ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&೬ ಮಹಾರಾಣಾ ಪ್ರತಾಪಸಿಂಹ, ರವು, ಶೀರ್ಷಸ್ಥಾನದಲ್ಲಿ ಚಿತೋಡದ ವಿಶ್ವವಿಶ್ರುತ ಕೋಟೆಯನ್ನು ಹೊತ್ತು ಕೊಂಡು ನಿಂತಿರುವ ಅಕ್ಷಯವಾದ ಆ ಶ್ರೇಷ್ಠ ಪರ್ವತವು ಬಾಪ್ಪಾರಾವಳನ ಕೀರ್ತಿಶೇಷರಾದ ವಂಶಜರ ಕೀರ್ತಿಸ್ತಂಭಸ್ವರೂಪವಾಗಿ ಅನಂತಕಾಲದವರೆಗೆ ಹೀಗೆಯೇ ನಿಂತುಕೊಳ್ಳುವದರಲ್ಲಿ ಸಂದೇಹವಿಲ್ಲ.* ಸಪ್ತನು ಪರಿಚ್ಛೇದ. ನಿ ಭಸ್ಮಿಭೂತ ಚಿತೋಡ, ಸುಂದರ ಪದಾರ್ಥಗಳ ಸ್ವ | ಶೃಂದದ ನೀಚರನು ಮೋಹಗೊಳಿಪುದಯೋಗ್ಯಂ | ಇಂದಲ್ಲದೊಡೆ ಯವನರಿ- { ಸಂದಾ ಚಿತ್ತೂರದೇಕೆ ಭಸ್ಮಿಭೂತಂ || ೧ || ದುರ್ಭೇದ್ಯ ಚಿತೋಡದುರ್ಗವು ಬಹು ದಿಗ್ವಿಜಯವೀರರ ಲೋಲುಪ ದೃಷ್ಟಿಯನ್ನು ಆಕರ್ಷಿಸಿದೆ. ರಜಪೂತರ ವೀರತ್ವದ ಖ್ಯಾತಿಯೊಡನೆ, ಶತ್ರುಗಳ ಮನಸ್ಸಿನಲ್ಲಿ ಇದನ್ನು ಜಯಿಸಬೇಕೆಂಬ ಆಕಾಂಕ್ಷೆಯೂ ಬಳೆಯಿತು. ಆಗಿನ ಕಾಲ ದಲ್ಲಿ ಚಿತೋಡವನ್ನು ವಶಮಾಡಿಕೊಳ್ಳುವದು ಬಹು ಕಠಿಣವೆಂದೆಣಿಸಲ್ಪಡುತ್ತಿತ್ತು. ಅದರಿಂದ ಇದನ್ನು ಕೈವಶಮಾಡಿಕೊಂಡ ಅರಸನು ಭಾರತದಲ್ಲಿ ವಿಖ್ಯಾತನಾಗುವ ನೆಂಬದರಲ್ಲಿ ಸಂದೇಹವಿದ್ದಿಲ್ಲ. ಕಾರಣ ಚಿತೋಡವು ಅನೇಕ ಸಾರೆ ನಾಶವಾ ಗಿದೆ. ಅಕಬರ ಬಾದಶಹನು ಚಿತೋಡದ ನಾಶವನ್ನು ಮಾಡಿದವರಲ್ಲೊಬ್ಬನು.

  • Who could look on this lovely, this imajestic column, which tells, 11n language more easy of interpretatiou thau the tablets within, of

-deeds which should not pass away, And names that must not wither, And with hold a sigh for its departed glories? But in vain I dipped my pen to em body my thoughts in language, for wherever the eye fell, it filled the inind with images of the past and ideas rushed too tumultuously to be recorded. "- Tod's Rajasthan Vol II P.642.