ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಠೋರ ವ್ರತ. ೬ ವರು !* ಹೀಗಿರಲು ಪ್ರತಾಪಸಿಂಹನಿಗೆ ಸಹಾಯಕರಾಗಿ ಯುದ್ಧ ಮಾಡತಕ್ಕ ವರಾರು? ಯಾರೂ ಸಹಾಯಕ್ಕೆ ಬರದಿದ್ದಲ್ಲಿ, ಪ್ರತಾಪನು ಒಬ್ಬನೇ ಯುದ್ಧ ಮಾಡುವ ದಕ್ಕೆ ಸಿದ್ಧನಾಗಿದ್ದನು. ಅವನು ಯುದ್ಧದ ಪರಿಣಾಮವೇನಾಗುತ್ತದೆಂಬದನ್ನು

  • ಅಕಬರನು ಚಿತೋಡವನ್ನು ಮುತ್ತುವ ಮೊದಲೇ ಶಕ್ತಸಿ೦ಹನು ಅನುಗ್ರಹಪ್ರಾರ್ಥಿ ಯಾಗಿ ಮೊಗಲರ ಶಿಬಿರಕ್ಕೆ ಹೋಗಿದ್ದನೆಂದೂ, ಅಲ್ಲಿಂದ ಓಡಿ ಬಂದು ತಂದೆಗೆ ಯಾವತ್ತು ಸಂಗತಿ ಯನ್ನು ಹೇಳಿದನೆ೦ದೂ ನಾವು ಹಿಂದೆ ಹೇಳಿದ್ದೇವೆ ಇವರು ಬಹುಶಃ ಚಿತೋಡ ಧ್ವ೦ಸದ ಪೂರ್ವ ದಲ್ಲಿಯೇ ತಂದೆಯೊಡನೆ ಉದಯಪುರಕ್ಕೆ ಬಂದು ಅಲ್ಲಿ ವಾಸಮಾಡುತ್ತಿರಬಹುದು ಮುಂದೆ ತುಸು ದಿವಸಗಳಲ್ಲಿ ಇವನು ಮೊಗಲರ ಕೈವಶನಾದನು, ಮತ್ತು ಅಕಬರನಿಂದ ಪುರಸ್ಯ ತನಾ ದನು ಇವನು ಹಳದೀ ಘಟ್ಟದ ಯುದ್ಧದಲ್ಲಿ ಪ್ರತಾಪನಿಂಹನ ವಿರುಗ್ಧವಾಗಿ ಯುದ್ಧ ಮಾಡಿದ ನೆಂಬದನ್ನು ನೀವು ಮುಂದೆ ತಿಳಿಯುವಿರಿ
  • ಉದಯ ಸಿಂಹನ ಬೇರೊಬ್ಬ ಮಗನ ಹೆಸರು - ಸಾಗರಸಿಂಹ ” ಎಂದಿತ್ತು ಟಾಡ್ ಸಾಹೇ ಬರು ಕೆಲವು ಕಡೆಯಲ್ಲಿ ಇವನಿಗೆ Sagr]] ಎಂದೂ, ಮತ್ತೆ ಕೆಲವು ಕಡೆಯಲ್ಲಿ Stagra ಎಂದೂ ಹೇಳಿದ್ದಾರೆ ಬ್ಲಾಕ್ಮ ಸಾಹೇಬರು ಬಹಳ ಮಾಡಿ ಇವನಿಗೇ Sakra ಎಂದು ಉಲ್ಲೇ ಖಿಸಿರಬಹುದು (An1. P. 519 ) ಪ್ರಲಾಪನು ರಾಜ್ಯ ಹೊಂದಿದ ಸುಮಾರದಲ್ಲಿಯೇ ಸಾಗ ಸಿ೦ಹನು ಮೊಗಲರನ್ನು ಕೂಡಿದನು ಇವನು ಈ ರಾಜದ್ರೋಹದ ಪುರಸ್ಕಾರ ಸ್ವರೂಪನಾಗಿ, ಆ೦ಬರದ ಹತ್ತಿರದಲ್ಲಿರುವ ಕಂಧಾರ ( Kadhar ) ಎಂಬ ಹೆಸರಿನ ದುರ್ಗವನ್ನೂ, ಸಣ್ಣ ಜಾಗೀರವನ್ನೂ ಹೊಂದಿದನು ಇವನ ವಂಶದ ಸಾಗರಾವತ್ ಜನರು ಹದಿನೆಂಟನೆಯ ಶತಮಾ ನದ ಪ್ರಾರಂಭದ ವರಿಗೆ ಈ ಜಾಗೀರನ್ನು ಉಪಭೋಗಿಸಿದರು ಅಮರ ಸಿಂಹನೊಡನೆ ಒಪ್ಪಂದ ಮಾಡಿಕೊಳ್ಳುವ ಮೊದಲು, ಜಹಾಂಗೀರನು ಸಾಗರ ಸಿಂಹನನ್ನು ಶಸ್ತ್ರ ವಿಭೂಷಿತನನ್ನಾಗಿ ಮಾಡಿ, ಚಿತೋಡದ ಅರಸನನ್ನಾಗಿ ಮಾಡಿ ಕಳುಹಿಸಿದನು ಅದರಂತೆ ಸಾಗರ ಸಿ೦ಹದು ರಾಜಸ್ತಾನಕ್ಕೆ ಬ೦ದನು, ಆದರೆ ಇವನು ತಾನು ಮಾಡಿದ ಅನೇಕ ಕುಕರ್ಮಗಳ ಸಲುವಾಗಿ ಪಶ್ಚಾತ್ತಾಪವನ್ನು ಹೊಂದಿದನು ಅದರಿ೦ದವನು ಪ್ರತಾಪನ ಮಗನಾದ ಅಮರಸಿಂಹನಿಗೆ ರಾಜ್ಯವನ್ನೊಪ್ಪಿಸಿ, ಪುನ ದಿಲ್ಲಿಗೆ ತಿರುಗಿಹೋದನು ದಿಲ್ಲಿಯಲ್ಲಿ ಇವನು ಜಹಾಂಗೀರನಿಂದ ತಿರಸ್ಕೃತನಾಗಿ, ದರಬಾರ ದಲ್ಲಿ ಪ್ರಕಾಶರೀತಿಯಿಂದ ಅಸ್ತ್ರದಿಂದ ಹೊಟ್ಟೆಯನ್ನಿರಿದುಕೊಂಡು ಸತ್ತು ಹೋದನು ಈ ಸಾಗರ ಜಿಯ ಮಗನೇ ಮುಸಲ್ಮಾನನಾಗಿ ಮೊಹಬತ್ಖನನೆಂಬ ಹೆಸರನ್ನು ಧರಿಸಿದನು ಜಹಾಂಗೀ ರನ ಕಾಲದಲ್ಲಿ ಇವನಂತಹ ಶೂರ ಸೇನಾಪತಿಗಳು ಬೇರೆ ಯಾರೂ ಇರಲಿಲ್ಲ Ye Rayasthan Yo1. 1 PP 270-287 note.

ಆದರೆ Keene ಮೊದಲಾದ ಐತಿಹಾಸಕರು ಮೊಹಬತಖಾನನು ಆಫಗಾಣನೆಂದು ಹೇಳಿದ್ದಾರೆ. ಆದರೆ ಮೊಹಬತಖಾನನ ಹಾವಭಾವಗಳು ಹಿಂದುವಿನ೦ತಿದ್ದವೆಂಬದನ್ನು ಅವರು ಒಪ್ಪಿಕೊಂಡಿದ್ದಾರೆ t Turks in India ” P, 82 note