ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ಶಕ •••• ಯಾಗಿ, ಮರಣಹೊಂದುತ್ತಿದ್ದರು. ಈ ಸತ್ತ ಜನರ ಶವಗಳನ್ನು ಕಟ್ಟತಕ್ಕ ಗೋಡೆಗಳಲ್ಲಿ ಹುಗಿದುಬಿಡುತ್ತಿದ್ದರು. ಹೀಗೆ ಅನೇಕ ಜನರ ಪ್ರಾಣಹಾನಿಯಾ ಗುತ್ತಿದ್ದರೂ, ಅಕಬರನು ಹಿಂಜರಿಯಲಿಲ್ಲ. ಅವನು ಬಹು ಧನವನ್ನು ವೆಚ್ಚ ಮಾಡಿ, ಕೂಲಿಕಾರರನ್ನು ಸಂತೋಷಪಡಿಸುತ್ತಿದ್ದನು. ಹೀಗೆ ಅಸಂಖ್ಯ ಜನರ ಬಲಿಯಿಂದಲೂ, ಬಹು ಧನವ್ಯಯದಿಂದಲೂ ಕೋಟೆಯ ಪಶ್ಚಿಮ ದಿಕ್ಕಿನ ಗೋಡೆಯ ತಳಕ್ಕೆ ಮುಟ್ಟುವ ಮಾರ್ಗವು ಸಿದ್ಧವಾಯಿತು. ಈ ದುಸ್ಸಾಧ್ಯ ಕಾರ್ಯವು ರಾಜಾ ತೋಡರಮಲ್ಲ ಮತ್ತು ಕಾಶೀಮಖಾ ಇವರ ವಿಶೇಷ ಪ್ರಯ ತದಿಂದ ಕೊನೆಗಂಡಿತು. ಬಾದಶಹನು ಮದ್ದುಗುಂಡುಗಳ ಸಂಗ್ರಹವನ್ನು ಸಾಕಷ್ಟು ಮಾಡಿದ್ದನು. ಆದರೂ ಪ್ರಸಂಗವಿಶೇಷದಲ್ಲಿ ಕೊರತೆಯುಂಟಾಗಬಾರದೆಂದು ತನ್ನ ಶಿಬಿರದಲ್ಲಿ ಶಸ್ತ್ರಗಳನ್ನೂ, ಮದ್ದು ಗುಂಡುಗಳನ್ನೂ ತಯಾರಿಸುವ ಕಾರಖಾನೆಯನ್ನು ಸ್ಥಾಪಿಸಿದನು. ಇದರಿಂದ ಯುದ್ಧದ ಯಾವತ್ತು ಸಾಮಾನುಗಳ ಪೂರೈ ಕೆಯು ವಿಶೇಷ ರೀತಿಯಿಂದಾಗಹತ್ತಿತು. ದೂರದಿಂದ ದೊಡ್ಡ ತೋಸನ್ನು ತರಿಸ ಲಿಕ್ಕೆ ವೇಳೆಯೂ, ಶ್ರಮವೂ ಹೆಚ್ಚು ಹತ್ತುವದೆಂದು ತಿಳಿದು, ಅಲ್ಲಿಯೇ ಒಂದು ದೊಡ್ಡ ತೋಫನ್ನು ಮಾಡಿಸಿದನು. ಈ ತೋಫು ಅರ್ಧ ... ಮಣ ಗುಂಡುಗಳನ್ನು ಹಿಡಿಯುತ್ತಿದ್ದಿತು. ಕಬೀರಖಾನನು ಕೋಟೆಯ ಉತ್ತರ ಭಾಗದಲ್ಲಿ ಒಂದ ಕ್ಕೊಂದು ಹತ್ತಿ ಎರಡು ತಗ್ಗುಗಳನ್ನು ತೆಗೆದು, ಅವುಗಳಲ್ಲಿ ಅನುಕ್ರಮವಾಗಿ ೧೨೮ ಮಣ ಮದ್ದನ್ನು ತುಂಬಿದನು. ಸುರಂಗಗಳು ಹಾರಿದ ಕೂಡಲೇ ಶತ್ರುಗಳ ಮೇಲೆ ಸಾಗಿಹೋಗುವದಕ್ಕೆ ಶಸ್ತ್ರಧಾರಿಗಳಾದ ಮೊಗಲ ಸೈನಿಕರು ಸಿದ್ಧರಾದರು. ಅಕಬರನು ಸುರಂಗಗಳಿಗೆ ಕೊಳ್ಳೆ ಕೊಡುವಂತೆ ಅಪ್ಪಣೆ ಮಾಡಿ ದನು. (೧೭ನೇ ದಿಶಂಬರ ೧೫೬೭), ಎರಡೂ ಸುರಂಗಗಳು ಒಮ್ಮೆಲೇ ಹಾರ ತಕ್ಕವಿದ್ದವು; ಆದರೆ ದೈವವಶದಿಂದ ಅವು ಒಮ್ಮೆಲೇ ಹಾರಲಿಲ್ಲ. ಮೊಗಲರು ಎರಡೂ ಸುರಂಗಗಳು ಹಾರಿದವೆಂದು ತಿಳಿದುಕೊಂಡರು. ದುರ್ಗದ ಗೋಡೆಯು

  1. Silver and gold were reckoued at the rate of earth. ” A. N. Beveridge II 467-8.

ಈಗಿನ ಕಾಲದಲ್ಲಿ ಈ ತರದ ತೋಪುಗಳಿಗೆ ಮಹತ್ವ ಕೊಡಲಿಕ್ಕೆ ಬರುವಂತಿಲ್ಲ; ಆದರೆ ಅಕಬರನ ಕಾಲದಲ್ಲಿ ಈ ತರದ ತನುಗಳು ಅತಿ ವಿರಳವಾಗಿದ್ದವೆಂದು ಹೇಳಬಹುದು,