ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕಬರಬಾದಶಹ ೨ AvvvvvM ಲ್ಲಿರಲಿಲ್ಲ. ಅದರಿಂದ ಅವನು ತೀವ್ರವೇ ಮರಣಹೊಂದಿದನು. ಅವನ ತರು ವಾಯ ಅವನ ಮಗನಾದ ಅಲ್ಪ ವಯಸ್ಸಿನ ಅಕಬರನು ಸಿಂಹಾಸನವನ್ನೇರಿದನು (೧೫೫೬ ); ಮತ್ತು ಮುಂದೆ ತುಸು ದಿವಸಗಳಲ್ಲಿ ಯಾವತ್ತೂ ರಾಜ್ಯಸೂತ್ರಗ ಳನ್ನು ತನ್ನ ಕೈಯಲ್ಲಿಟ್ಟು ಕೊಂಡು, ದೇಶದಲ್ಲಿ ಸುವ್ಯವಸ್ಥೆಯನ್ನುಂಟುಮಾಡಿದನು. ಹುಮಾಯನನು ಮಲ್ಲದೇವನ ನೀಚತನವನ್ನು ಮರೆತಿರಲಿಲ್ಲ; ಆದರೆ ಸೇಡು ತೀರಿಸಿಕೊಳ್ಳುವದರ ಮೊದಲೇ ಅವನು ತೀರಿಕೊಂಡನು. ಈಗ ಅವನ ಬಲ ಶಾಲಿಯಾದ ಮಗನು ತನ್ನ ತಂದೆಯ ವೈರಿಯನ್ನು, ಶಿಕ್ಷಿಸುವ ಉದ್ಯೋಗಕ್ಕೆ ತೊಡಗಿದನು. ರಾಠೋರ ಜಾತಿಯ ಅರಸನಾದ ಮಲ್ಲದೇವನಿಗೆ ಯೋಗ್ಯ ಶಿಕ್ಷೆ ಯನ್ನು ವಿಧಿಸುವದಕ್ಕಾಗಿ ಅಕಬರನ ತಾಯಿಯು ಮಗನಿಗೆ ಉತ್ತೇಜನಕೊಟ್ಟಳು. ಅಕಬರನು ಬಹು ಸೈನ್ಯದೊಡನೆ, ಮಾರವಾಡದ ಮೇಲೆ ದಂಡೆತ್ತಿ ಬಂದನು. ಅಕಬರನು ತನ್ನ ಸೇನಾನಿವಾಸವನ್ನು ಅಜಮೀರದಲ್ಲಿ ಸ್ಥಾಪಿಸಿದನು. ಅವನು ಮೊದಲು ಮೈರ್ತಾದುರ್ಗವನ್ನು ಆಕ್ರಮಿಸಿದನು (೧೫೬೨). ಈ ಸಮ ಯದಲ್ಲಿ ಅಂಬರದ ರಾಜನಾದ ಬಿಹಾರಿಮಲ್ಲನೂ, ಅವನ ಮಗನಾದ ಭಗವಾನ ದಾಸನೂ ಅಕಬರನ ಸ್ವಾಮಿತ್ವವನ್ನೊಪ್ಪಿಕೊಂಡರು. ಅಕಬರನು ಬಿಹಾರಿಮಲ್ಲನ ಒಬ್ಬ ಮಗಳನ್ನು ಲಗ್ನ ಮಾಡಿಕೊಂಡನು. ರಜಪೂತರಲ್ಲಿ ಯವನರ ಸ್ವಾಮಿತ್ವವ ನೊಪ್ಪಿಕೊಂಡು, ಅವರಿಗೆ ಕನ್ಯದಾನಮಾಡಿ, ರಜಪೂತಕುಲವನ್ನು ಕಲಂಕಿತ ವನ್ನಾಗಿ ಮಾಡಿದವರಲ್ಲಿ, ಬಿಹಾರಿಮಲ್ಲನೇ ಮೊದಲಿನವನು. ಈ ವೇಳೆಯಲ್ಲಿ ರಾಜಧಾನಿಯಲ್ಲಿ ಬಂಡಾಯವೆದ್ದುದರಿಂದ, ಅಕಬರನು ತಿರುಗಿ ರಾಜಧಾನಿಗೆ ಹೋಗಬೇಕಾಯಿತು. ಮುಂದೆ ನಾಯ್ತು ವರ್ಷಗಳಾದ ಮೇಲೆ, ಪುನಃ ರಾಜಸ್ತಾನದ ಮೇಲೆ ದಂಡೆತ್ತಿ ಬಂದನು. ಈ ಸಾರೆ ನಾಗರ ಮೊದಲಾದವು, ಅಕಬರನ ಹಸ್ತಗತವಾದವು. ಅವನು ಮಾರವಾಡವನ್ನು ನಾಲ್ಕೂ ದಿಕ್ಕಿನಿಂದ ಮುತ್ತಿಗೆ ಹಾಕಿದನು. ಬಿಕಾನೇರದ ಅರಸನಾದ ರಾಯಸಿಂಹನು ಅಕಬರನ ಹಸ್ತಗತನಾದ್ದರಿಂದ, ಅಕಬರನಿಗೆ ಮೈರ್ತಾ, ನಾಗರ, ಮಲ್ಲಕೊಟ ಮೊದಲಾದ ಕೋಟೆಗಳು ಸ್ವಾಧೀನವಾದವು. ಮಲ್ಲದೇವನು ನಾನಾಕಡೆಯಲ್ಲಿ ಸೋತು, ಅಕಬರನ ಆಧೀನತ್ವವನ್ನೊಪ್ಪಿಕೊಂಡನು. ಅಕಬರನು ಮಲ್ಲದೇವನ ಮಗಳಾದ ಜೋಧಬಾಯಿಯನ್ನು ವಿವಾಹಮಾಡಿಕೊಂಡನು. ತನ್ನ ಶತ್ರುವಾದ ಮಾಳವದ ಮುಸಲ್ಮಾನ ಅರಸನು ಮಹಾರಾಣಾನ ಆಶ್ರಯದಲ್ಲಿದ್ದುದರಿಂದ, ಅಕಬರನು