ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#L ಮಹಾರಾಣಾ ಪ್ರತಾಪಸಿಂಹ, wwwwwwwwwwwwwwwwwwwww ವನ್ನು ಹೇಳಲಸಾಧ್ಯವು. ಮಹಾವೀರ ಪುತ್ರನು ಒಬ್ಬನೇ ಅಸಂಖ್ಯ ಸೈನಿಕರೊ ಡನೆ ಬಹುಕಾಲದವರೆಗೆ ಅಮಾತ್ಯ ರಾಕ್ಷಸನಂತೆ ಯುದ್ಧ ಮಾಡಿ, ಕಡೆಯಲ್ಲಿ ರಣ ಭೂಮಿಯಲ್ಲಿ ಬಿದ್ದನು. ಆದರೂ ಅವನ ಪ್ರಾಣವಿನ್ನೂ ಹೋಗಿರಲಿಲ್ಲ. ಒಂದು ಆನೆಯು ಇವನ ಅಚೇತನದೇಹವನ್ನು ತನ್ನ ಸೊಂಡಿಯಲ್ಲಿ ಹಿಡಿದುಕೊಂಡು ಹೋಗುತ್ತಿರುವದನ್ನು ಅಕಬರನು ನೋಡಿದನು. ಅಕಬರನಿಗೆ ಇವನ ಪರಿಚ ಯವು ಬಹಳವಾಗಿರಲಿಲ್ಲ. ಮಾವುತನು ಇವನು ಒಬ್ಬ ರಜಪೂತ ಸೇನಾಪತಿ ಯೆಂದೂ, ಇವನ ಹೆಸರು ಪುತ್ರನೆಂದೂ ಅಕಬರನಿಗೆ ಹೇಳಿದನು. ಆದರೆ ತುಸು ವೇಳೆಯಲ್ಲಿ ಬಾಲವೀರನಾದ ಪುತ್ತನು ಚಿರನಿದ್ರೆಯನ್ನೈದಿದನು. ಈ ವೇಳೆಯಲ್ಲಾದ ಚಿತೋಡದ ಅವಸ್ಥೆಯನ್ನು ಸರಿಯಾಗಿ ವರ್ಣಿಸುವದು ಸಾಧ್ಯವಲ್ಲ. ಕೋಟೆಯಲ್ಲಿ ಎಂಟು ಸಾವಿರ ರಜಪೂತರ ಹೊರತು ೪೦ ಸಾವಿರ ಒಕ್ಕಲಿಗ ಮುಂತಾದವರಿದ್ದರು. ಇವರು ಮೊದಲು ಚಿತೋಡದುರ್ಗದ ಕೆಳಭಾಗ ದಲ್ಲಿ ಅನೇಕ ಕಡೆಯಲ್ಲಿ ವಾಸಮಾಡುತ್ತಿದ್ದರು. ಮೊಗಲರ ಆಕ್ರಮಣಕ್ಕಿಂತ ಮೊದಲು ಇವರು ಕೋಟೆಯಲ್ಲಿ ಆಶ್ರಯಹೊಂದಿದ್ದರು. ಇವರಲ್ಲಿಯ ಸಮರ್ಧ ರಾದ ಮನುಷ್ಯರು ಯುದ್ಧದಲ್ಲಿ ವಾಹನ ಕಾರ್ಯವನ್ನೂ, ಪ್ರಹರಿಯ ಕಾರ್ಯ ವನ್ನೂ ಕೈಗೊಂಡಿದ್ದರು. ಬಾದಶಾಹೀ ಸೈನಿಕರು ಆಡಂಬರದಿಂದ ಕೋಟೆಯನ್ನು ಪ್ರವೇಶಿಸುವ ಮೊದಲೇ ಬಹುಜನ ರಜಪೂತರು ಮರಣಹೊಂದಿದ್ದರು. ಉಳಿದ. ವರಲ್ಲಿಯ ಕೆಲವರು ದೇವರ ಗುಡಿಗಳಲ್ಲಿ ಅಡಗಿಕೊಂಡಿದ್ದರು, ಯಾಕಂದರೆ ಈ ವೇಳೆಯಲ್ಲಿ ದೇವರು ತಮ್ಮನ್ನು ರಕ್ಷಿಸುವನೆಂದೂ, ಗುಡಿಯಿಂದ ಹೊರಗೆಳೆದು ಯಾರೂ ತಮ್ಮನ್ನು ಕೊಲ್ಲಲಾರರೆಂದೂ ಅವರು ಭಾವಿಸಿದ್ದರು. ಕೆಲವರು ತಮ್ಮ ಮನೆಯಲ್ಲಿ ಅಡಗಿಕೊಂಡಿದ್ದರು. ಕೆಲವರು ಮಾರ್ಗದಲ್ಲಿ ಶತ್ರುಗಳಿಂದ ಮರಣ ಹೊಂದುತ್ತಿದ್ದರು. ರಜಪೂತರೊಡನಾದ ಅಕಬರನ ಯುದ್ಧವು ಬೆಳಗಾಗುತ್ತಲೇ ಮುಗಿದುಹೋಗಿತ್ತು; ಯಾಕಂದರೆ ಅಕಬರನ ಶತ್ರುಗಳಾದ ರಜಪೂತರಲ್ಲಿ ಯಾರೂ ಈ ವೇಳೆಯಲ್ಲಿ ಜೀವಿಸಿರಲಿಲ್ಲ.* ಅಕಬರನು ಇದನ್ನು ತಿಳಿದಿದ್ದರೂ ಸಹ, ಉಳಿದ ಯಾವತ್ತು ಜನರನ್ನು ಕೊಲ್ಲುವ ಅಪ್ಪಣೆಮಾಡಿದುದು ದುಃಖದ ವಿಷಯವಾಗಿದೆ.

  • ಈ ಯುದ್ದದಲ್ಲಿ ಯಾವತ್ತೂ ರಜಪೂತರು ಮಡಿದುಹೋಗಿದ್ದರೆಂದೂ, ಇವರ ಉಪವಿ೦ತ ಗಳ ಭಾರವು ೭೪ ಮಣವಾಯಿತೆಂದೂ ಹೇಳುತ್ತಿರುವರು ಒಂದು ಮಣಕ್ಕೆ ೪ ಸೇರುಯೆಂದು