ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರತಾಪನ ರಾಜ್ಯ ಪ್ರಾಪ್ತಿ, M ಅಸಫಖಾನನು ಮೃತ್ಯು-ಮುಖದಲ್ಲಿ ಬಿದ್ದನು. - ಉದಯಸಿಂಹನು ಚಿತೋಡವನ್ನು ಬಿಟ್ಟ ತರುವಾಯ, ಪರ್ವತ-ಕಂದರ ಗಳ ಮಧ್ಯದಲ್ಲಿ ಉದಯಸಾಗರದ ಸಮೀಪದಲ್ಲಿರುವ ನಾಚಾಕಿ ಎಂಬ ಸಣ್ಣ ಅರಮನೆಯಲ್ಲಿ ವಾಸಿಸಹತ್ತಿದನು. ಇವನು ಗತಜೀವನದ ಬಗ್ಗೆ ಪಶ್ಚಾತ್ತಾಪ ಪಡುತ್ತ ಬಹು ವ್ಯಸನದಿಂದ ಕಾಲಕಳೆಯುತ್ತಿದ್ದನು. ಪ್ರತಾಪಸಿಂಹನು ಇದರ ಸಮೀಪದಲ್ಲಿಯೇ ಇರುವ ಕಮಲಮೀರದುರ್ಗದಲ್ಲಿ ವಾಸಮಾಡುತ್ತಿದ್ದನು. ಉದಯಸಿಂಹನು ವೀರನಾದ ಪ್ರತಾಪಸಿಂಹನನ್ನು ವಿಶೇಷವಾಗಿ ಪ್ರೀತಿಸಲಿಲ್ಲ. ಅವನು ಜಯಮಲ್ಲನೆಂಬ ಸಣ್ಣ ಮಗನನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಆದರೆ ಪ್ರತಾಪಸಿಂಹನೇ ಸಂಗ್ರಾಮಸಿಂಹನ ವಂಶಜರಲ್ಲಿ ಯೋಗ್ಯ ಮನುಷ್ಯನಾ ಗಿದ್ದನು. ಇವನು ತಂದೆಯಲ್ಲಿದ್ದ ಯಾವ ದೋಷವನ್ನೂ ಹೊಂದಿರಲಿಲ್ಲ. ಕೆಲವು ಕಡೆಯಲ್ಲಿ ತಂದೆಯ ಗುಣಗಳು ಮಗನಲ್ಲಿರದೆ ಅಜ್ಜನ ಗುಣಗಳು ಮೊಮ್ಮಗನಲ್ಲಿ ರುವದನ್ನು ನೋಡುತ್ತೇವೆ. ಅದರಂತೆ ಸಂಗ್ರಾಮಸಿಂಹನ ಶೌರ್ಯಾದಿ ಗುಣ ಗಳು ಉದಯಸಿಂಹನಲ್ಲಿರಲಿಲ್ಲ; ಪ್ರತಾಪಸಿಂಹನು ಆ ಎಲ್ಲ ಗುಣಗಳಿಂದ ಕೂಡಿ ದವನಾಗಿದ್ದನು. ಪ್ರತಾಪಸಿಂಹನು ಎಷ್ಟೋ ಸಾರೆ ದುಃಖದಿಂದ ಅನ್ನುತ್ತಿದ್ದು ದೇನಂದರೆ- ಸಂಗ್ರಾಮಸಿಂಹನ ತರುವಾಯ, ಉದಯಸಿಂಹನು ಮಹಾರಾಣಾ ನಾಗದಿದ್ದಲ್ಲಿ ಮೇವಾಡಕ್ಕೆ ಈ ತರದ ದುರ್ದೆಶೆಯುಂಟಾಗುತ್ತಿದ್ದಿಲ್ಲ. ?? ಸಾಮಾನ್ಯತಃ ಉದಯಸಿಂಹನೆಂಬ ಹೆಸರಿನಲ್ಲಿಯೇ ದೋಷವಿತ್ತೆಂದು ಹೇಳಬಹುದು. ಒಬ್ಬ ಉದಯಸಿಂಹನ ದೋಷದಿಂದ ಚಿತೋಡವು ಕೈ ಬಿಟ್ಟಿತು; ಮೇವಾಡದ ಗೌರವವು ನಷ್ಟವಾಯಿತು; ಮೇವಾಡದ ರಾಜಧಾನಿಯಲ್ಲಿ ಯವ ನರ ಪತಾಕೆಯು ಹಾರಹತ್ತಿತು. ಇನ್ನೊಬ್ಬ ಉದಯಸಿಂಹನು ಜೋಧಪುರದ 8 ಇವನ ಹೆಸರು ಅಬ್ದುಲ್ ಮಜೀದಂ ಆದರೆ ಅಸಫಖಾ ಎಂಬ ಉಪಾಧಿಯನ್ನು ಹೊಂದಿ ದ್ದನು ಅಕಬರನ ದರಬಾರದಲ್ಲಿರುವ ಶ್ರೇಷ್ಠರಾದ ನಾಲ್ಕು ಜನ ಅಮೀರರಿಗೆ ಅಸಫಖಾಯಂ ಬ ಬಿರುದಿದ್ದಿತು ಇವರಲ್ಲಿ ಇವನು ಮೊದಲಿನವನು ಚಿತ್ರದ ಧ್ವಂಸವಾದನಂತರ ಆರು ವರುಷ ಗಳ ಮೇಲೆ ಇವನು ತೀರಿಕೊಂಡನು, ಸಾಮ್ರಾಜ್ಞೆಯಾದ ನೂರಜಹಾನಳ ಸಹೋದರನು ಮೂರ ನೆಯ ಅಸಫಖಾ ಆಗಿದ್ದನು. ಅಬ್ದುಲ್ ಮಜೀದನು ಸನ್ ೧೬೦೪ ರಲ್ಲಿ ಮಾನಸಿಂಹನ ಪ್ರತಿನಿಧಿ ಯಾಗಿ ಬಂಗಾಲದ ಸುಭೇದಾರನಾಗಿ ಹೋಗಿದ್ದನೆಂಬದು ಸತ್ಯವಾದದ್ದಲ್ಲ ಚin, Blochman P. P. 368-369, 433, Stewart's History of Bengal ( Bangaba81 Edition ) P. 214