ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ VVVV ಮತ್ತು ಸದ್ರಿಯಿಂದ ಝಾಲಪತಿಯೂ, ಬಿಜಲಿಯ ಪ್ರಮಾರ ಸರದಾರನೂ, ಝಾ ಲೋರದಿಂದ ಶೋಣಿಗುರು ಸರದಾರನೂ, ಬೇದಲಾ-ಕೋಟಾರಿಗಳಿಂದ ಚಾಣ ಸರದಾರರೂ, ಸಂಗಾಯತ್-ಕಚ್ಚವಾಹ ಮೊದಲಾದ ವಂಶಗಳ ಅನೇಕ ಸರ ದಾರರೂ ಬಂದರು.• ಗ್ಯಾಲೇರದ ತೋಮರವಂಶದ ರಾಮಶಹನು ಚಿತೋಡ ದಲ್ಲಿ ಆಶ್ರಯಹೊಂದಿದನೆಂದು ಹಿಂದೆ ಹೇಳಿದ್ದೇವೆ. ಅವನು ಈ ಯುದ್ಧದಲ್ಲಿ ತನ್ನ ವೀರವಿಕ್ರಮವನ್ನು ತೋರ್ಪಡಿಸಿದನು. ಅಕಬರನು ಚಿತೋಡವನ್ನು ಮುತ್ತಿದನು. ಇವನು ಕುದುರೆಯನ್ನು ಹತ್ತಿ, ಕೋಟೆಯನ್ನು ಸುತ್ತಿ, ಸ್ವತಃ ಎಲ್ಲ ಸ್ಥಳಗಳನ್ನು ಸೂಕ್ಷ್ಮರೀತಿಯಿಂದ ಅವಲೋಕಿ ಸಿದನು. ಅಳತೆಯನ್ನು ಮಾಡತಕ್ಕವರು ಕೋಟೆಯ ಬೇರೆ ಬೇರೆ ಭಾಗಗಳ ಅಳ ರು. ಎಲ್ಲಿ ಎಷ್ಟು ಸೈನ್ಯವನ್ನಿಡಬೇಕು, ಎಲ್ಲಿ ಯಾವ ರೀತಿ ಯಿಂದ ತೋಸುಗಳನ್ನು ಹಚ್ಚಬೇಕು; ಈ ಮೊದಲಾದ ಸಂಗತಿಗಳನ್ನು ಅಕಬ ರನು ಸ್ವತಃ ತೋರಿಸಿಕೊಟ್ಟನು. ಇದರಂತೆ ಯಾವತ್ತೂ ವ್ಯವಸ್ಥೆಯನ್ನು ಮಾಡು ವದಕ್ಕೆ ಒಂದು ತಿಂಗಳು ಹತ್ತಿತು. ಅಕಬರನು ಬಂದ ಸುದ್ದಿಯನ್ನು ಕೇಳಿದ ಕೂಡಲೇ ಕೋಟೆಯ ಮೂರೂ ದಿಕ್ಕಿನ ಬಾಗಿಲಗಳು ಮುಚ್ಚಲ್ಪಟ್ಟವು; ಮತ್ತು ಮೊದಲನೆಯ ದಿವಸದಿಂದ ಕೋಟೆಯೊಳಗಿನ ಜನರಿಗೂ, ಮುತ್ತಿಗೆ ಹಾಕಿದ ಜನರಿಗೂ ಸಣ್ಣ ಸಣ್ಣ ಯುದ್ಧಗಳು ನಡೆಯಹತ್ತಿದ್ದವು. ದುರ್ಗವಾಸಿಗಳು ಅಕಬ • ಸಾಲುಂಬ್ರದುರ್ಗವು ಚಿತೋಡದ ನೈರುತ್ಯಕ್ಕೆ ೬೦ ಮೈಲುಗಳ ಮೇಲಿರುವದು ಚಿತೋ ಡದ ವಾಯವ್ಯದಲ್ಲಿ ೭೦ ಮೈಲುಗಳ ಮೇಲಿರುವ ಮೈರಬಾರ ಸೀಮೆಯ ಹತ್ತಿರದಲ್ಲಿಯೇ ಬೇದ ನೂರ ಪಟ್ಟಣವೂ, ಕಮಲರ ದುರ್ಗದ ಕೆಳಭಾಗದಲ್ಲಿ ಕೈಲಬಾರಾ ಪಟ್ಟಣವೂ ಅವೆ, ಚಿತೋ ಡದಿಂದ ೩೫ ಮೈಲು ದಕ್ಷಿಣಕ್ಕಿರುವ ದೊಡ್ಡ ಅದ್ರಿಯಲ್ಲಿ ಈಗಲೂ ಒ೦ದು ಪಾರ್ವತ್ಯ. ದುರ್ಗದ ಭಗ್ನಾವಶೇಷವಿದೆ ಚಿತೋಡದಿ೦ದ ೬೦ ಮೈಲು ಉತ್ತರದಲ್ಲಿಯೂ, ಉದಯಪುರದಿಂದ ೧೦೧ ಮೈಲು ವಾಯವ್ಯದಲ್ಲಿಯೂ ಬಿಜಲೀ ಪಟ್ಟಣವಿತ್ತು ಮಾರವಾಡದ ದಕ್ಷಿಣಭಾಗದಲ್ಲಿ ಜೋಧಪುರ ದಿಂದ ಸುಮಾರು ೬೦ ಮೈಲು ದಕ್ಷಿಣದಲ್ಲಿ ಝಾಲೋರ ಪಟ್ಟಣವಿದ್ದು, ಆಗ ಅಲ್ಲಿ ಒಂದು ಸುಂದರ ವಾದ ದುರ್ಗವಿತ್ತು ದರಬಾರದಲ್ಲಿ ಮಹಾರಾಣಾನ ಬಲಪಾರ್ಶ್ವದಲ್ಲಿ ಆಸನಹೊಂದುತ್ತಿರುವಂಥ ಮೇವಾಡದ ಹದಿನಾರು ಮಂದಿ ಶ್ರೇಷ್ಠ ಸರದಾರರಲ್ಲಿ, ಸದ್ರಿ, ಬೇದಲಾ, ಕಟಾರಿಯಾ, ಸಾ ಲುಂಬ್ರ, ಬಿಜಲಿ ಮತ್ತು ಬೇದನೂರಗಳ ಸರದಾರರ ಸಮಾವೇಶವಾಗಿದ್ದಿತು ಬೇದಲು ಪಟ್ಟಣವು ಉದಯಪುರದಿಂದ ೩ ಮೈಲು ಉತ್ತರದಲ್ಲಿ ಮತ್ತು ಕಟಾರಿಯಾವು ಉದಯಪುರದಿಂದ ೨೫ ಮೈಲು ದಕ್ಷಿಣದಲ್ಲಿ ಇದ್ದವು.