ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ M ಮಹಾರಾಣಾ ಪ್ರತಾಪಸಿಂಹ ತೋರಣವನ್ನು ರಕ್ಷಿಸುತ್ತಿರುವ ಸಹಿದಾಸನು ಯುದ್ಧದಲ್ಲಿ ಮಡಿದನು. ಇವನ ಸ್ಥಳ ವನ್ನು ಪುತ್ತನು ಸ್ವೀಕರಿಸಿ, ಅಪ್ರತಿಮ ಶೂರತನದಿಂದ ಯುದ್ಧವನ್ನು ನಡೆಸಿದನು. ಪುತ್ರನ ಸಹಾಯಾರ್ಥವಾಗಿ ಇವನ ಜನನಿ-ಸಹೋದರಿ~-ಭಾರ್ಯೆಯರು ವೀರವೇಷದಿಂದ ಯುದ್ಧಭೂಮಿಯನ್ನು ಪ್ರವೇಶಮಾಡಿದರು. ಇವರನ್ನು ನೋಡಿ ಅನೇಕ ರಜಪೂತಲಲನೆಯರು ಶಸ್ತ್ರಗಳನ್ನು ಧರಿಸಿ ಕಾಳಗದ ಸ್ಥಳಕ್ಕೆ ಬಂದರು. ಈ ರಜಪೂತ ವೀರನಾರಿಯರ ಬಾಣಗಳಿಂದ ಪೂರ್ವಬಾಗಿಲದ ಇಕ್ಕಟ್ಟಾದ ಮಾರ್ಗ ದಲ್ಲಿರುವ ಮೊಗಲರ ಸೈನ್ಯವು ಚದುರಿಸಲ್ಪಟ್ಟಿತು. ಈ ಕಾಳಗದಲ್ಲಿ ಪುತ್ರನ ವೃದ್ದ ಜನನಿಯ ಬಳಿಯಲ್ಲಿ, ಅವನ ಹೆಂಡತಿಯ ಚಿರನಿದ್ರಿತಳಾದಳು. ಪುತ್ರನ ಸಂಸಾ ರದ ಯಾವತ್ತು ಬಂಧನಗಳು ಕಡಿದುಹೋದವು-ಸಂಸಾರದಲ್ಲಿ ತನ್ನ ವರೆನ್ನುವವ ರಾರೂ ಉಳಿಯಲಿಲ್ಲ. ಆಗ ಪುತ್ತನು ಜನನಿಯಂತಿರುವ ಜನ್ಮಭೂಮಿಯ ಸಲು ವಾಗಿ ಆತ್ಮಯಜ್ಞ ಮಾಡುವ ಪ್ರಬಲವಾದ ಇಚ್ಛೆಯನ್ನು ಹೊಂದಿದನು. ಅದರಿಂದ ಅವನು ಹೆಚ್ಚು ಧೈರ್ಯವನ್ನವಲಂಬಿಸಿದನು. ಅವನ ಅದ್ಭುತವಾದ ಉದಾಹರಣೆ ಯೂ ಅಪೂರ್ವ ಉತ್ಸಾಹವಾಣಿಯೂ ರಜಪೂತರ ಧಮನಿಗಳಲ್ಲಿ ದೇವಶಕ್ತಿಯ ಸಂಚಾರವನ್ನುಂಟುಮಾಡಿದವು. ಈ ಕಡೆಯಲ್ಲಿ ಜಯಮಲ್ಲನಿಗೆ ಸ್ವಲ್ಪು ಸಹ ವಿಶ್ರಾಂತಿಯಿರಲಿಲ್ಲ. ವಿಷಮ ಸಂಕಟಗಳೊದಗಿ ಹಿಮ್ಮೆಟ್ಟುವ ಸಮಯ ಬಂದಾಗ್ಗೆ ರಜಪೂತರು, ಸೇನಾಪತಿ ಯಾದ ಜಯಮಲ್ಲನ ಮೂರ್ತಿಯನ್ನು ನೋಡಿದ ಕೂಡಲೇ ಪುನಃ ನವೀನ ಉತ್ಸಾಹವನ್ನು ಹೊಂದುತ್ತಿದ್ದರು. ಶತ್ರುಗಳ ಸುರಂಗಗಳಿಂದ ಭಗ್ನ ವಾದ ಕೋಟೆ ಯ ಗೋಡೆಗಳಲ್ಲಿ ಸಣ್ಣ ಸಣ್ಣ ತೋಸುಗಳನ್ನು ಹಚ್ಚಿ, ಶತ್ರುಗಳನ್ನು ತಡೆಯುತ್ತಿ ದ್ದರು, ಎಡಬಲಗಳಲ್ಲಿರುವ ಬುರಜುಗಳ ಕಿಡಿಕಿಗಳಿಂದ ಗುಂಡುಗಳನ್ನು ಹಾರಿಸು ತ್ತಿದ್ದರು. ಇದರಿಂದ, ಮುಂದಕ್ಕೆ ಸಾಗಿಬರುವ ಮೊಗಲರಲ್ಲಿಯ ಬಹು ಜನರು ಇವರ ಗುರಿಯಿಟ್ಟ ಬಾಣಗಳಿಗೆ ಆಹುತಿಯಾಗುತ್ತಿದ್ದರು. ರಜಪೂತರು ಈ ಸಮ ಯದಲ್ಲಿ ತಮಗೊದಗಿದ ಅಲ್ಪಾವಕಾಶದಲ್ಲಿಯೇ ಕೋಟೆಯ ಗೋಡೆಗಳನ್ನು ಸುಧಾರಿಸಿ, ಒದಗಿದ ಭಯವನ್ನು ದೂರಮಾಡಿಕೊಳ್ಳುತ್ತಿದ್ದರು. ಈ ಮೇರೆಗೆ ಅನೇಕ ದಿವಸಗಳ ವರೆಗೆ ಅತ್ಯದ್ಭುತ ಯುದ್ಧವು ನಡೆಯಿತು. ಅಕಬರನು ಈ ತರದ ಸಾಹಸಿಗಳಾದ ವೈರಿಗಳೊಡನೆ ಯುದ್ಧ ಮಾಡು ವದು ಭಯಂಕರ ವ್ಯಾಪಾರವೆಂದು ಭಾವಿಸಿದನು; ಯಾಕಂದರೆ ರಜಪೂತರ