ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಮಹಾರಾಣಾ ಪ್ರತಾಪಸಿಂಹ ••••••••••••••••• •//++ * • • , ನೆಯ ಪೂರ್ಣ ನಾಶವು ಈ ಸಮಯದಲ್ಲಿ ಹುಮಾಯನನು ದಿಲ್ಲಿಯ ಬಾದಶಹ ನಾಗಿದ್ದನು. ಈ ಸಮಯದಲ್ಲಿ ಸಂಗನ ಪತ್ನಿಯಾದ ಕರ್ಣಾವತಿಯು ಹುಮಾಯನನನ್ನು ಸಹಾಯಕ್ಕಾಗಿ ಬೇಡಿಕೊಂಡಳೆಂದು ಆಖ್ಯಾಯಿಕೆಯದೆ. ಅವಳು ರಜಪೂತರ ಆಚರಣೆಗಳಂತೆ, ಹುಮಾಯನನನ್ನು ಸಹೋದರನೆಂದು ಸಂಬೋಧಿಸಿ, ಅವನಿಗೆ ರಾಖಿಯನ್ನು ಕಳಿಸಿಕೊಟ್ಟಳು. ಯಾವನೊಬ್ಬನು ರಜಪೂತರಮಣಿಯ ರಾಖಿ ಯನ್ನು ಸ್ವೀಕರಿಸಿದನೆಂದರೆ ಅವನು ಆ ಲಲನೆಯ ಸಹೋದರನೆಂದು ಆಗ ಕಲ್ಪನೆ ಯಿತ್ತು ಹುಮಾಯನನು ಕರ್ಣಾವತಿಯ ರಾಖಿಯನ್ನು ಸ್ವೀಕರಿಸಿ, ರಾಣಾನ ರಾಜ್ಯ ರಕ್ಷಣೆಯ ಸಲುವಾಗಿ ಸಸೈನ್ಯ ಹೊರಟನು. ಆದರೆ ಇವನು ಮುಟ್ಟುವ ಮೊದಲೇ ಚಿತೋಡವು ಪೂರ್ಣ ನಾಶವಾಗಿತು. ಬಹದ್ದೂರಶಹನು ಹುಮಾಯ ನನ ಭಯದಿಂದ ತಿರುಗಿ ತನ್ನ ದೇಶಕ್ಕೆ ಹೋದನು. ತರುವಾಯ ಚಿತೋಡದ ಪುನರುದ್ಧಾರವಾಯಿತು. ಒಂದು ಕಾಲದಲ್ಲಿ ಹುಮಾಯನನಿಂದ ರಕ್ಷಿತವಾದ ಚಿತೋಡವನ್ನು, ಅಕ ಬರನು ಧ್ವಂಸಮಾಡುವ ಇಚ್ಛೆಯನ್ನು ಧರಿಸಿದನು ಅದರಿಂದ ಅಕಬರನ ಚಿತೋ ಡದ ಆಕ್ರಮಣವು ಅವನ ಚರಿತ್ರೆಯಲ್ಲಿ ಕಲಂಕಸ್ವರೂಪವಾಗಿದೆ. ರಾಖೀಬಂಧ ನದಿಂದ ಉದಯಸಿಂಹನು ಆಪ್ತನಾಗಿದ್ದನು. ಆದರೆ ಕೀರ್ತಿಯ ಅಭಿಲಾಷೆಯಾದ ಅಕಬರನು ಈ ಸಂಬಂಧವನ್ನು ಮರೆತುಬಿಟ್ಟನು. ಅಕಬರನು ಬಾಲ್ಯಕಾಲದ ಲ್ಲಿಯೇ ವೀರನೂ, ಯುದ್ದ ಕುಶಲನೂ ಆಗಿದ್ದನು. ಈಗ ಅವನ ತಾರುಣ್ಯದ ಪ್ರಾರಂಭದ ಸಮಯವು. ಈ ವೇಳೆಯಲ್ಲಿ ತಮ್ಮಲ್ಲಿರುವ ಸಾಮರ್ಧವನ್ನು ಪ್ರಕ ಟಮಾಡಿ, ಜಗತ್ತನ್ನು ಮುಗ್ಧ ಮಾಡುವ ಇಚ್ಛೆಯು ನಾಹಸಿಗಳಲ್ಲಿ ಸ್ವಾಭಾವಿಕ ಹುಟ್ಟುವದು, ಅದರಂತೆ ಅಕಬರನೂ ಮಹತ್ವಾಕಾಂಕ್ಷಿಯಾದನು. ಅವನು ರಜ ಪೂತರ ವೀರತ್ವದ ಅನೇಕ ಸಂಗತಿಗಳಿಂದ ಚಿತೋಡದುರ್ಗವನ್ನು ಜಯಿಸುವದು ಅಸಾಧ್ಯವೆಂದು ಕೇಳಿದ್ದನು, ಆದರೆ ಮೈರ್ತಾದುರ್ಗವನ್ನು ವಶಮಾಡಿಕೊಂಡ ತರುವಾಯ ಚಿತೋಡವನ್ನು ಜಯಿಸಬಹುದೆಂದು ಭಾವಿಸಿದನು. ಅಕಬರನು ಚಿತೋಡವನ್ನಾಕ್ರಮಿಸುವದಕ್ಕೆ ಅವನ ಕೀರ್ತಿಯ ಅಭಿಲಾಷೆಯು ಮೊದಲ ನೆಯ ಕಾರಣವಾಯಿತೆಂದು ಹೇಳಬಹುದು.