ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪ ಸಿಂಹ ೩೦ M••••••••••••• •w wಂಗಿಸಿ ಮಹಾರಾಣಾನ ಮೇಲೆ ಸಿಟ್ಟಾಗಿ, ದೊಡ್ಡ ಸೈನ್ಯದೊಡನೆ, ಚಿತೋಡವನ್ನು ಮುತ್ತಿದನು (೧೫೬೭). ಅಕಬರ ಮತ್ತು ಉದಯಸಿಂಹರಲ್ಲಿ ಅನೇಕ ಸಾಮ್ಯಗಳವೆ. ರಾಜ್ಯವನ್ನು ಕಳಕೊಂಡ ಹುಮಾಯನನ ಪಲಾಯನ ಕಾಲದಲ್ಲಿ ಅನೇಕ ಕಷ್ಟ-ವಿಪತ್ತುಗಳ ಮಧ್ಯದಲ್ಲಿ ಅಕಬರನು ಜನಿಸಿದನು ಅವನ ಬಾಲ್ಯವು ಶತ್ರುಗಳ ದೇಶದಲ್ಲಿ ಅರಣ್ಯದಲ್ಲಿ ಕಳೆದುಹೋಯಿತು ಅದರಂತೆ ಉದಯಸಿಂಹನು ದಾಸಿಯ ಕೃಪೆ ಯಿಂದ ಜೀವರಕ್ಷಣೆಹೊಂದಿದನು; ಮತ್ತು ನಾನಾ ಸ್ಥಾನಗಳಲ್ಲಿ ಅನೇಕ ವಿಪತ್ತು ಗಳಿಂದ ಪಾರಾಗಿ, ಕಡೆಯಲ್ಲಿ ಪರ್ವತಪ್ರದೇಶದಲ್ಲಿ ಅಜ್ಞಾತವಾಸದಿಂದ ಕಾಲ ಕಳೆದನು ಅಕಬರನು ಹದಿನೈದು ವರುಷದ ವಯಸ್ಸಿನಲ್ಲಿ ತಂದೆಯ ಸಿಂಹಾಸನ ವನ್ನೇರಿದನು, ಅದರಂತೆ ಉದಯಸಿಂಹನು ಸುಮಾರು ಅಷ್ಟೇ ವಯಸ್ಸಿನಲ್ಲಿ ರಾಜ್ಯಾಭಿಷೇಕ ಹೊಂದಿದನು. ಆದರೆ ಉದಯಸಿಂಹನ ಜೀವನಗತಿಯು ಭಿನ್ನ ಭಾವದಿಂದ ಪರಿವರ್ತಿತವಾಯಿತು. ಅಕಬರನು ತಂದೆಯ ಸಿಂಹಾಸನವನ್ನು ಏರುವದಕ್ಕೆ ಯೋಗ್ಯಮನುಷ್ಯ ನಾಗಿದ್ದನು, ಯಾಕಂದರೆ ತುಸು ದಿವಸಗಳಲ್ಲಿಯೇ ಅವನು ತನ್ನ ಕೃತಿಗಳಿಂದ ಇದನ್ನು ತೋರಿಸಿಕೊಟ್ಟನು; ಆದರೆ ಉದಯಸಿಂಹನು ಇದಕ್ಕೆ ವಿಪರೀತನಾಗಿ ದ್ದನು. ರಜಪೂತ ಸರದಾರರು ತಮ್ಮ ಯಾವತ್ತು ಶಕ್ತಿಯನ್ನು ಪ್ರಯೋಗಿಸಿ, ಉದಯಸಿಂಹನಿಗೆ ತಂದೆಯ ರಾಜ್ಯವನ್ನು ಕೊಡಿಸಿದರು, ಆದರೆ ಈ ಪದಕ್ಕೆ ಅವನು ಉಪಯುಕ್ತನಿರಲಿಲ್ಲ. ಅಕಬರನು ಸಿಂಹಾಸನಕ್ಕೆ ಕೂತ ತರುವಾಯ, ಭುಜಬಲದಿಂದಲೂ, ಬುದ್ದಿ ಬಲದಿಂದಲೂ ಒಂದರಹಿಂದೊಂದು ದೇಶಗಳನ್ನು ಜಯಸಿ, ಉತ್ತರಹಿಂದುಸ್ತಾನದಲ್ಲಿ ಮೊಗಲರ ಶಕ್ತಿಯನ್ನು ಬೆಳಿಸಿದನು; ಮತ್ತು ಕುಶಲತೆಯಿಂದ ಪರರ ಪ್ರೀತಿಯನ್ನುಂಟುಮಾಡಿಕೊಂಡು ಜನರಲ್ಲಿ ಶ್ರೇಷ್ಠನೆನ್ನಿಸಿ ಕೊಂಡನು. ಆದರೆ ಉದಯಸಿಂಹನು ದುರ್ಭೇದ್ಯ ಚಿತೋಡದುರ್ಗದಲ್ಲಿದ್ದರೂ, ರಾಜನಿಷ್ಠರಾದ ಅನೇಕ ಸರದಾರರ ಸಹಾಯವಿದ್ದರೂ ಯಾವ ಉತ್ತಮ ಕಾರ್ಯ ಮಾಡಲಿಕ್ಕೂ ಸಮರ್ಧನಾಗಲಿಲ್ಲ. ಮತ್ತು ಇವನು ವಿಲಾಸಕ್ಕೆ ಮೆಚ್ಚಿ, ರಾಣಾ ಸಂಗ್ರಾಮಸಿಂಹನ ರಾಜ್ಯವನ್ನು ದುರ್ಬಲಮಾಡಿ, ಕಡೆಯಲ್ಲಿ ಚಿತೋಡ ರಾಜಿ ಧಾನಿಯಿಂದ ಓಡಿಹೋಗಿ, ಅತಿ ಕಷ್ಟದಿಂದ ಏನೂ ಮಾಡದೆ ಕಡೆಯ ಆಯು