ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೨ ಮಹಾರಾಣಾ ಪ್ರತಾಪಸಿಂಹ M ಮಲ್ಲದೇವನ ಮಗನು, ಜೋಧಪುರವು ಮೊಗಲರ ವಶವಾದನಂತರ ಉದಯ ಸಿಂಹನು ತನ್ನ ಸಹೋದರಿಯಾದ ಜೋಧಬಾಯಿಯನ್ನು ಅಕಬರನ ಹಸ್ತದಲ್ಲಿ ಸಮರ್ಪಿಸಿ, ರಾಜ್ಯ ಚಾಲಕನಾಗಿ ದರಬಾರದಲ್ಲಿ ಆನಂದದಿಂದಿರಹತ್ತಿದನು; ಮತ್ತು ಸ್ವಜನಾಂಗದ ಅಭಿಮಾನವನ್ನು ತ್ಯಜಿಸಿ, ರಾಜ್ಯ ಚಾಲಕನಾದೆನೆಂದು ಗೌರವವನ್ನ ನುಭವಿಸತೊಡಗಿದನು ಈ ಉದಯಸಿಂಹನಿಂದ ರಾಜಪುತ್ರರ ಮತ್ತು ರಜಪೂತ ಜಾತಿಯ ಗೌರವವು ನಾಶವಾಯಿತು. ಕಾರಣ ಈ ಉಭಯ ಉದಯಸಿಂಹರ ಕಾಲದಲ್ಲಿ ರಜಪೂತರ ಗೌರವದ ಉದಯವಾಗದೆ, ಅಸ್ತವಾಯಿತೆಂದು ಹೇಳಲಿಕ್ಕೆ ಅಡ್ಡಿಯಿಲ್ಲ. ಉದಯಪುರಕ್ಕೆ ಕೋಟೆಯಿರಲಿಲ್ಲ; ಮತ್ತು ಶತ್ರುಸೇನೆಯು ರಾಜಸ್ತಾನ ವನ್ನು ಬಿಟ್ಟು ಹೋಗಿರಲಿಲ್ಲ. ಅದರಿಂದ ಉದಯಸಿಂಹನು ಎಷ್ಟೋ ದಿವಸ ಉದಯಪುರದಿಂದ ನೈಋತ್ಯಕ್ಕಿರುವ + ಗೋಗುಂಡಾದುರ್ಗದಲ್ಲಿ ವಾಸಮಾಡು ತ್ತಿದ್ದನು. ಗೋಗುಂಡವು ಪರ್ವತಶಿಖರದಲ್ಲಿರುವ ಸುಂದರವಾದ ಪಟ್ಟಣವು. ಇದು ಸಮುದ್ರಪಾತಳಿಯಿಂದ ಸುಮಾರು ೨೭೫೦ ಸೂಟು ಎತ್ತರದಲ್ಲಿದೆ. ಅರ ವಲೀ ಪರ್ವತದ ಮೇಲೆ ಇಷ್ಟು ಎತ್ತರದ ಮೇಲಿರುವ ಪಟ್ಟಣಗಳು ತೀರ ವಿರಳ ವಾಗಿವೆ ಇಷ್ಟು ಎತ್ತರವಾದ ಸ್ಥಳದಲ್ಲಿದ್ದರೂ, ಈ ಪಟ್ಟಣದಲ್ಲಿ ನೀರಿನ ಅನು ಕೂಲತೆಯು ಚನ್ನಾಗಿತ್ತು * ಈ ಸ್ಥಳದಲ್ಲಿ ಉದಯಸಿಂಹನು ೮೨ ವರುಷದವ ನಾಗಿ ತೀರಿಕೊಂಡನು. ಇವನಿಗೆ ೨೪ ಮಂದಿ ಗುಂಡುಮಕ್ಕಳಿದ್ದರು. ಇವರಲ್ಲಿ ಪ್ರತಾಪಸಿಂಹನು ಹಿರಿಯನು. ಆದರೆ ಉದಯಸಿಂಹನು ತನ್ನ ತರುವಾಯ, ಪ್ರತಾಪಸಿಂಹನು ಅರಸನಾಗುವಂತೆ ಮಾಡದೆ, ಜಗಮಲ್ಲನೆಂಬ ಸಣ್ಣ ಮಗನನ್ನು ಪಟ್ಟಕ್ಕೆ ಯೋಗ್ಯನೆಂದು ಆರಿಸಿದ್ದನು. ರಜಪೂತರಲ್ಲಿ ಹಿರಿಯಮಗನೇ ಪಟ್ಟಕ್ಕೆ ಬಾಧ್ಯಸ್ಥನಾಗಬೇಕೆಂಬದು ನಿಯಮವು; ಆದರೆ ಉದಯಸಿಂಹನು ಬಹುಕಾಲ ದಿಂದ ನಡೆದುಬಂದ ನಿಯಮವನ್ನು ಮೀರಿ, ಮರಣಕಾಲದಲ್ಲಿ ಬೇರೊಂದು ನೀಚ ತ್ವವನ್ನು ಪ್ರಕಟಗೊಳಿಸಿದನು. ಇದರಿಂದ ಝಾಲೋರದ ಅರಸನಾದ ಶೋಣಿ ಗುರು ಸರದಾರನು ಬಹಳ ಸಿಟ್ಟಾಗಿ ಪ್ರತಾಪಸಿಂಹನನ್ನು ಪಟ್ಟಕ್ಕೆ ಕುಳ್ಳಿರಿಸುವೆ + ಬ್ಲಾಕಮನ ಮತ್ತು ಬೆವರಿಜ್ ಈ ಉಭಯತರು ಇದಕ್ಕೆ ಗೋಗಾಂಡಾ ಎಂದು ಹೇಳಿದ್ದಾರೆ

  • Gazetteer, Vol. III P. 55.