಕಾಗಿ, ಪೂರ್ವದ ವೀರರ ಕೀರ್ತಿಯನ್ನು ಹೊಗಳುತ್ತ ಮನೆಮನೆ ಅಡ್ಡಾಡುತ್ತಿರುವವರಿಗೆ ಚಾರಣರೆಂದು ಹೆಸರು. ಈಗಲೂ ಈ ಚಾರಣರುಂಟು. ಶತ್ರುಗಳು ದಂಡೆತ್ತಿ ಬಂದಾಗ-ಯುದ್ಧವು ಸಮೀಪಿಸಿದಾಗ ಈ ಚಾರಣರ ವೀರರಸಪದ್ಯಗಳು ರಜ