ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿತೋಡ ನಗರ. ವ್ಯವನ್ನು ಮುಗಿಸಿದನು. ಅಕಬರನ ಪ್ರತಿಭೆಯಿಂದ ಅನೇಕ ಹೊಸರಾಜ್ಯಗಳೂ, ರಾಜಧಾನಿಗಳೂ ಕೈವಶವಾದವು; ಆದರೆ ಉದಯಸಿಂಹನ ದೋಷದಿಂದ, ಬಹುಕಾಲದಿಂದ ನಡೆದುಬಂದ ರಜಪೂತರ ರಾಜಧಾನಿಯು ಕೈಯಿಂದ ಜಾರಿ ಹೋಯಿತು. ಷಷ್ಠನ ಪರಿಚ್ಛೇದ. ಚಿತೋಡ ನಗರ. ವರಗಿರಿಯಲ್ಲಿ ವಾಸಿಸಿ ಸಮಂತುಪಸರ್ವಡದಿರ್ಸಕೋಟೆಯಿ೦ | ನೆರೆಪರಿವೇಷ್ಟಿತು, ಸಕಲಸಂಪದಪೂರಿತವಾಗಿ ಶೋಭೆಯಿ೦ || ದಿರದೆ ಸಮಸ್ತಭಾರತದಿ ವೀರರಭೂಮಿಯಿದೆ೦ಬ ಪೇರ್ಮೆಯಿಂ | ಮೆರೆದ ಚಿತೋಡವಿಂದು ಸಲೆ ಶೂನ್ಯವಾಗಿದೆ ದೇವಲೀಲೆಯಿಂ || ೧ || ಚಿತೋಡವು ಮೇವಾಡದ ಪೂರ್ವ ಭಾಗದಲ್ಲಿರುವ ಒಂದು ದೊಡ್ಡ ಪಟ್ಟಣ ವಾಗಿದೆ. ಬಾಪ್ಪಾರಾವಳನು ಇದನ್ನು ಮೊದಲು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು (೭೨೮), ಈ ಸಮಯದಿಂದ ಅಕಬರಬಾದಶಹನ ಕಾಲದವರೆಗೆ, ಅಂದರೆ ಸುಮಾರು ಎಂಟುನೂರು ವರುಷಗಳವರೆಗೆ ಇದು ಮೇವಾಡದ ರಾಜ ಧಾನಿಯಾಗಿದ್ದಿತು. ಬಾಪ್ಪಾರಾವಳನ ಪೂರ್ವದಲ್ಲಿ ಇದು ಜೈನಧರ್ಮದ ಒಂದು ಮುಖ್ಯ ದೇವಸ್ಥಾನವಾಗಿದ್ದಿತು. ಇದರ ಪ್ರಾಚೀನ ಕುರುಹುಗಳೂ, ಶಿಲಾಲಿಸಿ ಗಳೂ ಈಗಲೂ ಅವೆ.* ಚಿತೋಡವು ಅರವಲೀ ಪರ್ವತಾವಳಿಯಿಂದ ದೂರದಲ್ಲಿರುವದೊಂದು ಸಣ್ಣ ಗುಡ್ಡದ ಮೇಲಿರುವದು # ಈ ಗುಡ್ಡದ ಮೇಲಿನ ಪ್ರದೇಶವು ಸುಮಾರು

  1. Garrick's Tour 11 the Punjab and Rajputana P. 103, Tod's Rajasthan Vol II Personal narrative8, P. 647, ಇಲ್ಲಿ ೭೫ಪೂಟು ಎತ್ತರವಾದುದೊಂದು ಜೈನರ ಸ್ತಂಭವು ಈಗಲೂ ಅದೆ, ಫಗು ಸನ್ ಸಾಹೇಬರು ಇದರ ವರ್ಣ ನೆಯನ್ನು ಮಾಡಿದ್ದಾರೆ, Rajaputaya Gazetteer, Vol III P. 51.
  2. ನಿಮಚದಿಂದ ನಸಿರಾಬಾದಕ್ಕೆ ಹೋಗುತ್ತಿರುವ ರಾಜಮಾರ್ಗದ ಪಾರ್ಶ್ವದಲ್ಲಿ ಚಿತೋಡದ ಗುಡ್ಡವಿರುವದು ಚಿತೋಡವು ಬಾಂಬೆ ಬಡೋದಾ ಮತ್ತು ಮಧ್ಯ ಹಿಂದುಸ್ತಾನ ರೇಲ್ವೆಯ ಒಂದು ಮುಖ್ಯ ಸ್ನೇಶನವು.