ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಮಹಾರಾಣಾ ಪ್ರತಾಪಸಿಂಹ, ವಿಚಾರಿಸತಕ್ಕ ಮನುಷ್ಯನಾಗಿರಲಿಲ್ಲ. ಅದರಿಂದ ಅವನು ಪರಾಜಯಕ್ಕೆ ಹೆದ ರುವವನಾಗಿರಲಿಲ್ಲ. ಒಂದುವೇಳೆ ಪರಾಜಯದಲ್ಲಿ ಮರಣವುಂಟಾದರೂ, ಅದೊಂದು ಮಂಗಲವೇ ಎಂದು ಅವನು ಭಾವಿಸಿದನು. ( ಕಾರ್ಯಸಾಧನೆ ಇಲ್ಲವೆ ಮರಣ ” ವೆಂಬದು ಪ್ರತಾಪನ ಮೂಲಮಂತ್ರವಾಗಿತ್ತು. ಬಾಪ್ಪಾರಾವ ಳನ ಪವಿತ್ರ ಕುಲದಲ್ಲಿ ಹುಟ್ಟಿ, ಸಮರ-ಸಂಗ್ರಾಮಸಿಂಹರ ಪವಿತ್ರ ರಕ್ತವನ್ನು ತನ್ನ ಧಮನಿಗಳಲ್ಲಿ ಧರಿಸಿ, ಶಿಶೋದಿಯಾ ರಜಪೂತರ ಕುಲ-ಮರ್ಯಾದೆಯನ್ನು ನಾಶಮಾಡುವದು ಪ್ರತಾಪಸಿಂಹನಿಗೆ ಅಸಂಭವವಾದ ಕಾರ್ಯವಾಗಿತ್ತು. ಕಾರಣ ಅವನು ಕಠೋರವಾದ ಪ್ರತಿಜ್ಞೆಯನ್ನು ಮಾಡಿದನು- ಪ್ರಾಣವಿರುವವರೆಗೂ ರಜಪೂತರ ಧರ್ಮವನ್ನೂ, ಮೇವಾಡದ ಸ್ವಾತಂತ್ರವನ್ನೂ ಮಾರಲಿಕ್ಕಿಲ್ಲ-ಜೀವ ವಿರುವವರೆಗೂ ತಾಯಿಯ ಹಾಲನ್ನು ಕಲಂಕಿತವನ್ನಾಗಿ ಮಾಡಲಿಕ್ಕಿಲ್ಲ ” ಈ ಕಠೋರ ಪ್ರತಿಜ್ಞೆಯನ್ನು ಕೇಳಿ, ಭಾರತವರ್ಷದ ಸಮಸ್ತ ಕ್ಷತ್ರಿಯರು ಸ್ತಂಭಿತರಾಗಿಹೋದರು. ರಜಪೂತರೆಲ್ಲರೂ ಆತ್ಮವಿಕ್ರಯ ಮಾಡಿಕೊಂಡಿರಲಿಲ್ಲ. ಬಹು ದಿವಸಗ ಳಿಂದ ರಾಣಾನ ಬೇರೆ ಬೇರೆ ಕಾರ್ಯಗಳಲ್ಲಿದ್ದು, ಅವನ ಸೇವೆಮಾಡುತ್ತ ಬಂದಿದ್ದ ಅನೇಕ ರಜಪೂತರು ಪ್ರತಾಪನನ್ನು ಬಿಟ್ಟು ಹೋಗಲಿಲ್ಲ. ಮೊಗಲ ಸರಕಾರದ ಧನಸಮೃದ್ಧಿಯು ಇವರನ್ನು ಮೋಹಗೊಳಿಸಲಿಕ್ಕೆ ಸಮರ್ಥವಾಗಲಿಲ್ಲ. ಸಾಲುಂಬ್ರದ ಅರಸನಾದ ಕೃಷ್ಣಸಿಂಹನು ಸ್ವಾಮಿಧರ್ಮವನ್ನು ಮರೆಯಲಿಲ್ಲ. ಇವನು ತನ್ನ ಅನುಚರರೊಡನೆ ಕಮಲಮೀರ ದುರ್ಗದಲ್ಲಿ ಪ್ರತಾಪನ ಹತ್ತರ ಇರತೊಡಗಿದನು. ಬೇದನೂರ ರಾಠೋರ ರಜಪೂತರು ಪ್ರತಾಪಸಿಂಹನನ್ನು ಕೂಡಿದರು. ಇವರ ಅರಸನಾದ ಜಯಮಲ್ಲನು ಮಹಾಶೂರತನದಿಂದ ಕಾದಿ, ಚಿತೋಡದ ರಕ್ಷಣೆಗಾಗಿ ಪ್ರಾಣಬಿಟ್ಟನು; ಮುಂದೆ ಇವನ ವಂಶಜರೂ ತಮ್ಮ ಗೌರವವನ್ನು ಕಳೆದುಕೊಳ್ಳಲಿಲ್ಲ. ಶತ್ರುಗಳನ್ನು ಕೂಡ ಮುಗ್ಗ ಮಾಡಿದ ಬಾಲ ವೀರ ಪುತ್ರನ ವಂಶೀಯ ಜನಾಯಲ್ ' ರಜಪೂತರು ಕೈಲಬಾರದಿಂದ ಬಂದು, ಪ್ರತಾಪನನ್ನು ಕೂಡಿದರು. ಇವರ ಹೊರತು ದೇಲಬಾರ, ಕೋಟಾರಿ, ಝಾಲೋರ ಮೊದಲಾದ ಸಂಸ್ಥಾನಗಳಿಂದ, ಚೌಹಾಣ, ಪ್ರವಾರ, ಝಾಲಾ ವಂಶೀಯ ರಜಪೂತರು ಬಂದು, ಪ್ರತಾಪನನ್ನು ಕೂಡಿದರು. ಈ ಮೇರೆಗೆ ಸುಮಾರು ೨೨ ಸಾವಿರ ಸೈನ್ಯವು ಕುಂಬಮೇರು ( ಕಮಲಮೀರ) ದುರ್ಗದಲ್ಲಿ