ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ, ೪ ರಜಪೂತ ಸರದಾರರು ಅವಳನ್ನು ಕೊಂದರು. ಉದಯಸಿಂಹನು ಅಕಬರನು ದಂಡೆತ್ತಿ ಬರುವನೆಂಬ ಸುದ್ದಿಯನ್ನು ಕೇಳಿ ಓಡಿಹೋದನು. ಅಕಬರನು ಚಿತೋಡವನ್ನು ಪ್ರವೇಶಿಸುವ ಮೊದಲು, ಉದಯಸಿಂಹನು ದುರ್ಗವನ್ನು ಬಿಟ್ಟು ಹೋಗಿದ್ದಿಲ್ಲವೆಂದು ಹೇಳಬಹುದು; ಯಾಕಂದರೆ ಪ್ರಾರಂಭ ದಲ್ಲಿ ಮೊಗಲರೊಡನೆ ಒಂದು ತಿಂಗಳವರೆಗೆ ಆದ ಸಣ್ಣ ಸಣ್ಣ ಯುದ್ಧಗಳಲ್ಲಿ, ಉದಯಸಿಂಹನು ಚಿತೋಡದಲ್ಲಿದ್ದನು, ಮತ್ತು ಶತ್ರುಗಳ ಪ್ರತಿಬಂಧಕ್ಕಾಗಿ ಯತ್ನ ನಡೆಸಿದ್ದನು. ಈ ಸಮಯದಲ್ಲಿ ಇವನ ರಾಣಿಯು ವೀರತ್ವವನ್ನು ತೋರಿಸಿದಳು. ತರುವಾಯ ಮೊಗಲರು ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ತೋಸುಗಳನ್ನು ಹಚ್ಚಿ, ಚಿತೋಡ-ಧ್ವಂಸದ ವಿಶೇಷ ವ್ಯವಸ್ಥೆಯನ್ನು ಮಾಡಿರುವದನ್ನು ನೋಡಿ, ಸಾಮಂತರಾಜರ ಆಲೋಚನೆಯಿಂದ ಸಪರಿವಾರವಾಗಿ ದುರ್ಗವನ್ನು ಬಿಟ್ಟು ಹೋದನು. ತರುವಾಯ ನಡೆದ ಯುದ್ಧಕ್ಕೆ ರಜಪೂತರ ಇತಿಹಾಸದಲ್ಲಿ ಎರಡ ನೆಯ ಆಕ್ರಮಣವೆಂದು ಹೇಳಿರಬಹುದು. ಈ ಅನುಮಾನಗಳಲ್ಲಿ ಯಾವದನ್ನೇ ಗ್ರಹಿಸಲಿ, ಅಕಬರನು ಚಿತೋಡವನ್ನು ಮುತ್ತಿದ ತರುವಾಯ, ಆದ ಭಯಂಕರ ಯುದ್ದದಲ್ಲಿ ಉದಯಸಿಂಹನಿದ್ದಿಲ್ಲವೆಂಬದು ಸತ್ಯವು. ಈ ವೇಳೆಯಲ್ಲಿ ಚಿತೋಡ ವನ್ನು ರಕ್ಷಿಸುವ ಮಹತ್ವದ ಕಾರ್ಯಭಾರವು, ಯಾವತ್ತರ ಅನುಮತಿಯಿಂದ ಮಹಾವೀರನಾದ ಜಯಮಲ್ಲನ ಮೇಲೆ ಹೊರಿಸಲ್ಪಟ್ಟಿತ್ತು. ಮೊಗಲರ ಸೈನ್ಯದಲ್ಲಿ ಸ್ವತಃ ಬಾದಶಹನೇ ಮುಖ್ಯ ಸೇನಾಪತಿಯಾಗಿದ್ದನು. ಅವನು ರಾಣಾನ ರಾಜ್ಯವನ್ನು ಹಾಳುಮಾಡುವದಕ್ಕೆ ನಾಲ್ಕೂ ದಿಕ್ಕಿಗೆ ಸೈನ್ಯ ವನ್ನು ಕಳುಹಿಸಿದನು. ಅಸಸಖಾನನು ಹೋಗಿ, ಚಿತೋಡದ ನೈರುತ್ಯಕ್ಕಿರುವ ರಾಮಪುರದ ಪ್ರದೇಶವನ್ನು ಹಾಳುಮಾಡಿದನು; ಹುಸೇನಕುಲಿಖಾನನು ಉದಯ ಸಿಂಹನನ್ನು ಹುಡುಕುವದಕ್ಕಾಗಿ, ಪಶ್ಚಿಮದಿಕ್ಕಿನ ಪರ್ವತಪ್ರದೇಶದಲ್ಲಿ ಹೋದನು. ಮಹಾರಾಣಾನು ಚಿತೋಡವನ್ನು ಬಿಟ್ಟು ಹೋಗಿ, ಮೊದಲು ಪಶ್ಚಿಮದಿಕ್ಕಿನಲ್ಲಿ ಬನಾಸನದಿಯ ತೀರದಲ್ಲಿರುವ ರಾಜಪಿಪ್ಪಲಿಯೆಂಬ ಪಟ್ಟಣದಲ್ಲಿ ಆಶ್ರಯಹೊಂದಿ ದನು; ಮುಂದೆ ಮತ್ತೆ ದಕ್ಷಿಣಕ್ಕೆ ಹೋಗಿ, ಅರವಲೀ ಪರ್ವತದ ಮಧ್ಯದಲ್ಲಿ ನಡೆದನು. ಈ ಸ್ಥಳದಲ್ಲಿ ಅವನು ಕೆಲವು ವರುಷಗಳ ಪೂರ್ವದಲ್ಲಿ ಒಂದು ಜಲಾ ಶಯವನ್ನು ಕಟ್ಟಿಸಿದ್ದನು; ಈ ಜಲಾಶಯಕ್ಕೆ ಉದಯಸಾಗರವೆಂದೂ, ಇದರ ಹತ್ತರಿರುವ ಅರಮನೆಗೆ ನಾಚೌಕಿಯೆಂದೂ ಹೆಸರಿಟ್ಟಿದ್ದನು. ಉದಯಸಿಂಹನು