ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ V V V ೪ V / vvv vv v vv v \ \ / 4 vvv vv \/ v ಮಾರವಾಡ, ಗ್ಯಾಲೇರ, ಮಾಳವ, ಜೋನಪುರಗಳು ಅಕಬರನ ವಶವಾದ ವು. ಹಿಂಝುನದೊಳಗಿನ ಅರಸರೆಲ್ಲರು ಒಬ್ಬ ರಹಿಂದೊಬ್ಬರು ಅಧೀನಕ್ಕೊಳಪಡ ತೊಡಗಿದರು. ಆದರೆ ಚಿತೋಡದ ಮಹಾರಾಣಾನು ಮಾತ್ರ ಇದಕ್ಕೊಡಂಬಡ ಲಿಲ್ಲ. ರಾಣಾನ ಗರ್ವವನ್ನು ಖಂಡಿಸುವದಕ್ಕಾಗಿ ಅಕಬರನು ಚಿತೋಡವನ್ನು ಜಯಿಸುವ ಪ್ರತಿಜ್ಞೆ ಮಾಡಿದನು. ಇದೇ ಚಿತೋಡನಾಶದ ದ್ವಿತೀಯ ಕಾರಣ ವಾಯಿತೆಂದು ಹೇಳಬಹುದು. ಅಕಬರನು ಮಾಳವವನ್ನು ಜಯಿಸುವದಕ್ಕೆ ಸೇನಾಪತಿಯಾದ ಆದಮ ಖಾನನ್ನು ಕಳಿಸಿದ್ದನು. ಆದಮಖಾನನು ಅಕಬರನ ಧಾತ್ರಿಯ ಪುತ್ರನು. ಅದ ರಿಂದ ರಾಜದರಬಾರದಲ್ಲಿ ಇವನ ಪ್ರತಿಷ್ಠೆಯು ಬಹಳವಾಗಿದ್ದಿತು ಇವನು ಮಾಳವದ ಅರಸನನ್ನು ಗೆದ್ದು, ರಾಜಧಾನಿಯ ಮೇಲೂ ಅರಸನ ಪರಿವಾರದ ನಾರಿ ಯರ ಮೇಲೂ ಅನೇಕ ಅತ್ಯಾಚಾರಗಳನ್ನು ಮಾಡಿದನು. (೧೫೬೧), ಮಾಳ ವದ ಅರಸನಾದ ವಾಜಬಹದ್ದುರನು ಮೇಲಿಂದ ಮೇಲೆ ಪರಾಜಿತನಾಗಿ ರಾಣಾ ಉದಯಸಿಂಹನನ್ನು ಮರೆಹೊಕ್ಕನು. ಶರಣಾಗತರಿಗೆ ಆಶ್ರಯವನ್ನಿ ಯುವದು ರಜಪೂತರ ಶ್ರೇಷ್ಟ ಧರ್ಮವು. ಕಾರಣ ಚಿತೋಡದ ಅವಸ್ಥೆಯು ಮುಂದೆ ಹಾಗೇ ಆಗಲಿ, ಇಂದು ಮಾಳವದ ಅರಸನು ನಿರಾಪದನಾದನು. ಅಕಬರನು ಗ್ವಾಲ್ಲೇ ರವನ್ನು ಜಯಿಸಿದ ತರುವಾಯ ಅಲ್ಲಿಯ ಅರಸನೂ ರಾಣಾನ ಮೊರೆಹೊಕ್ಕನು. ಈ ಸುದ್ದಿಯನ್ನು ಕೇಳಿ ಅಕಬರನು ತಪ್ತನಾದನು. ಇವನು ಚಿತೋಡದ ಮೇಲೆ ದಂಡೆತ್ತಿ ಬರುವದಕ್ಕೆ ಇದು ಮೂರನೇ ಕಾರಣವು. ಅಕಬರನು ಅನೇಕ ಕಾರಣಗಳಿಂದ ಮಹಾರಾಣಾನ ಮೇಲೆ ಕ್ರುದ್ಧನಾಗಿ ದ್ದರೂ, ಚಿತೋಡದ ಮೇಲೆ ದಂಡೆತ್ತಿ ಹೋಗುವ ಯೋಗವು ಆಗ ಒದಗಿದ್ದಿಲ್ಲ. ವಿಜಯಿಗಳಾದ ಮೊಗಲ ಸೈನಿಕರು ಮಾಳವದ ಅನೇಕ ಸ್ಥಳಗಳನ್ನು ಕೈವಶಮಾಡಿ ಕೊಂಡಿದ್ದರೂ, ಅದರ ಮೇರೆಯಲ್ಲಿದ್ದ ಬಂಡಾಯಗಳನ್ನು ಮುರಿಯುವದಕ್ಕೆ ಅವರು ಸಮರ್ಥರಾಗಲಿಲ್ಲ. ಅದರಿಂದ ಅಕಬರನು ತಾನೇ ಆ ಕಡೆಗೆ ಹೊರಟನು (೧೫೬೭). ಅವನು ಮಳೆಗಾಲದ ಕಡೆಯ ಭಾಗದಲ್ಲಿ ಟೋಲಪುರಕ್ಕೆ ಬಂದನು. ಅಬಲ್‌ಫಜಲನು ಈ ಕಾಲದಲ್ಲಾದ ಒಂದು ಸಂಗತಿಯನ್ನು ಉಲ್ಲೇಖಿಸಿದ್ದಾನೆ. ಒಂದುದಿನ ಉದಯಸಿಂಹನ ಮಗನಾದ ಶಕ್ತಸಿಂಹನು, ಅಣ್ಣನ ಮೇಲೆ ಶಿಟ್ಟಾಗಿ, ಮೊಗಲರ ಆಶ್ರಯವನ್ನು ಹೊಂದುವದರ ಸಲುವಾಗಿ ಅಕಬರನ ದರ್ಶನ