ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MY ಮಹಾರಾಣಾ ಪ್ರತಾಪಸಿಂಹ, •vvvv vv vv vv vv , , ,vv vvv vv vvvvv vv , vv vv • Tv vv vvv ವನ್ನು ನಡೆಸುವ ಸೇನಾಪತಿಯಂತಿರುವ ಒಂದು ಕಠೋರ ಮೂರ್ತಿಯನ್ನು ಕಂಡನು. ಕೂಡಲೇ ಸಮೀಪದಲ್ಲಿದ್ದ ಬಂದೂಕವನ್ನು ತೆಗೆದುಕೊಂಡು, ಗುರಿ ಯಿಟ್ಟು ಹೊಡೆದನು. ಇದರಿಂದ ಆ ಮೂರ್ತಿಯು ಆಹತವಾಗಿ ಬಿದ್ದು ಬಿಟ್ಟಿತು. ಹಿಂದುಗಡೆಯಲ್ಲಿ ಇವನೇ ವೀರಚೂಡಾಮಣಿಯಾದ ಜಯಮಲ್ಲನೆಂದು ಗೊತ್ತಾ ಯಿತು. ರಜಪೂತರ ಅವಸ್ಥೆಯು ಮೊದಲೇ ಶೋಚನೀಯವಾಗಿದ್ದಿತು; ಹೀಗೆ ಅಕಸ್ಮಾತ್ತಾಗಿ ಜಯಮಲ್ಲನು ಸತ್ತದ್ದನ್ನು ನೋಡಿ, ರಜಪೂತರು ಧೈರ್ಯಗುಂದಿ ದರು ಅವರು ಚಿತೋಡದ ರಕ್ಷಣೆಯ ವಿಷಯವಾಗಿ ನಿರಾಶರಾದರು. ಕೂಡಲೇ ಅವರು ತಮ್ಮ ಪದ್ಧತಿಯಂತೆ ಧರ್ಮರಕ್ಷಣೆಯ ಮಾರ್ಗವನ್ನವಲಂಬಿಸಿದರು, ದುರ್ಗದಲ್ಲಿ ಜೋಹಾರವ್ರತವನ್ನಾಚರಿಸುವ ಅಪ್ಪಣೆಯಾಯಿತು. ಶಿಶೋದಿಯಾ, ರಾಠೋರ, ಚೌಹಾಣ ಮೊದಲಾದ ಕ್ಷತ್ರಿಯರ ಪ್ರತಿಮನೆಯಲ್ಲಿ ಜೋಹಾರದ ಸಿದ್ದತೆಯು ನಡೆಯಿತು. ಅನೇಕ ಚಿತೆಗಳು ತಯಾರಾದವು. ೯ ಮಂದಿ ರಾಣಿ ಯರೂ, ಐಯ್ಯರು ರಾಜಕುಮಾರಿಯರೂ, ಸಾಮಂತಸರದಾರರ ಅಸಂಖ್ಯ ಹೆಂಡಿರು-ಮಕ್ಕಳೂ ತಮ್ಮ ಕೂಸುಗಳೊಡನೆ ಆನಂದದಿಂದ ಅಗ್ನಿಯಲ್ಲಿ ಪ್ರವೇಶಿ ಸಿದರು. X ಎಂಟು ಸಾವಿರ ರಜಪೂತವೀರರು ನಡೆದುಬಂದ ಪದ್ಧತಿಯಂತೆ ಏಕ ತ್ರರಾಗಿ ಕಡೆಯ ತಾಂಬೂಲವನ್ನು ಗ್ರಹಿಸಿದರು; ಮತ್ತು ಹಳದೀ ವಸ್ತ್ರಗಳನ್ನು ಧರಿಸಿ, ಜೀವನಾಹುತಿಗಾಗಿ ಮುಂದೆ ಸಾಗಿದರು. ಇವರಲ್ಲಿ ಒಬ್ಬನೂ ಹಿಂದಿರುಗ “The fierce force of Janual becaine visible throng the flashing of the fire of the cannon and guns” Badaoni, Lowe. P. 107

  • ಜಯಮ್ಮಲ್ಲನನ್ನು ತಾನು ಹೊಡೆದದ್ದಕ್ಕಾಗಿ ಅಕಬರನಿಗೆ ಬಹಳ ಆನಂದವಾಯಿತು. ಅಕಬರನು ತನ್ನ ಈ ಬಂದೂಕಿಗೆ ಸಂಗ್ರಾಮ' ವೆಂಬ ಹೆಸರಿಟ್ಟನು Rajasthan, Vol. 1, P. 267. Akhvarnama Vol II, P. 472, ಅಕಬರನ ಈ ಬಂದೂಕಿಗೆ ದುರಸ್ತೆ, ಅಂದಾಜ ( ನೇಟಗುರಿ ) ಎಂಬ ಹೆಸರಿತ್ತೆಂದು ಜಹಾಂಗೀರನು ಹೇಳಿದ್ದಾನೆ Memoirs, ( Price ) P. 103.

• ಮೂರು ಸಾವಿರ ಸಾಮಂತ ಸರದಾರ ರಮಣಿಯರು ಚಿತಾನಲದಲ್ಲಿ ಬಿದ್ದು, ಪ್ರಾಣಬಿ ೬ರಂದು ಅಬಲಫಜಲನು ಹೇಳಿದ್ದಾನೆ.