ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ರನ ತೋಳುಗಳನ್ನು ನೋಡಿ, ಕೋಟೆಯ ಅವಶ್ಯವಾದ ಸುಧಾರಣೆಗಳನ್ನು ಮಾಡುತ್ತಿದ್ದರು. ಹೀಗೆ ಸಣ್ಣ ಸಣ್ಣ ಯುದ್ಧಗಳು ನಡೆದಿದ್ದರೂ, ಭಯಂಕರವಾದ ಪರಿಣಾಮವನ್ನು ಗೊತ್ತು ಮಾಡುವಂಧ ಯುದ್ಧಕ್ಕಾಗಿ ಯಾರೂ ಸಿದ್ಧರಾಗಿರಲಿಲ್ಲ. ಟಾಡ್ ಸಾಹೇಬರು ರಜಪೂತಸ್ತಾನದಲ್ಲಿ ನಡೆದುಬಂದ ಕಥೆಗಳ ಆಧಾರ ದಿಂದ ಅಕಬರನು ಚಿತೋಡದ ಮೇಲೆ ಎರಡುವರೆ ದಂಡೆತ್ತಿ ಬಂದನೆಂದು ಹೇಳು ತಿರುವರು. ಇದರಲ್ಲಿ ಅಕಬರನ ಮೊದಲನೆಯ ಪ್ರಯತ್ನವು ವ್ಯರ್ಥವಾಯಿತು. ಈ ವೇಳೆಯಲ್ಲಿ ರಾಣಾನ ಉಪಪತ್ನಿಯು ತಾನೇ ಯುದ್ಧವನ್ನು ಸಾಗಿಸಿ, ವೀರತ್ವದ ಕಡೆಯ ಮೆಟ್ಟನ್ನು ತೋರಿಸಿದಳು, ಕಾರಣ ಹೇಡಿಯಾದ ರಾಣಾನು ವಿಶೇಷ ಗೌರವವನ್ನು ಪಡೆದು, ಅವಳನ್ನು ಬಹುಪ್ರಕಾರವಾಗಿ ಹೊಗಳಿದನು. ಇದರಿಂದ ಸಾಮಂತ ಸರದಾರರು ಸಿಟ್ಟಾಗಿ, ಅವಳನ್ನು ಕೊಂದುಬಿಟ್ಟರು. ಉದಯಸಿಂಹನು ನಿರುಪಾಯನಾಗಿ ಚಿತೋಡವನ್ನು ಬಿಟ್ಟು ಹೋಗಿ, ಪರ್ವತಪ್ರದೇಶವನ್ನಾಶ್ರಯಿಸಿ ದನು. ಈ ಸಮಯದಲ್ಲಿ ಅಕಬರನು ಎರಡನೆಯ ಸಾರೆ ಕೋಟೆಯನ್ನು ಮುತ್ತಿ ಜಯಶಾಲಿಯಾದನು. ಆದರೆ ಅಬಲ್‌ಫಜಲನಾಗಲಿ, ನಿಜಾಮುದ್ದೀನನಾಗಲಿ, ಫೆರಿಸ್ತಾ ಮೊದಲಾದವರಾಗಲಿ ಅಕಬರನು ಎರಡುನಾರೆ ಚಿತೋಡವನ್ನು ಮುತ್ತಿದ ನೆಂಬ ಬಗ್ಗೆ ಉಲ್ಲೇಖಮಾಡಿಲ್ಲ. ನಾವು ಅಕಬರನಾಮಾ ಮೊದಲಾದ ಗ್ರಂಧಗಳ ನವಲಂಬಿಸಿದ್ದೇವೆ. ಅಕಬರನಾಮಾ ಮೊದಲಾದ ಗ್ರಂಥಗಳಲ್ಲಿ, ಅಕಬರನು ಚಿತೋಡವನ್ನು ಮುಟ್ಟುವ ಮೊದಲೇ ಉದಯಸಿಂಹನು ಚಿತೋಡವನ್ನು ಬಿಟ್ಟು ಹೋಗಿದ್ದನೆಂದು ಹೇಳಿದೆ. * ಈ ವಿಷಯವಾಗಿ ಎರಡು ರೀತಿಯಿಂದ ತರ್ಕಿಸಬಹುದು -ಚಿತೋ ಡಕ್ಕೆ ಬರುವ ಮೊದಲು, ಅಕಬರನು ಮಾಳವದ ಕಡೆಗೆ ಹೊರಟಿದ್ದನೆಂದೂ, ಮಾರ್ಗದಲ್ಲಿ ಮಂಡಲಗಡವನ್ನು ಮುತ್ತುವದಕ್ಕೆ ಅಸಸಖಾನ-ವಜೀರಖಾನರನ್ನು ಕಳಿಸಿದ್ದನೆಂದೂ ನಾವು ಮೇಲೆ ಹೇಳಿದ್ದೇವೆ. ಅವರೇ ಮಂಡಲಗಡವನ್ನು ವಶ ಮಾಡಿಕೊಂಡು ಚಿತೋಡಕ್ಕೆ ಬಂದರು. ಇವರೊಡನೆ ಚಿತೋಡದ ರಜಪೂತರ ಯುದ್ಧವಾಯಿತು. ಈ ಯುದ್ಧದಲ್ಲಿ ಉದಯಸಿಂಹನ ಉಪಪತ್ನಿಯು ತನ್ನ ಅಸಾ ಮಾನ್ಯ ವೀರತ್ವದಿಂದ ಯಾವತ್ತರಲ್ಲಿಯೂ ಆಶ್ಚರ್ಯವನ್ನುಂಟುಮಾಡಿದಳು; ಆದರೆ + Akbarnamah, Beveaidge, Vol. II, P. 464, Tabrkat-1-Akbarly Elliot Vol. V. P. 325.-Badaoni, Love, Vol. II, P. 105.