ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಮಹಾರಾಣಾ ಪ ತಾಪಸಿಂಹ •• • • • • • • • V V V V V V V\ / \ V V V V V V V /v ತಕ್ಕೊಂಡನು. ಶಕ್ತಸಿಂಹನ ಬರುವಿಕೆಯಿಂದ ಅಕಬರನಿಗೆ ಆನಂದವಾಯಿತು. ಅದರಿಂದ ಅವನು, ಉಳಿದ ಅರಸರಂತೆ ರಾಣಾನು ನನ್ನ ಆಧೀನನಾಗದ್ದರಿಂದ, ಚಿತೋಡವನ್ನಾಕ್ರಮಿಸಿ, ಅವನಿಗೆ ಯೋಗ್ಯ ಶಿಕ್ಷೆಯನ್ನು ವಿಧಿಸುತ್ತೇನೆಂದು ಹೇಳಿದನು. ಶಕ್ತನು ಸ್ವಜಾತಿದ್ರೋಹಿಯಾಗಿ ಬಂದುದರಿಂದ ಈ ಮಾತನ್ನು ಕೇಳಿ ಅವನು ಸಂತೋಷಿಸಬಹುದೆಂದು ಭಾವಿಸಿ ಅಕಬರನು ಈ ವಿಷಯವಾಗಿ ಇನ್ನೂ ಅನೇಕ ಸಂಗತಿಗಳನ್ನು ಸಂಕೋಚವಿಲ್ಲದೆ ಶಕ್ತನಿಗೆ ಹೇಳಿದನು. ಈ ಮಾತುಗಳನ್ನು ಕೇಳಿ ಶಕ್ತನು ಬಹಳ ಗೊಂದಲದಲ್ಲಿ ವಿಷಮಸಮಸ್ಯೆಯಲ್ಲಿ ಬಿದ್ದನು. ಯಾಕಂದರೆ ತಾನು ಮೊಗಲರೊಡನೆ ಇರುವದನ್ನು ರಜಪೂತರು ನೋಡಿದರೆ, ಶಕ್ತನು ತಾನೇ ಅಕಬರನನ್ನು ಚಿತೋಡದ ನಾಶಕ್ಕಾಗಿ ಕರೆದು ತಂದನೆಂದೆನ್ನುವರು, ಅದರಿಂದ ತನಗೆ ಚಿರಕಲಂಕವುಂಟಾಗುವದು; ಈ ಸಮ ಯದಲ್ಲಿ ತಾನಿಲ್ಲಿರುವದು ಯೋಗ್ಯವಲ್ಲವೆಂದು ಭಾವಿಸಿ ಮೊಗಲರ ಶಿಬಿರದಿಂದ ಚಿತೋಡಕ್ಕೆ ಓಡಿಹೋಗಿ ನಡೆದ ಯಾವತ್ತು ಸಂಗತಿಯನ್ನು ತಂದೆಗೆ ತಿಳಿಸಿ ದನು, - ಇನ್ನು ಚಿತೋಡದ ಮೇಲೆ ದಂಡೆತ್ತಿ ಹೋಗುವದಕ್ಕೆ ತಡಮಾಡಿದರೆ ತನ್ನ ಕಾರ್ಯಕ್ಕೆ ವಿಘ್ನವುಂಟಾಗುವದೆಂದು ಎಣಿಸಿ ಅಕಬರನು ಮಾಳವದ ಕಡೆಗೆ ಹೋಗುವದನ್ನು ಬಿಟ್ಟು ಚಿತೋಡದ ಕಡೆಗೆ ಹೊರಟನು. ಇದರಿಂದ ಶಕ್ತನ ಆಗಮನವು, ಅಕಬರನು ದಂಡೆತ್ತಿ ಬರುವದಕ್ಕೆ ಬೇರೊಂದು ಕಾರಣವಾ ಯಿತೆಂದು ಹೇಳಬಹುದು. ಬಾದಶಹನು ಚಂಬಳನದಿಯ ಎಡದಂಡೆಯ ಮಾರ್ಗವಾಗಿ ಹೊರಟು, ರತ್ನಾಂಬರ ಕೋಟೆಯನ್ನು ಮುತ್ತಿದನು. ಕೋಟೆಯೊಳಗಿನ ಜನರು ಮೊದಲೇ - ಶಕ್ತಸಿಂಹನು ಸ್ವದೇಶದ್ರೋಹಿಯಾಗಿ ಮೊಗಲರನ್ನು ಕೂಡಿದ ಸಂಗತಿಯು ರಾಜಸ್ತಾ ನದ ಆಖ್ಯಾಯಿಕೆಯಲ್ಲದೆ, ಆದರೆ ಈ ಸಮಯದಲ್ಲಿ ಅವನು ಮೊಗಲರ ಶಿಬಿರದಿಂದ ಓಡಿಹೋದ ಸಂಗತಿಯು : ಅಕಬರನಾಮಾ ' ಗ್ರಂಥದ ಹೊರತು ಬೇರೆ ಕಡೆಯಲ್ಲಿ ಸಾಗರಸcಹನೆಂಬ ಪ್ರತಾಪಸಿಂಹನ ಬೇರೊಬ್ಬ ತಮ್ಮನು ಹಳದಿಘಟ್ಟದ ಯುದ್ಧದ ಪೂರ್ವದಲ್ಲಿ ಮೊಗಲರ ಆಶ್ರಯ ಹೊಂದಿದ್ದನ್ನು ನೋಡಬಹುದಾಗಿದೆ ಚಿತೋಡದ ನಾಶದ ತರುವಾಯ ಸಾಗರನು ಶತ್ರುಗಳ ನಾಶ್ರಯಿಸಿ, ಕ್ರಮವಾಗಿ ಉನ್ನತಿಯನ್ನು ಹೊಂದುತ್ತ, ಜಹಾಂಗೀರನ ಆಳಿಕೆಯ ೧ನೇ ವರ್ಷ 4೦೦೦ ದಂಡಾಳುಗಳ ಮೇಲಿನ ಸರದಾರನಾದನು, Blockina, Ain•1-Akbari, P, 519.