ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಮಹಾರಾಣಾ ಪ್ರತಾಪ ಸಿಂಹ More vvM ಮಲ್ಲನನ್ನು ಕಳಕೊಂಡಿದ್ದನು; ಅದರಿಂದ ಅವನು ಮೊಗಲರ ಮೇಲೆ ಅತಿಶಯ ಸಿಟ್ಟಾಗಿದ್ದನು; ಕಾರಣ ಅವನು ರಜಪೂತರ ಚಿರಧರ್ಮನ್ನು ಮೀರಿ, ಶರಣುಬಂದ ವನಿಗೆ ಆಶ್ರಯ ಕೊಡಲಿಲ್ಲ. ಇಷ್ಟೇ ಅಲ್ಲ, ಅವನು ಹುಮಾಯನನನ್ನು ಕೆರೆಯಲ್ಲಿ ಹಿಡಿಯುವದಕ್ಕೆ ಯತ್ನಿಸಿದನು ಹುಮಾಯನನು ಮಲ್ಲದೇವನ ಈ ದುಷ್ಟ ಆಚ ರಣೆಯನ್ನೆಂದೂ ಮರೆಯಲಿಲ್ಲ ಮಲ್ಲದೇವನ ಈ ಹೀನಕೃತ್ಯದ ಸಲುವಾಗಿ ಇಡೀ ರಜಪೂತಸ್ತಾನವೇ ಪ್ರಾಯಶ್ಚಿತ್ತವನ್ನು ಅನುಭವಿಸಬೇಕಾಯಿತು ಹುಮಾಯನನು ಮಾರವಾಡದಲ್ಲಿ ಆಶ್ರಯಹೊಂದದೆ ಅತಿ ಕಷ್ಟದಿಂದ ಮರುಭೂಮಿಯನ್ನು ದಾಟಿ, ಅಮರಕೋಟಕ್ಕೆ ಮುಟ್ಟಿದನು. ಅಲ್ಲಿಯ ಅರಸ ನಾದ ರಾಣಾ ಪ್ರಸಾದನು ಅವನಿಗೆ ಆಶ್ರಯಕೊಟ್ಟನು. ಈ ಸ್ಥಳದಲ್ಲಿ ಹುಮಾ ಯನನ ಪೂರ್ಣ ಗರ್ಭಿಣಿ ಹೆಂಡಿತಿಯಾದ ಹಮಿದಾಬಾನು ಬೇಗಮಳು ಒಂದು ಗಂಡು ಕೂಸನ್ನು ಹೆತ್ತಳು (೧೫೪೨). ಈ ಹುಡುಗನ ಹೆಸರು ಜಲಾಲ-ಉದ್ದಿ ನ-ಮಹಮ್ಮದ ಅಕಬರ. ಉದಯಸಿಂಹನು ಚಿತೋಡದ ಸಿಂಹಾಸನವನ್ನು ಹೊಂದಿದ ದಿವಸವೇ ಅಕಬರನು ಹುಟ್ಟಿದನು. ಹುಮಾಯುನನು ಅಮರಕೋಟದಿಂದ ಅಫಗಾಣಿಸ್ತಾನದಲ್ಲಿ ಅಲೆದು ಆಶ್ರಯ ಹೊಂದದೆ, ತರುವಾಯ ಇರಾಣಕ್ಕೆ ಓಡಿಹೋದನು ಅಲ್ಲಿ ಹದಿಮೂರು ವರ್ಷಗಳವರೆಗೆ ನಾನಾ ವಿಧವಾದ ಸಂಕಟಗಳನ್ನು ಅನುಭವಿಸಿ, ಒಂದು ದಳ ಸೈನಿಕರೊಡನೆ ಹಿಂದುಸ್ತಾನಕ್ಕೆ ತಿರುಗಿಬಂದನು. ಈ ಸಮಯದಲ್ಲಿ ಶೇರಶಹನ ಮನೆತನದ ಒಬ್ಬ ನಿರ್ಬಲ ಅರಸನು ಸೂತ್ರದ ಗೊಂಬೆಯಂತೆ ಸಿಂಹಾಸನದ ಮೇಲೆ ಕೂತಿದ್ದನು ಮತ್ತು ಚಿತೋಡದಲ್ಲಿ ರಾಣಾ ಉದಯಸಿಂಹನು ಬಹಳ ಅವ್ಯವಸ್ಥೆಯಿಂದ ರಾಜ್ಯ ಕಾರಭಾರ ಸಾಗಿಸುತ್ತಿದ್ದನು. ಉದಯಸಿಂಹನು ಒಬ್ಬ ವಾರವಿಲಾಸಿನಿಗೆ ಮರುಳಾಗಿ, ರಜಪೂತಧರ್ಮವನ್ನು ಮರೆತುಬಿಟ್ಟಿದ್ದನು. ಒಂದು ವೇಳೆ, ಈ ವೇಳೆಯಲ್ಲಿ ಸಂಗ್ರಾಮಸಿಂಹನಂತಹ ಪರಾಕ್ರಮಿಯಾದ ರಾಣಾನು ಚಿತೋಡದ ರಾಜಶಾಸನವನ್ನು ವಹಿಸಿದ್ದರೆ, ಶೇರ-ಶಹನ ವಂಶಜರು ದಿಲ್ಲಿಯನ್ನಾಳ ಲಿಕ್ಕೆಂದೂ ಸಮರ್ಧರಾಗುತ್ತಿದ್ದಿಲ್ಲ ಮತ್ತು ಹುಮಾಯನನು ಪುನಃ ರಾಜ್ಯಗಳಿ ಸುವ ಕಲ್ಪನೆಯನ್ನು ತೆಗೆದುಕೊಂಡು ಭಾರತಕ್ಕೆಂದೂ ಬರುತ್ತಿದ್ದಿಲ್ಲ. ಅದು ಹೇಗೇ ಇರಲಿ; ಹುಮಾಯನನು ಬಂದು, ತಂದೆಯ ರಾಜ್ಯವನ್ನು ದೊರಕಿಸಿದನು; ಆದರೆ ಬಹುಕಾಲ ರಾಜ್ಯಭೋಗಮಾಡುವದು ಅವನ ದೈವದ ಬ.