ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಭೂತ ಚಿತೋಡ. ೫ S ಅಸಂಖ್ಯ ಸೇನೆಯು ನಾಶವಾಗಿದ್ದರೂ, ಅವರ ಉತ್ಸಾಹವು ಕಡಿಮೆಯಾಗದೆ, ಹೆಚ್ಚುತ್ತ ನಡೆದಿತ್ತು. ಈ ಪ್ರಸಂಗದಲ್ಲಿ ಸಾವಕಾಶವಾಗಿ ಕೌಶಲ್ಯದಿಂದ ಕಾರ್ಯ ಸಾಧಿಸಿಕೊಳ್ಳುವದು ಯೋಗ್ಯವೆಂದು ವಿಚಾರಿಸಿದನು. ಚಿತೋಡದ ಕೋಟೆಯು ಒಂದು ಗುಡ್ಡದ ತುದಿಯಲ್ಲಿತ್ತು. ಅದರ ಗೋಡೆಗಳು ನಾಶಮಾಡಲಿಕ್ಕೆ ಅಸಾ ಧ್ಯವಾದವುಗಳಾಗಿದ್ದವು; ಮತ್ತು ಕೋಟೆಯಲ್ಲಿ ಸಾಕಷ್ಟು ಆಹಾರದ ಸದಾ ರ್ಧಗಳ ಸಂಗ್ರಹವೂ, ಜನಬಲವೂ ಇದ್ದಿತು. ಈ ತರದ ಸ್ಥಾನವನ್ನು ವಶಮಾಡಿ ಕೊಳ್ಳುವದು ಸುಲಭಸಾಧ್ಯವಾದ ಕಾರ್ಯವಾಗಿರಲಿಲ್ಲ. ಅದರಿಂದ ಅವಸರ ಮಾಡಿ ಉಪಯೋಗವಿರಲಿಲ್ಲ; ಯೋಗ್ಯಕಾಲ ಬರುವವರೆಗೆ ಮಾರ್ಗಪ್ರತೀಕ್ಷೆ ಮಾಡಬೇಕಾಗಿದ್ದಿತು. ಕಾರಣ ಅಕಬರನು ಈ ಸಮಯದಲ್ಲಿ ಆಲೋಚಿಸಿದ್ದೇ ನಂದರೆ - ರಜಪೂತರ ಮದ್ದುಗುಂಡುಗಳ ಸಂಗ್ರಹವು ಒಂದಿಲ್ಲೊಂದು ದಿವಸ ತೀರಲೇಬೇಕು, ಒಳಗಿರುವ ಆಹಾರದ ಪದಾರ್ಥಗಳೂ ತೀರುವವು; ಚಿತೋ ಡದ ಸೈನ್ಯವು ಒಂದಿಲ್ಲೊಂದು ದಿವಸ ನಿಶೆಷವಾಗುವದು; ಯಾಕಂದರೆ ಒಳ ಗಿನ ಜನರ ಸಹಾಯಕ್ಕಾಗಿ ಹೊರಗಿನಿಂದ ಹೊಸ ಸೈನಿಕರು ಬರುವ ಸಂಭವ ವಿಲ್ಲ. ಕಾರಣ ನನಗೆ ಅನುಕೂಲವಾದ ಸಮಯವು ನಿಶ್ಚಯವಾಗಿ ಒದಗು ವದು; ಆದರೆ ನಾನು ಆ ವರೆಗೆ ಮಾರ್ಗಕಾದುಕೊಂಡಿದ್ದು, ಬಿಡದಲೇ ಯುದ್ಧ ನಡೆಸಲೇಬೇಕು. ” ಈ ಮೇರೆಗೆ ಪುಷ್ಯಮಾಸವು ಹೋಯಿತು, ಮಾಘಮಾಸವು ಹೋಯಿತು; ಫಾಲ್ಗುಣಮಾಸವು ಬಂದಿತು; ಆದರೂ ಯುದ್ಧವು ನಡೆದೇ ಇತ್ತು. ಇದರಿಂದ ಎರಡೂ ಬಣಗಳು ದಿನಾಲು ನಿಸ್ತೇಜವಾಗುತ್ತ ನಡೆದವು. ಈ ಸಮಯದಲ್ಲೊಂದು ದಿವಸ ರಾತ್ರಿಯ ವೇಳೆಯಲ್ಲಿ, ಪಶ್ಚಿಮಭಾಗದಲ್ಲಿ ಹನುಮಾನ್‌ಪೋಲದಲ್ಲಿಯ ಗೋಡೆಯ ಕೆಲವು ಭಾಗವು, ಮೊಗಲರ ಸುರಂಗ ದಿಂದ ಹಾರಿಹೋಯಿತು. ಅದರಿಂದ ಆ ಗೋಡೆಯ ಸುಧಾರಣೆಗಾಗಿ ರಜವೂ ತರು ಕೂಡಿದರು. ಕೆಲವು ಜನರು ದೀವಟಿಗೆಗಳನ್ನು ಹಿಡಿದಿದ್ದರು, ಕೆಲವರು ಮೊಗಲರ ಆಕ್ರಮಣವನ್ನು ಎದುರಿಸಲಿಕ್ಕೆ ಸಿದ್ಧರಾಗಿ ನಿಂತಿದ್ದರು. ಕೆಳಭಾಗದಲ್ಲಿ ಮೊಗಲ ಸೈನಿಕರು ಸಿದ್ದರಾಗಿ, ಕೆಲವರು ಗುಡ್ಡವನ್ನೇರುವದಕ್ಕೆ ಯತ್ನಿ ಸುತ್ತಿ ದ್ದರು. ಈ ಸಮಯದಲ್ಲಿ ಅಕಬರನು ದೀಪಮಂಚದ ಹತ್ತಿರ ಕುಳಿತು ರಜವೂ ತರ ಯುದ್ಧ ಮಾಡುವ ಪದ್ಧತಿಯನ್ನು ನೋಡುತ್ತಿದ್ದನು. ಆಗ ಅವನು ಅಧಿಕಾರ