ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿತೋಡ ನಗರ. My www vv Y - 2 tv vv •/y ದ್ದು, ಉತ್ತರಮುಖವಾಗಿ ಸಾಗಿದೆ. ಈ ದಿಕ್ಕಿನಿಂದ ಮುಂದಕ್ಕೆ ಹೋದರೆ, ಭೈರವ ಸೋಲನ್ನು ದಾಟಿ, ಹನುಮಾನ್‌ಸೋಲಿಗೆ ಮುಟ್ಟುವೆವು. ಈ ಹನುಮಾನ್‌ಸೋ ಲವು ಮುಖ್ಯಸ್ಥಳವು. ಶತ್ರುಗಳ ಆಕ್ರಮಣವನ್ನು ತಡೆಯುವದಕ್ಕಾಗಿ ಈ ಸ್ಥಳ ದಲ್ಲಿ ಅನೇಕ ಭೀಷಣ ಯುದ್ಧಗಳಾಗಿವೆ. ಹನುಮಾನ್‌ಸೋಲಿನಿಂದ ದಾರಿಯು ದಕ್ಷಿಣಕ್ಕೆ ಸಾಗಿದೆ. ಈ ಮಾರ್ಗವಾಗಿ ಮುಂದೆ ಸಾಗಿದರೆ, ಗಣೇಶಸೋಲ, ಝರಣಾಸೋಲ ಹತ್ತುವವು. ಮುಂದೆ ಹಾದಿಯು ಮತ್ತೆ ಉತ್ತರಾಭಿಮುಖವಾಗಿ ರುವದು. ಈ ಹಾದಿಯ ಮಧ್ಯದಲ್ಲಿ ಲಕ್ಷಣದೋಲ, ಕಡೆಯಲ್ಲಿ ರಾಮಮೋಲ ವುಂಟು. ಪ್ರತಿಯೊಂದು ಬಾಗಿಲದ ಎಡಬಲಗಳಲ್ಲಿ ಸೈನಿಕರು ಇರುವದಕ್ಕಾಗಿ ಕೆಲವು ಸುರಕ್ಷಿತ ಮನೆಗಳಿದ್ದವು. ರಾಮಸೋಲನ್ನು ದಾಟಿದ ಬಳಿಕ ಕೋಟೆ ಯೊಳಗೆ ಪ್ರವೇಶವಾಗುವದು. ಚಿತೋಡದ ಕೋಟೆಯು ಯಾವತ್ತು ಪಟ್ಟಣವನ್ನೊಳಗೊಂಡಿದೆ. ಚಿತೋ ಡವು ಜನಭರಿತವಾಗಿದ್ದಾಗ ಇದರ ಸುದಿವಸದ ಸಮಯದಲ್ಲಿ ಕೋಟೆಯಲ್ಲಿ ಸಾಕಷ್ಟು ಆಹಾರ್ಯಪದಾರ್ಥಗಳ ಸಂಚಯವಿರುತ್ತಿತ್ತು. ಕೆಲವು ಯಾವಾಗಲೂ ಹರಿಯುವ ಝರಿಗಳೂ, ಬಾವಿಗಳೂ ದುರ್ಗವಾಸಿಗಳಿಗೆ ನೀರಿನ ಪೂರೈಕೆಯ ನ್ನುಂಟುಮಾಡುತ್ತಿದ್ದವು. ಇದರಿಂದ ಶತ್ರುಗಳು ಕೋಟೆಯನ್ನು ಬಹುಕಾಲದ ವರೆಗೆ ಮುತ್ತಿದರೂ, ಒಳಗಿನ ಜನರಿಗೆ ಅನ್ನ-ನೀರುಗಳ ಕೊರತೆಯುಂಟಾಗುತ್ತಿರ ಲಿಲ್ಲ. ಪರ್ವತಾವಳಿಯ ಮೇಲೆ ನಿರ್ಮಿತವಾದ ಪಟ್ಟಣಗಳಲ್ಲಿ ಅತಿವೃಷ್ಟಿ, ಶೀತಾ ಧಿಕ್ಯ ಮೊದಲಾದ ಅಡಚಣಿಗಳಿರುವ ಸಂಭವವುಂಟು, ಆದರೆ ಬೈಲಿನಲ್ಲಿರುವ ದೊಂದು ಗುಡ್ಡದ ಮೇಲೆ ಇರುತ್ತಿರುವದರಿಂದ ಚಿತೋಡದಲ್ಲಿ ಈ ತರದ ತೊಂದ ರೆಗಳಿರಲಿಲ್ಲ. ಕಾರಣ ಸಮಶೀತೋಷ್ಣ ಹವೆಯುಳ್ಳ ಈ ಪಟ್ಟಣದಲ್ಲಿ ಜನರು ಆರೋಗ್ಯವಂತರಾಗಿ ಸುಖದಿಂದಿದ್ದರು; ಮತ್ತು ಸುತ್ತಲೂ ಇರುವ ನಯನ ಮನೋಹರ ಪ್ರಕೃತಿಯ ಸೌಂದರ್ಯವನ್ನು ನೋಡಿ, ಪರಮಾನಂದಭರಿತ ರಾಗುತ್ತಿದ್ದರು. ಈ ಘನವನಗಳುಳ್ಳ ಇಳಿಜಾರಾದ ಭೂಮಿಯ ಸಸಿಗಳಿಂದ ಹಸರುಬಣ್ಣ ದಿಂದೊಷ್ಟುವ ಸಮನೆಲದ ಕೇಂದ್ರಸ್ಥಾನವಾದ ಚಿತೋಡದಲ್ಲಿ ನೂರಾರು ವರುಷ ಗಳಿಂದ ನಿರ್ಮಿತವಾದ ಅರಮನೆ, ದೇವಮಂದಿರ, ಜಯಸ್ತಂಭಾದಿಗಳ ಸೌಂದ ರ್ಯವು ಅತೀವ ಮನೋಹರವಾಗಿದ್ದಿತು. ಈಗ ಆ ಚಿತೋಡವು ಸ್ಮಶಾನ