ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ •• ಮಹಾರಾಣಾ ಪ್ರತಾಪಸಿಂಹ. ಸರದಾರರು ಇವನ ಅನುಚರರಾಗಿದ್ದರು. ಅಕಬರನು ಈ ಭಾಗದಲ್ಲಿ ವಿಶೇಷವಾ ಗಿರುತ್ತಿದ್ದರೂ, ಅವನ ದೃಷ್ಟಿಯು ನಾಲ್ಕೂ ಕಡೆಗೆ ಸಮಭಾವದಿಂದಿತ್ತೆಂದು ಹೇಳಬಹುದು. ಮಹಾರಾಣಾನು ಓಡಿಹೋದನಂತರ ಜಯಮಲ್ಲನು ರಜಪೂತರ ಮುಖ್ಯ ಸೇನಾಪತಿಯಾಗಿದ್ದನು. ಇವನು ಪಶ್ಚಿಮ ದಿಕ್ಕಿನಲ್ಲಿರುವ ಮುಖ್ಯದ್ವಾರದ ಸಂರಕ್ಷ ಣೆಯನ್ನು ವಹಿಸಿದ್ದನೆಂದು ಹೇಳಿದ್ದೇವೆ. ಪ್ರತಾಪಸಿಂಹನು ಕೆಲವು ದಿವಸಗಳವರೆಗೆ ಜಯಮಲ್ಲನ ಕೈ ಕೆಳಗಿದ್ದು, ಮಹಾಪರಾಕ್ರಮದಿಂದ ಯುದ್ಧ ಮಾಡಿದನು. ಇವನ ವೀರತ್ವವನ್ನೂ, ಸಮಯಸೂಚಿಕತೆಯನ್ನೂ ನೋಡಿ, ಯಾವತ್ತು ಸರದಾ ರರಲ್ಲಿ ಆನಂದವೂ, ಉತ್ಸಾಹವೂ ಹೆಚ್ಚಾಯಿತು. ಸೂರ್ಯ ತೋರಣದಲ್ಲಿ ಸಹಿ ದಾಸನು ಸೇನಾಪತಿಯಾಗಿದ್ದನು; ಪುತ್ರನು ಇವನ ಸಹಾಯಕನಾಗಿದ್ದನು. ಈ ಸಮಯದಲ್ಲಿ ಪುತ್ರನಿಗೆ ಕೇವಲ ಹದಿನಾರು ವರುಷ ವಯಸ್ಸು ! ಝಾಲಾ ಪತಿ ಮೊದಲಾದ ಸರದಾರರು ಉತ್ತರ ತೋರಣದ ಭಾಗವನ್ನು ವಹಿಸಿದ್ದರು. ಬಾದಶಹನು ತೋಪುಗಳನ್ನು ಹಚ್ಚಿ, ಸೈನ್ಯವನ್ನು ವ್ಯವಸ್ಥೆಯಿಂದಿರಿಸಿದರೂ ಉಪಯೋಗವಾಗಲಿಲ್ಲ. ಕೇವಲ ತೋಪುಗಳು ಕೋಟೆಯ ಗೋಡೆಗಳನ್ನು ಕೆಡವಲಿಕ್ಕೆ ಸಮರ್ಥವಾಗಲಿಲ್ಲ; ಯಾಕಂದರೆ ಈಗಿನಂತಹ ಪ್ರಬಲವಾದ ತೋಪುಗಳು ಆ ಕಾಲದಲ್ಲಿರಲಿಲ್ಲ. ಅದರಿಂದ ಕೋಟೆಯ ಗೋಡೆಗಳ ಕೆಳಭಾ ಗದಲ್ಲಿ ತಗ್ಗು ತೆಗೆದು, ಅದರಲ್ಲಿ ಮದ್ದು ತುಂಬಿ ಹಾರಿಸಿದರೆ, ಕೋಟೆಯ ಗೋಡೆ ಗಳು ಹಾರಿಹೋಗಬಹುದೆಂದು ಅಕಬರನು ಆಲೋಚಿಸಿದನು. ಈ ಮದ್ದಿನಿಂದ ತುಂಬಿದ ತಗ್ಗಿಗೆ ಸುರಂಗ ( Mine ) ವೆನ್ನುವರು. ಹೀಗೆ ಈ ಸುರಂಗವು ಹಾರಿ, ಕೋಟೆಯ ಗೋಡೆಯು ಬಿದ್ದ ಕೂಡಲೇ ಶಸ್ತ್ರಧಾರಿಗಳಾದ ಮೊಗಲ ಸೈನಿಕರು, ಒಮ್ಮೆಲೆ ಕೋಟೆಯಲ್ಲಿ ಪ್ರವೇಶಿಸಿ, ರಜಪೂತರ ಗರ್ವವನ್ನು ನಾಶಮಾಡಬೇ ಕೆಂದು ಗೊತ್ತಾಯಿತು. ಆದರೆ ಈ ತರದ ಸುರಂಗಗಳನ್ನು ರಚಿಸುವದು ಕಷ್ಟಕ ರವಾದ ಕಾರ್ಯವಾಗಿತ್ತು; ಯಾಕಂದರೆ ಈ ಸುರಂಗಗಳನ್ನು ರಚಿಸುವದಕ್ಕೆ ಕೋಟೆಯ ಕೆಳಭಾಗದಲ್ಲಿ ಹೋಗಲಿಕ್ಕೆ ಬರುವಂತಿದ್ದಿಲ್ಲ; ಒಂದುವೇಳೆ ಧೈರ್ಯ ದಿಂದ ಯಾರಾದರೂ ಹೋದಲ್ಲಿ, ರಜಪೂತರು ಗುಂಡು, ಬಾಣಗಳಿಂದ ಇವರನ್ನು ಸಂಹರಿಸಿ ಬಿಡುತ್ತಿದ್ದರು. ಪ್ರಾಚೀನಕಾಲದಿಂದಲೂ ನಮ್ಮ ಹಿಂದೂಜನರು