ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ. ಹೀಗಿದ್ದರೂ ಅಕಬರನು ಕೋಟೆಯನ್ನು ಸ್ವಾಧೀನಪಡಿಸಿಕೊಳ್ಳುವದ ಕ್ಕಾಗಿ ಕೃತಸಂಕಲ್ಬನಾಗಿದ್ದನು. ಅದರಿಂದ ಅವನು ನಿರಾಶನಾಗಲಿಲ್ಲ. ಆದರೆ ಇದೇ ರೀತಿಯಿಂದ ಮುಂದೆಯೂ ಯುದ್ಧವನ್ನು ಸಾಗಿಸಿದರೆ ತನ್ನ ಜನರ ನಾಶ ವಾಗುವದಲ್ಲದೆ, ಯಾವ ಲಾಭವೂ ಆಗುವದಿಲ್ಲವೆಂಬದನ್ನು ನಿರ್ಧರಿಸಿಕೊಂಡು ಅವನು ಬೇರೆ ಯಾವದಾದರೊಂದು ಹಂಚಿಕೆಯಿಂದ ಕೋಟೆಯನ್ನು ವಶಮಾಡಿ ಕೊಳ್ಳುವ ಆಲೋಚನೆಯನ್ನು ಮಾಡಿದನು. ಎದುರಿನಲ್ಲಿ ನಿಂತು, ಕತ್ತಿ ಮೊದ ಲಾದ ಆಯುಧಗಳಿಂದ ಮಾಡತಕ್ಕ ಯುದ್ಧದಲ್ಲಿ ಅಕಬರನಿಗೆ ಜಯದೊರೆಯುವ ಸಂಭವವಿದ್ದಿಲ್ಲ. ಮೊಗಲರು ಅಗ್ನಿಯುದ್ದದಲ್ಲಿ-ತೋಪುಗಳಿಂದ ಶತ್ರುನಾಶಮಾ ಡುವದರಲ್ಲಿ ಗಟ್ಟಿಗರಾಗಿದ್ದರು. ಹಿಂದೆ ಸಕ್ರಿಯ ಕಾಳಗದಲ್ಲಿ ರಜಪೂತರು ಪರಾ ಜಯ ಹೊಂದುವದಕ್ಕೆ ಮೊಗಲರ ಶ್ರೇಷ್ಠವಾದ ತೋಪುಗಳೇ ಕಾರಣೀಭೂತ ವಾದವೆಂದು ನಾವು ಹಿಂದೆ ಹೇಳಿದ್ದೇವೆ. ಈಗ ಅಕಬರನೂ ಇದೇ ಮಾರ್ಗವ ನವಲಂಬಿಸುವ ಹಂಚಿಕೆ ತೆಗೆದನು. ಮೊಗಲರು ಈ ಮೊದಲೇ ಕೋಟೆಯ ನಾಲ್ಕೂ ಕಡೆಯಲ್ಲಿ ತೋಸುಗ ಳನ್ನು ಹಚ್ಚಿದ್ದರು. ಅವು ರಜಪೂತರ ಬಾಣಗಳು ತಾಕದಷ್ಟು ದೂರದಲ್ಲಿದ್ದವು. ದುರ್ಗ ಪ್ರವೇಶದ ಮೂರೂ ಮಾರ್ಗಗಳ ಎದುರಿಗೆ ಉತ್ತಮವಾದ ತೋಪುಗಳು ಹೆಚ್ಚಾಗಿರಿಸಲ್ಪಟ್ಟಿದ್ದವು. ಅಕಬರನು ತನ್ನ ಸೈನಿಕರಲ್ಲಿ ಮೂರು ಭಾಗಮಾಡಿ, ಒಂದೊಂದು ಭಾಗವನ್ನು ಒಬ್ಬೊಬ್ಬ ಸೇನಾಪತಿಯ ಕೈಯಲ್ಲಿ ಕೊಟ್ಟು, ಈ ಬಾಗಿ ಲಗಳ ಎದುರಿನಲ್ಲಿ ಕಾಯ್ದು ಕೊಂಡಿರುವಂತೆ ಅಪ್ಪಣೆಮಾಡಿದನು. ಉತ್ತರದಿಕ್ಕಿನ ಲಕ್ಷತೋರಣದ ಎದುರಿಗೆ ಶ್ರೇಷ್ಠವಾದ ತೋಳುಗಳನ್ನು ಹಚ್ಚಿ, ಅವುಗಳ ವ್ಯವಸ್ಥೆಯ ಸಲುವಾಗಿ ಸೇನಾಪತಿ ಅಸಫಖಾ, + ರಾಯಪುರದಾಸ ಮೊದ ಲಾದವರು ನಿಂತುಕೊಂಡರು; ಪೂರ್ವದಿಕ್ಕಿನಲ್ಲಿರುವ ಸೂರ್ಯತೋರಣದ ಎದು ರಿನ ಭಾಗದಲ್ಲಿ ವಜೀರಖಾ ಮೊದಲಾದವರು ನಿಂತುಕೊಂಡರು; ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ಮುಖ್ಯ ಬಾಗಿಲದ ಎದುರಿನಲ್ಲಿ ಸೇನಾಪತಿ ಸುಜಾತಖಾ, ರಾಜಾ ತೋಡರಮಲ್ಲ ಮೊದಲಾದವರು ನಿಂತರು. ಬಾದಶಹ ಅಕಬರನೂ ಬಹುಶಃ ಇದೇ ಭಾಗದಲ್ಲಿರುತ್ತಿದ್ದನು; ಮತ್ತು ರಾಜಾ ಭಗವಾನದಾಸ ಮೊದಲಾದ ಮುಖ್ಯ +Aini,Akbari, Blockmann P 469