ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಮಹಾರಾಣಾ ಪ್ರತಾಪಸಿಂಹ •MMMM ನಾಲ್ಕು ಮೈಲು ಉದ್ದ, ಅರ್ಧ ಮೈಲು ಅಗಲವಿರುವದು. ಇದರ ಕೆಳಗಿನ ಸುತ್ತಳ ತೆಯು ಸುಮಾರು ಎಂಟು ಮೈಲಿರುವದು. ಚಿತೋಡಕೋಟೆಯ ಕೆಳಗಿನ ಭೂಮಿ ಯು ಸಮುದ್ರಸಪಾಟಿಯಿಂದ ೧೩೦೦ ಸೂಟು ಎತ್ತರದಲ್ಲಿದೆ; ಮತ್ತು ಸಮಭೂಮಿ ಯಿಂದ ಚಿತೋಡದ ಎತ್ತರವು ೪೫೦ ಸೂಟ ಅದೆ. ಪರ್ವತದ ಎಡಬಲಭಾಗ ಗಳಲ್ಲೆಲ್ಲ ಕಡೆಯಲ್ಲಿಯೂ ಭಯಂಕರವಾದ ಅಡವಿಗಳು ಹಬ್ಬಿವೆ; ಮತ್ತು ದುರಾ ರೋಹವಾದ ಚಿತೋಡನಗರವು ಸುಮಾರು ಐದು ಹರದಾರಿಯನ್ನು ವ್ಯಾಪಿಸಿದ ದುರ್ಭೇದ್ಯ ಗೋಡೆಗಳಿಂದ ಸುತ್ತುಗತ್ತಲ್ಪಟ್ಟಿದೆ. ಈ ಮೇರೆಗೆ ಈ ಪಟ್ಟಣವು ಸ್ವಾಭಾವಿಕ ಅನುಕೂಲತೆಗಳಿಂದಲೂ, ಮನುಷ್ಯ ಕೌಶಲದಿಂದಲೂ ರಕ್ಷಿಸಲ್ಪಟ್ಟ ದ್ದರಿಂದ, ಇದು ಬಹು-ದಿವಸಗಳವರೆಗೆ ಶತ್ರುಗಳ ಕೈಯಿಂದ ಪಾರಾಯಿತು ದುರ್ಗವನ್ನು ಪ್ರವೇಶಮಾಡುವದಕ್ಕಾಗಿ ಮೂರು ತೋರಣದ್ವಾರಗಳುಂಟು. ಉತ್ತರ ದಿಕ್ಕಿನಲ್ಲಿ ಲಕ್ಷಪೋಲವಿರುವದು. ಇದೊಂದು ಕಿರಿ ಅಗಲವಾದ ಎತ್ತರದ ಹಾದಿಯಿಂದ ಕೋಟೆಯನ್ನು ಪ್ರವೇಶಿಸುವ ಬಾಗಿಲವು. ಈ ಬಾಗಿಲವು ಯಾವಾ ಗಲೂ ಮುಚ್ಚಲ್ಪಟ್ಟಿರುವದು ಪೂರ್ವದಿಕ್ಕಿನಲ್ಲಿ ಪರ್ವತದ ಮೇಲ್ಬಾಗದಲ್ಲಿ ಒಂದು ದ್ವಾರವಿರುವದು. ಇದಕ್ಕೆ ಸೂರ್ಯಪೋಲವೆಂದು ಹೆಸರು. "ಈ ಬಾಗಿಲಕ್ಕೆ ಬಂದುಮುಟ್ಟುವ ಮಾರ್ಗವಾದರೂ ದುರಾರೋಹವೂ, ಕಡಿಮೆ ಅಗಲಾದದ್ದೂ ಅದೆ. ಆದರೂ ಸಾಹಸದಿಂದ ಈ ಮಾರ್ಗವಾಗಿ ಕೋಟೆಯಲ್ಲಿ ಪ್ರವೇಶಮಾಡ ಬಹುದಾಗಿದೆ. ಕಾರಣ ಈ ಮಾಗದಿಂದ ಶತ್ರುಗಳು ಕೋಟೆಯನ್ನೇರಿ ಬರಬಹು ದಾಗಿದೆ. ಅದರಿಂದ ವೈರಿಗಳು ಸಾಗಿಬಂದ ಕಾಲದಲ್ಲಿ, ನೀರಶ್ರೇಷ್ಠ ನೋರ್ವನು ತನ್ನ ಅನುಚರರೊಡನೆ ಈ ಬಾಗಿಲ ಕಾಯುವ ಕೆಲಸವನ್ನು ಕೈಕೊಳ್ಳುತ್ತಿದ್ದನು' ಚಿತೋಡದ ಮುಖ್ಯದ್ವಾರವು ಪಶ್ಚಿಮದಿಕ್ಕಿನಲ್ಲಿರುವದು. ಈ ಬಾಗಿಲಕ್ಕೆ ಬಂದು ಮುಟ್ಟುವ ದಾರಿಯು ವಿಸ್ತಾರವಾದದ್ದೂ, ಕ್ರಮದಿಂದ ಏರುತ್ತ ಹೋಗುವದೂ, ಸುಂದರವೂ ಇದೆ. ಈ ರಾಜಮಾರ್ಗದಿಂದ ಸಾಮಾನುಗಳು, ಚಕ್ಕಡಿಗಳು, ಕುದು ರೆಗಳು, ಜನರು ಕೋಟೆಯಲ್ಲಿ ಪ್ರವೇಶಿಸಬಹುದಾಗಿದ್ದಿತು. ಆದರೆ ಶತ್ರುಗಳ ಹಾವಳಿಯಿಂದ ಚಿತೋಡವನ್ನು ರಕ್ಷಿಸುವದಕ್ಕಾಗಿ-ವೈರಿಗಳು ಈ ಮಾರ್ಗದಿಂದ ಏರಿಬರಲಿಕ್ಕೆ ತೊಂದರೆಯಾಗಬೇಕೆಂದು, ಕೆಳಗಿನಿಂದ ಮೇಲಿನವರೆಗೆ ಈ ಮಾರ್ಗ ದಲ್ಲಿ ಮತ್ತೆ ಏಳು ಬಾಗಿಲಗಳಿವೆ. ಈ ದ್ವಾರಗಳಲ್ಲಿ ಪಾಯದಲಸೋಲವೆಂಬದು ಎಲ್ಲಕ್ಕೂ ಕೆಳಗಿನದು. ಇಲ್ಲಿಂದ ಹಾದಿಯು ಕ್ರಮವಾಗಿ ಎತ್ತರವಾಗುತ್ತ ಹೋಗಿ