ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ಇದು ತಮ್ಮ ಹಿರಿಯ ಅಣ್ಣನಾದ ಪ್ರತಾಪಸಿಂಹನದು. ತರುವಾಯ ಅವನು ಪ್ರತಾಪಸಿಂಹನನ್ನು ಗಾದಿಯ ಮೇಲೆ ಕುಳ್ಳಿರಿಸಿ, ಅವನಿಗೆ ಚಿತೋಡದ ಮಹಾ ರಾಣಾರು ಪೂರ್ವಕಾಲದಿಂದ ಧರಿಸುತ್ತ ಬಂದಿದ್ದ ಆಯುಧವನ್ನು ಕೊಟ್ಟನು. ಆಗ ಎಲ್ಲರೂ ಪ್ರತಾಪಸಿಂಹನಿಗೆ ಮೂರು ಸಾರೆ ನೆಲಮುಟ್ಟಿ ನಮಸ್ಕಾರಮಾಡಿ, ಚಿತೋ ಡದ ಮಹಾರಾಣಾನೆಂದು ಗೌರವಿಸಿದರು. ಜಗಮಲ್ಲನು ನಿಸ್ತಬ್ದನಾಗಿಹೋದನು. ಪ್ರತಾಪನಿಗೆ ದೈವವು ಸಹಾಯವಾಯಿತು. ಮಹಾರಾಣಾ ಪ್ರತಾಪಸಿಂಹರೇ ಜಯ ಎಂಬ ಉಚ್ಛ ಧ್ವನಿಯು ಎಲ್ಲ ಕಡೆಯಲ್ಲಿಯೂ ವ್ಯಾಪಿಸಿತು. ಹೀಗೆ ಮೇವಾಡದ ರಾಜಾಸನದ ಮೇಲೆ ಬಹು ದಿವಸಗಳ ಮೇಲೆ ಯೋಗ್ಯ ಮನುಷ್ಯನ ಪ್ರತಿಷ್ಠೆ ಯಾಯಿತು. ಪ್ರತಿವರ್ಷ ವಸಂತಕಾಲದ ಪ್ರಾರಂಭದಲ್ಲೊಮ್ಮೆ ರಜಪೂತರು ಗುಂಪಾಗಿ, ಬೇಟೆಯಾಡುವದಕ್ಕೆ ಹೋಗುತ್ತಿದ್ದರು. ಇದಕ್ಕೆ ಆಹೇರಿಯಾ ಉತ್ಸವವನ್ನು ದ್ದರು. ಜ್ಯೋತಿಷಶಾಸ್ತ್ರದ ನಿಯಮಾನುಸಾರವಾಗಿ ಈ ದಿವಸವನ್ನು ಗೊತ್ತುಮಾಡಿ ರುತ್ತಿದ್ದರು. ರಜಪೂತರು ಈ ಉತ್ಸವಕ್ಕಾಗಿ ಅನೇಕ ದಿವಸಗಳಿಂದ ಸಿದ್ಧತೆಯನ್ನು ಮಾಡುತ್ತಿದ್ದರು; ಈ ಸಮಯದಲ್ಲಿ ರಾಜಸ್ತಾನದ ಆಬಾಲವೃದ್ಧರೆಲ್ಲರಲ್ಲಿಯೂ ನವೀನ ಶಕ್ತಿಯುಂಟಾಗುತ್ತಿದ್ದಿತು; ಅದರಿಂದವರು ಅತೀವ ಉತ್ಸಾಹದಿಂದ ಬಹು ಜನರು ಒಟ್ಟುಗೂಡಿ, ಈ ಉತ್ಸವವನ್ನು ನೆರವೇರಿಸುತ್ತಿದ್ದರು. ಅಸಂಖ್ಯ ಅಡವಿಯ ಹಂದಿಗಳನ್ನು ಬೇಟೆಯಾಡುವದು ಈ ಉತ್ಸವದ ಮುಖ್ಯ ಉದ್ದೇಶವಾಗಿತ್ತು, ಈ ಬೇಟೆಯಲ್ಲಿ ಕೊಂದ ಮೃಗಗಳನ್ನು ಗೌರೀದೇವಿಗೆ ಸಮರ್ಪಿಸುತ್ತಿದ್ದರು. ಈ ದಿವಸದ ಬೇಟೆಯ ಫಲದಿಂದ, ಇಡೀ ವರ್ಷದ ಯುದ ದ ಶುಭಾಶುಭ ಫಲಗಳ ನಿರ್ಣಯ ಮಾಡುತ್ತಿದ್ದರು. ಅಂದರೆ ಆಹೇರಿಯದ ದಿವಸ ಬೇಟೆಯು ಸಾಕಷ್ಟು ದೊರೆತಲ್ಲಿ, ಆ ವರ್ಷ ಅಪಜಯವಿಲ್ಲ; ಹೀಗಾಗದೆ ಆಹೇರಿಯದಲ್ಲಿ ಬೇಟೆಯು ಚನ್ನಾಗಿ ದೊರೆಯದಿದ್ದಲ್ಲಿ ಆ ವರ್ಷ ಯುದ್ಧದಲ್ಲಿ ಜಯವಿಲ್ಲ. ಈ ಮಾತಿನ ಸತ್ಯಾ ಸತ್ಯತೆಯನ್ನು ನಾವು ಹೇಳಲಾರೆವು. ಆದರೂ ರಜಪೂತರಲ್ಲಿ ಈ ತರದ ದೃಢ ವಿಶ್ವಾಸವಿತ್ತೆಂಬದನ್ನು ಹೇಳಬಲ್ಲೆವು, ಬೇಟೆಯಾಡುವದು ಮುಗಿದನಂತರ ಒಂದು ಸ್ಥಳದಲ್ಲಿ ಅಡಿಗೆಮಾಡುತ್ತಿದ್ದರು. ಈ ವನಭೋಜನಕ್ಕೆ ಮಹಾರಾಣಾನು ತನ್ನ ಸಾಮಂತ-ಸರದಾರರೊಡನೆ ಬರುತ್ತಿದ್ದನು. ಪ್ರತಾಪಸಿಂಹನು ಆಹೇರಿಯಾ ಉತ್ಪ ವದ ದಿವಸವೇ ಸಿಂಹಾಸನವನ್ನೇರಿದನು. ಅದರಿಂದವನು ಪಟ್ಟಾಭಿಷೇಕವಾದ