ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

GL ಮಹಾರಾಣಾ ಪ್ರತಾಪ ಸಿಂಹ •••••••••• ಈ ಸ್ಥಳದಲ್ಲಿ ಕೆಲವು ದಿವಸ ವಾಸಮಾಡಿದನು. ಮುಂದೆ ಈ ಸ್ಥಳವು ಉದಯ ಪುರವೆಂಬ ಹೆಸರನ್ನು ಧರಿಸಿ, ಮೇವಾಡದ ರಾಜಧಾನಿಯಾಯಿತು. ಹುಸೇನಕುಲಿ ಖಾನನು ಈ ಉದಯಸಾಗರದ ಸಮೀಪದಲ್ಲಿ ಬರುವಷ್ಟರಲ್ಲಿಯೇ, ಉದಯ ಸಿಂಹನು ಇದನ್ನು ಬಿಟ್ಟು, ಪಶ್ಚಿಮಕ್ಕಿರುವ ದುರ್ಗಮ ಪರ್ವತಪ್ರದೇಶವನ್ನು ಹೊಕ್ಕನು. ಹುಸೇನಕುಲಿಖಾನನು ಬಡಜನರ ಮೇಲೆ ಭೀಷಣ ಅತ್ಯಾಚಾರ ಮಾಡಿ, ಸಿಕ್ಕಲ್ಲಿ ಸುಲಿಗೆಮಾಡುತ್ತ ನಡೆದು, ಕಡೆಯಲ್ಲಿ ರಾಣಾನನ್ನು ಹುಡುಕದೆ ತಿರುಗಿ ಬಂದನು. ಇತ್ತ ಚಿತೋಡದಲ್ಲಿಯ ಮೊಗಲಸೈನಿಕರು, ದುರ್ಗಜಯದ ಯಾವ ಕಾರ್ಯಗಳನ್ನು ಮಾಡಲಿಕ್ಕೂ ಸಮರ್ಥರಾಗಲಿಲ್ಲ. ಖಾಅಲಿಮ, ಅದಿಲಖಾ ಮೊದಲಾದ ಸೇನಾಪತಿಗಳು ಮೇಲಿಂದ ಮೇಲೆ ಕೋಟೆಯನ್ನು ಮುತ್ತಿ, ವಿಫಲ ಮನೋರಧರಾದರು. ಇದೇ ಅಕಬರನ ಮೊದಲಿನ ವ್ಯರ್ಧ ಆಕ್ರಮಣವೆಂದು ರಜಪೂತರ ಚರಿತ್ರೆಯಲ್ಲಿ ಹೇಳಿದೆ. ಈ ರೀತಿಯಾಗಿ ಅವ್ಯವಸ್ಥೆಯಿಂದ ಕೋಟೆ ಯನ್ನು ಮುತ್ತಿದರೆ, ಉಪಯೋಗವೇನೂ ಆಗಲಾರದೆಂಬದನ್ನು ಅಕಬರನು ಗೊತ್ತು ಮಾಡಿಕೊಂಡನು; ಆದರೂ ಯುದ್ಧವು ಹಾಗೇ ನಡೆದಿತ್ತು; ಅದರಿಂದ ದಿನಾಲು ಎಷ್ಟೋ ಮೊಗಲಸೈನಿಕರು ಮೃತ್ಯುಮುಖದಲ್ಲಿ ಬೀಳುತ್ತಿದ್ದರು; ಅನೇ ಕರು ಗಾಯಾಳುಗಳಾಗಿ ತಿರುಗಿ ಬರುತ್ತಿದ್ದರು; ಯಾಕಂದರೆ ಮೊಗಲರ ಗುಂಡು, ಬಾಣಗಳು ಎತ್ತರವಾದ ಶಿಖರದ ಮೇಲಿರುವ ಗೋಡೆಗಳಲ್ಲಿ ಹಾಯ್ದು, ರಜಪೂ ತರಿಗೆ ಅಪಾಯ ಮಾಡುವ ಸಂಭವವಿದ್ದಿಲ್ಲ; ಆದರೆ ರಜಪೂತವೀರರು (ಕಾಂಗಡಾ' ಅಂದರೆ ಕೋಟೆಯ ಗೋಡೆಗಳೊಳಗಿನ ಕಿಂಡಿಗಳ ಮಾರ್ಗವಾಗಿ ಬಿಡುತ್ತಿದ್ದ ಗುಂಡು, ಬಾಣ, ಬರ್ಚೆಗಳಿಂದ ಅನೇಕ ಮೊಗಲ ಸೈನಿಕರು ಸತ್ತುಹೋಗು ತಿದ್ದರು. ... ... ರಜಪೂತರು ತೋಫು, ಬಂದೂಕ ಮೊದಲಾದವುಗಳನ್ನು ಪ್ರಯೋಗಿಸುವದನ್ನು ಬಲ್ಲವ ರಾಗಿದ್ದರು ಆದರೆ ಇವರ ತೋಮುಗಳು ಮೊಗಲರ ತೋಫುಗಳಷ್ಟು ದೊಡ್ಡ ವಾಗಿರಲಿಲ್ಲ, ಮತ್ತು ಶ್ರೇಷ್ಟ ತರಗತಿಯವೂ ಇರಲಿಲ್ಲ See Sir I, Elhots Article on the early use of Gunpowder in India” Elliot, VI. P. P, 455-482. There were dexterous artillery , men among them ” ( Rajputs ) Akbarvamak P. 466-7,