ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮಿಭೂತ ಚಿತೋಡ, ಹಾರಿಹೋದದ್ದನ್ನು ನೋಡಿದರು. ಕೂಡಲೇ ಅವರು ಕೋಟೆಯನ್ನು ಪ್ರವೇಶ ಮಾಡುವದಕ್ಕೆ ಹೊರಟರು. ಆಗ ರಜಪೂತರಿಗೂ ಮೊಗಲರಿಗೂ ಭಯಂಕರವಾದ ಯುದ್ಧವಾಯಿತು. ಈ ಸಮಯದಲ್ಲಿ ಎರಡನೇ ಸುರಂಗವು ಹಾರಿ ಭಯಂಕರ ಸಪ್ಪಳವನ್ನುಂಟುಮಾಡಿತು. ಇದರಿಂದ ಕೋಟೆಯ ಗೋಡೆಯ ಮೇಲೆ ನಿಂತು ಯುದ್ಧ ಮಾಡುತ್ತಿರುವ ರಜಪೂತವೀರರು ಹಾರಿಬಿದ್ದು ಪ್ರಾಣಬಿಟ್ಟರು. ಈ ವೇಳೆ ಯಲ್ಲಿ ಎರಡೂ ಸೈನ್ಯಗಳಲ್ಲಿ ಭಯಂಕರ ಪ್ರಾಣಹಾನಿಯಾಯಿತು. ದೊಡ್ಡ ದೊಡ್ಡ ಕಲ್ಲುಗಳೂ, ಶವಗಳೂ ಬಹು ದೂರದವರೆಗೆ ಹೋಗಿಬಿದ್ದವು.+ ಈ ವಿಪತ್ತಿನಲ್ಲಿ ಮೊಗಲರ ೫೦೦ ಮಂದಿ ಉತ್ತಮ ಸೈನಿಕರು ಸತ್ತು ಹೋದರು. ಇವರಲ್ಲಿ ಸೈಯದ ಜಲಾಲುದ್ದೀನ ಮೊದಲಾದ ಪ್ರಖ್ಯಾತ ಅಮೀರ ಮತ್ತು ಸೇನಾಪತಿಗಳಿದ್ದರು. * ಈ ಸಾರೆ ನಾಲ್ಕೂ ಕಡೆಯಲ್ಲಿ ಯುದ್ಧವು ಭಯಂಕರ ರೀತಿಯಿಂದ ನಡೆ ಯಿತು. ಪೂರ್ವತೋರಣದಲ್ಲಿ ಅಸಸಖಾನ ತೋಫಿನ ಹತ್ತರಿರುವ ಸುರಂಗವು ಹಾರಿ ೩೦ ಮಂದಿ ರಜಪೂತವೀರರು ಸತ್ತರು. ಮೊಗಲರಲ್ಲಿಯೂ ಅನೇಕರು ಮೃತ್ಯು ಮುಖದಲ್ಲಿ ಬೀಳತೊಡಗಿದರು. ಈ ಮೇರೆಗೆ ಎರಡೂ ಬಣದ ಅಸಂಖ್ಯ ಸೈನಿಕರು ಆಹತರಾಗಹತ್ತಿದರು ಮೊದಲನೇ ಸುರಂಗವು ಹಾರಿದ ಮೇಲೆ ಸುಮಾ ರು ಎರಡು ತಿಂಗಳವರೆಗೆ ಒಂದೇಸವನೆ ಇರ್ಬಣದ ನಡುವೆ ಭಯಂಕರ ಯುದ್ಧವು ನಡೆಯಿತು. ಅಕಬರನು ತನ್ನ ಸೈನ್ಯವನ್ನು ಬೇಕಾದಷ್ಟು ಬೆಳೆಸಬಲ್ಲವನಾಗಿದ್ದನು; ಆದರೆ ರಜಪೂತರಿಗೆ ಈ ಅನುಕೂಲತೆಯು ಇರಲಿಲ್ಲ. ಅಕಬರನು ರಾಜಧಾನಿ ಯಿಂದ ಹೊಸ ಸೈನ್ಯವನ್ನು ತರಿಸಹತ್ತಿದನು. ಇದನ್ನು ನೋಡಿ ರಜಪೂತರು ಹೆದ ರಲಿಲ್ಲ. ಬೇರೆ ಯಾವ ಜನಾಂಗದವರಾಗಿದ್ದರೂ ಈ ಸಮಯದಲ್ಲಿ ಶತ್ರುಗಳಿಗೆ ಶರಣುಹೋಗುವ ಆಲೋಚನೆಯನ್ನು ಮಾಡುತ್ತಿದ್ದರು; ಆದರೆ ರಜಪೂತರಲ್ಲಿ ಈ ಆಲೋಚನೆಯು ಬರಲಿಲ್ಲ. ಇಷ್ಟೇ ಅಲ್ಲ; ಬೆಳೆಯುತ್ತಿರುವ ಶತ್ರುಸೈನ್ಯವನ್ನು ನೋಡಿ ಅವರ ವೀರತ್ವವೂ, ಉತ್ಸಾಹವೂ ಹೆಚ್ಚಾಗತೊಡಗಿತು. ಈ ಮಾತನ್ನು ಮುಸಲ್ಮಾನ ಇತಿಹಾಸಕಾರರು ಅಭಿಮಾನವಿಲ್ಲದೆ ಒಪ್ಪಿಕೊಂಡಿದ್ದಾರೆ. ಸೂರ್ಯ +ಮುಸಲ್ಮಾನ ಇತಿಹಾಸಕಾರರು ಈ ಸಂಗತಿಯ ವರ್ಣನೆಯನ್ನು ಮಾಡಿದ್ದು ಹೇಗಂದರೆ - It 18 notorions that stones of 200 mಶo8 were carried to a distance of three or four kos from the walls and bodies of men who had been burnt were found. TA• Ellist V. 827