ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕಬರ ಬಾದಶಹ TvYfY IMA+ * •v vv +

  • *

ಕ್ಯಾಗಿಯೂ ಪಶ್ಚಾತ್ತಾಪಪಟ್ಟನು. ಅವನು ಶಕ್ತನಿಗೆ ಮೇವಾಡವನ್ನು ಬಿಟ್ಟು ಹೋಗಲಿಕ್ಕೆ ಅಪ್ಪಣೆಮಾಡಿದನು. ಅಣ್ಣನ ಅಪ್ಪಣೆಯಂತೆ ಶಕ್ತನು ಹೋಗಿ ಡಂಬಟ್ಟನು. ಅದರಿಂದ ಈರ್ವರು ಬಂಧುಗಳು ಅಗಲಿದರು. ಶಕ್ತಸಿಂಹನು ಸೇಡಿಗಾಗಿ, ರಜಪೂತರ ಚಿರಶತ್ರುಗಳಾದ ಮೊಗಲರನ್ನು ಶರಣುಹೊಕ್ಕನು ( ೧೫೬೭). ಪ್ರತಾಪನು ಪುರೋಹಿತನ ಅಂತೇಷ್ಟಿಕ್ರಿಯೆಯನ್ನು ಯಧಾವಿಧಿಯಾಗಿ ಮಾಡಿಸಿದನು, ಮತ್ತು ಅವನ ಮಕ್ಕಳಿಗೆ ಸಾಕಷ್ಟು ಭೂಮಿಯನ್ನು ಇನಾಮಾಗಿ ಹಾಕಿಕೊಟ್ಟನು. ಪಂಚಮ ಪರಿಚ್ಛೇದ. Al0 ಅಕಬರ ಬಾದಶಹ, ಕಾಕ: ಕೃಷ್ಣ ಪಿಕ: ಕೃಷ್ಣ ಕೋ ಭೇದಃ ಪಿಕ ಕಾಕಯೋಃ | ವಸಂತಾಗಮೇ ಪ್ರಾಸ್ತ್ರೀ ಕಾಕ ಕಾಕ ಪಿಕಃ ಪಿಕಃ | ೧ || ಸುಭಾಷಿತ ರಾಣಾ ಸಂಗನ ಮೃತ್ಯುವಿನ ತರುವಾಯ ತುಸು ದಿವಸಗಳಲ್ಲಿ ಅವನ ಪ್ರತಿ ಸ್ಪರ್ಧೆಯೂ, ಮೊಗಲರ ರಾಜ್ಯವನ್ನು ಸ್ಥಾಪಿಸಿದವನೂ ಆದ ಬಾಬರನು ತೀರಿ ಕೊಂಡನು (೧೫೩೦). ಇವನ ತರುವಾಯ ಇವನ ಮಗನಾದ ಹುಮಾಯನನು ಪಟ್ಟಕ್ಕೆ ಕೂತನು. ಹುಮಾಯುನನು ಸುಮಾರು ೯ ವರ್ಷ ರಾಜ್ಯ ಕಾರಭಾರ ಮಾಡಿ ದ ಮೇಲೆ, ಬಂಗಾಲದ ನವಾಬನಾದ ಶೇರಶಹನಿಂದ ಕನೋಜದ ಯುದ್ಧದಲ್ಲಿ ಪರಾಜಿತನಾದನು (೧೫೪೦ನೇ ಮೇ ); ಮತ್ತು ರಾಜ್ಯ ಬಿಟ್ಟು ಓಡಿಹೋದನು. ತರುವಾಯ ಶೇರಶಹನ ಜಯಶಾಲಿಗಳಾದ ಸೈನಿಕರು ದಿಲ್ಲಿಯನ್ನು ಆಕ್ರಮಿಸಿ, ಹುಮಾಯನನನ್ನು ಬೆನ್ನಟ್ಟಿದರು. ಹುಮಾಯನನು ನಾನಾ ಸ್ಥಳಗಳಲ್ಲಿ ತಿರುಗಾಡಿ ಕಡೆಯಲ್ಲಿ ತನ್ನ ತುಸು ಸೈನಿಕರೊಡನೆ ಆಶ್ರಯದ ಆಶೆಯಿಂದ ಮಾರವಾಡಕ್ಕೆ ಬಂದನು; ಆದರೆ ಅಲ್ಲಿ ಆಶ್ರಯವು ದೊರೆಯಲಿಲ್ಲ; ಯಾಕಂದರೆ ಮಾರವಾಡದ ಅರಸನಾದ ಮಲ್ಲದೇವನು ಶಿಕ್ರಿಯ ಕಾಳಗದಲ್ಲಿ ತನ್ನ ಹಿರಿಯ ಮಗನಾದ ರಾಯ