ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ M ಮಹಾರಾಣಾ ಪ್ರತಾಪಸಿಂಹ • • • • +Y ( ? • • vv vv vvvvvv* ಭೂಮಿಯಾಗಿದೆ. ಕಾಲನ ಕಠೋರ ಕೈಯಿಂದಲೂ ಶತ್ರುಗಳ ಅಮಾನುಷಿಕ ಅತ್ಯಾಚಾರಗಳಿಂದಲೂ ನಾಶವಾದ ಈ ಪಟ್ಟಣದ ಉಪ್ಪರಿಗೆಗಳ ಎಣಿಕೆಯನ್ನು ಮಾಡಲಿಕ್ಕೆ ಬರುವಂತಿಲ್ಲ ಉಲ್ಲಾವುದ್ದೀನನೂ, ಬಹದ್ದೂರಶಹನೂ ಚಿತೋಡ ವನ್ನಾಕ್ರಮಿಸಿ, ಇದರ ಬಹು ಸೌಂದರ್ಯವನ್ನು ನಾಶಮಾಡಿದ್ದಾರೆ ಅಕಬರ ಬಾದಶಹನ ಅತ್ಯಾಚಾರದ ಕಥೆಯನ್ನು ನಾವು ಮುಂದೆ ಹೇಳುವೆವು. ಸಾಮ್ರಾಟ ಔರಂಗಜೇಬನು ಇದನ್ನು ನೋಡಲಿಕ್ಕೆ ಬಂದಾಗ, ಇವನ ಅಪ್ಪಣೆಯಿಂದ ಚಿತೋ ಡದ ೬೩ ಸುಂದರ ಮಂದಿರಗಳು ನಾಶವಾದವು * ಈ ಯಾವತ್ತು ಕಾರಣಗ ಳಿಂದ ಈ ಸಮಯದಲ್ಲಿ ಚಿತೋಡವನ್ನು ನೋಡಿದ್ದಾದರೆ, ಅತ್ತಿತ್ತ ಬಿದ್ದ ಕಲ್ಲು ರಾಶಿಗಳೂ, ಅಸಂಖ್ಯ ಭಗ್ನಗೃಹಗಳೂ ಕಣ್ಣಿಗೆ ಬೀಳುವವು. ಇಂದು ಚಿತೋ ಡವು ನಿರಾಭರಣಳಾದ ವಿಧವೆಯ ಅವಸ್ಥೆಯನ್ನು ಹೊಂದಿದೆ. ಇದರ ಸುದಿವಸ ಗಳಲ್ಲಿ ಇದರಲ್ಲಿಯ ಅಪೂರ್ವನೋಟವನ್ನು ಅವಲೋಕಿಸಿದ್ದಾದರೆ, ಇಂತಹ ಸುಂದರವೂ ದುರ್ಭೇದ್ಯವೂ ಆದ ರಾಜಧಾನಿಯು ಹಿಂದುಸ್ತಾನದಲ್ಲಿ ಬೇರೊಂದಿಲ್ಲ. ವೆಂದು ಹೇಳಬಹುದಾಗಿದ್ದಿತು ಭಗ್ನಾವಸ್ಥೆಯಲ್ಲಿರುವ ಚಿತೋಡದಲ್ಲಿ ಈಗಲೂ ಕಲ್ಲಿನಿಂದ ಕಟ್ಟಿದ ಎಷ್ಟೋ ಮನೆಗಳು ಕಣ್ಣಿಗೆ ಬೀಳುತ್ತಿರುವವು. ಈ ಪಟ್ಟಣದಲ್ಲಿ ಸದ್ಯ ಪ್ರೇಕ್ಷಣೀಯವಾದ ಸ್ಥಳಗಳಲ್ಲಿ ಕುಂಭರಾಣಾನ ವಿಜಯಸ್ತಂಭವೂ, ಮುಕುಲಜೇಯ ಮಂದಿರವೂ, ಶಿಂಗಾರಚೌರಿಯೂ ಮುಖ್ಯವಾಗಿವೆವಿಜಯಸ್ತಂಭದ ವಿಷಯವಾಗಿ ನಾವು ಹಿಂದೆ ಹೇಳಿದ್ದೇವೆ. ಈ ಕಲ್ಲಿನಿಂದ ಕಟ್ಟಿದ ಕಂಬವು ಒಂಬತ್ತು ಅಂತಸ್ತುಗಳುಳ್ಳ ಬ್ಲಾಗಿ, ೧೨೨ ಸೂಟು ಎತ್ತರವಾಗಿದೆ. ಇದು ದಿಲ್ಲಿಯ ಕುತುಬಮಿನಾರಕ್ಕೆ ಸರಿ * * Mas1r-1-Alangiri P. 189, quoted by Professor J. N. Sarkar • IIzstory of Aurangzeb ” Vol III P. 323

  • ಟಾಡ್ ಸಾಹೇಬರ ಓರ್ವ ಚರಣಕವಿಯ ಒಂಭತ್ತನೇ ಶತಮಾನದಲ್ಲಿ ರಚಿತವಾದ « ಖೋಮಾನರಾಸಾ ಎಂಬ ಗಾದೆಯ ಆಧಾರದಿಂದ ತೋರಿಸಿಕೊಟ್ಟಿದ್ದೇನಂದರೆ-of all the royal abodes of India pone could compete with chi tor before she became a ' widow " Rajasthan, Personal narratives Vol. II P. 642. CC Travellers do not speak of any fortress like this 11 the whole habitable world 'Tarikh-1-316, Ellist Vol

V P. 1700