ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ಆಲೋಚನೆಯನ್ನು ತೆಗೆದುಕೊಂಡು, ಇವರು ಸೂಚಿಸಿದ ಉತ್ತಮ ಆಲೋಚನೆ ಗಳಂತೆ ವರ್ತಿಸಿ, ರಜಪೂತರನ್ನು ಗೊತ್ತಿಗೆ ಹಚ್ಚಲು ಅವನು ಹಿಂಜರಿಯುತ್ತಿದ್ದಿಲ್ಲ. ಇವರ ಗುಪ್ತಾಲೋಚನೆಯು ಮೇವಾಡದ ಜಯಕ್ಕಾಗಿ-ಮೇವಾಡವನ್ನು ಹೇಗೆ ಜಯಿಸಿಕೊಳ್ಳಬೇಕು, ರಾಜಪುತ್ರರ ಗರ್ವವನ್ನು ಹೇಗೆ ಖಂಡಿಸಬೇಕು ಈ ಮೊದಲಾದ ಸಂಗತಿಗಳ ಸಲುವಾಗಿ ಪ್ರಾರಂಭವಾಯಿತು. ಬಹು ದೊಡ್ಡ ರಾಜ್ಯ ವನ್ನು ಬೆಳೆಸಲಿಕ್ಕೆ ಸಹಾಯಮಾಡಿದ ವೀರ ಮೊಗಲರು ಮೇವಾಡದ ಜಯಕ್ಕಾಗಿ ಉತ್ತು ಕರಾದರು. ಈ ಎಲ್ಲ ಅನುಕೂಲತೆಗಳನ್ನು ಹೊಂದಿದ ಅಕಬರನು ಸಾಮಾ ನ್ಯನಾದ ವೈರಿಯೇ? ಇಂತಹ ಪ್ರಚಂಡಶತ್ರುವಿನ ದೊಡ್ಡ ತುತ್ತಿನಿಂದ ಮೇವಾಡ ವನ್ನು ರಕ್ಷಿಸುವರಾರು? ಪ್ರತಾಪಸಿಂಹನು ಈ ಪ್ರಒಲಶತ್ರುವಿಗೆ ಎದುರಾಗಿ ನಿಲ್ಲಲಿಕ್ಕೆ ಸಿದ್ಧನಾದನು. ತನ್ನ ಆಧೀನದಲ್ಲಿರುವ ಅಲ್ಪಸಂಖ್ಯಾಕರಾದ ರಜಪೂತರ 'ಬಾಹುಬಲ, ವೀರತ್ವ, ಸ್ವದೇಶಭಕ್ತಿಗಳೇ ಪ್ರತಾಪನಿಗೆ ಆಧಾರಗಳಾಗಿದ್ದವು. ಚಿತೋಡದ ಯುದ್ಧ ಭೂಮಿಯಲ್ಲಿ ಮಹಾ ಪರಾಕ್ರಮಿಗಳಾದ ರಜಪೂತ ಸೈನಿಕರು ಮರಣಹೊಂದಿ ದ್ದರು, ಅದರಿಂದ ಇಂದು ಪ್ರತಾಪಸಿಂಹನ ಸೈನಿಕರ ಸಂಖ್ಯೆಯು ಅತ್ಯಲ್ಪವಾಗಿದೆ. ಉಳಿದ ರಜಪೂತರೆಲ್ಲರೂ ಪ್ರತಾಪಸಿಂಹನ ಪಕ್ಷವನ್ನು ವಹಿಸಿರಲಿಲ್ಲ. ರಾಜಸ್ತಾ ನದ ಆಬಾಲವೃದ್ಧ-ವನಿತೆಯರೆಲ್ಲರೂ ವೀರರು; ಇಂತಹ ರಜಪೂತರೆಲ್ಲರೂ ಒಕ್ಕ ಬ್ಲಾಗಿ, ಪ್ರತಾಪಸಿಂಹನನ್ನು ಅನುಸರಿಸದಲ್ಲಿ, ಪ್ರತಾಪನಿಗೆ ಇತರ ಆಲೋಚನೆ ಗಳೇ ಇರಲಿಲ್ಲ. ಎಂತಹ ಪ್ರಬಲ ವೈರಿಯಿದ್ದರೂ, ಅವನನ್ನೆ ದುರಿಸುವದಕ್ಕೆ ಪ್ರತಾಪನು ಹಿಂದುಮುಂದೆ ನೋಡುತ್ತಿದ್ದಿಲ್ಲ. ಆದರೆ ನೀತಿನಿಪುಣನಾದ ಅಕಬರನ ಕುಶಲತೆಯಿಂದ ರಜಪೂತರಲ್ಲಿ ಬಹುಜನರು ಪ್ರತಾಪನ ವಿರುದ್ಧವಾಗಿ ಶಸ್ತ್ರ ವೆತ್ತಲು ಸಿದ್ಧರಾದರು. ಮಾರವಾಡದ ಉದಯಸಿಂಹನು ಮೊಗಲರ ಸೇವಕನು. ಬಿಕಾನೇರದ ರಾಯಸಿಂಹನು ಅಕಬರನ ಅರಮನೆಯಲ್ಲಿ ಊಟಮಾಡತಕ್ಕವನು. ಅಂಬರದ ಮಾನಸಿಂಹನು ಮೊಗಲರ ಸೇನಾಪತಿಯು, ಮತ್ತು ಬಾದಶಹನ ಬಲ ಗೈಯಂತಿರುವವನು. ಬುಂದಿಯ ಅರಸನು ಅಕಬರನೊಡನೆ ಒಪ್ಪಂದವಾಡಿ ಕೊಂಡು, ಸ್ನೇಹದಿಂದಿದ್ದನು. ಅಜಮೀರವು ಮೊಗಲರ ಆಧೀನವಾಗಿತ್ತು, ಇಷ್ಟೇ ಅಲ್ಲ; ಪ್ರತಾಪಸಿಂಹನ ತಮ್ಮಂದಿರಾದ ಶಕ್ತಸಿಂಹನೂ, ಸಾಗರಜೆಯೂ ಪ್ರಚಂಡ ಶತ್ರುವಿನ ಪಕ್ಷದವರಾಗಿ, ಅಣ್ಣನ ವಿರುದ್ಧವಾಗಿ ಯುದ್ಧ ಮಾಡತಕ್ಕ