ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಠೋರ ವ್ರತ ಕೂಡಿತು. ವೀರತ್ವದಲ್ಲಿಯೂ, ಕಷ್ಟಸಹಿಷ್ಣುತೆಯಲ್ಲಿಯೂ, ಸ್ವಾಮಿಭಕ್ತಿಯ ಲ್ಲಿಯೂ ಪ್ರತಾಪನ ಸೈನಿಕರಿಗೆ ಸರಿಯಾದವರು ಸಿಗುವದು ಅಸಂಭವವು. ಆದರೆ ಈ ಸೈನ್ಯವು ಮೊಗಲರ ಸೇನೆಯ ಮುಂದೆ ತೀರ ಸಣ್ಣದಾಗಿತ್ತು; ಕಾರಣ ಪ್ರತಾ ಪನು ಒಂದು ಕಠೋರ ವ್ರತವನ್ನವಲಂಬಿಸಿದನು. ಜನ್ಮಭೂಮಿಯಾದ ಚಿತೋಡವು ಪ್ರತಾಪನಿಗೆ ಜನನೀ ಸ್ವರೂಪವು. ತಾಯಿಯ ಮರಣದ ತರುವಾಯ ಮಗನು ಕಠೋರ ವ್ರತವನ್ನಾಚರಿಸು ವಂತೆಯೂ, ಶೋಕಚಿನ್ ಗಳನ್ನು ಧರಿಸುವಂತೆಯೂ ಪ್ರತಾಪನು ಚಿತೋಡದ ನಾಶ ದಿಂದ ಕರೋರ ವ್ರತದೀಕ್ಷಿತನಾಗಿ, ವಿಷಾದಚಿನ್ಮವನ್ನು ಧಾರಣಮಾಡಿದನು. ಇದಕ್ಕಾಗಿ ಅವನು ಪ್ರತಿಜ್ಞೆ ಮಾಡಿದನು ( ಚಿತೋಡದ ಪುನರುದ್ಧಾರವಾಗುವ ವರೆಗೆ ಮುಖಕ್ಷೌರ ಮಾಡಿಸಿಕೊಳ್ಳುವದಿಲ್ಲ. ಬೆಳ್ಳಿ-ಬಂಗಾರಗಳ ಪಾತ್ರೆಗಳಲ್ಲಿ ಊಟಮಾಡುವದಿಲ್ಲ; ಎಲೆಗಳಲ್ಲಿ ಊಟಮಾಡುವೆನು. ಕೋಮಲವಾದ ಹಾಸು ಗೆಯ ಮೇಲೆ ಮಲಗುವದಿಲ್ಲ; ಹುಲ್ಲಿನ ಹಾಸುಗೆಯ ಮೇಲೆ ಮಲಗುವೆನು. ಸುರ ಮ್ಯವಾದ ಅರಮನೆಯಲ್ಲಿ ವಾಸಮಾಡದೆ, ಪರ್ಣಕುಟೀರದಲ್ಲಿ ಇರತೊಡಗು ವೆನು. ” ತರುವಾಯ ಪ್ರತಾಪನು ತನ್ನ ಅನುಚರರಿಗೆ ಅಪ್ಪಣೆ ಮಾಡಿದನು – ( ರಾಜಸ್ಥಾನದಲ್ಲಿ ಯಾವ ತರದ ಉತ್ಸವವನ್ನು ನಡೆಸಬಾರದು; ಯುದ್ದ ಕಾಲ ದಲ್ಲಿ ಎಲ್ಲರೂ ಶೋಕಚಿನ್ಮಗಳನ್ನು ಧರಿಸಬೇಕು ರಜಪೂತರ ದುರ್ದೆಶೆಯನ್ನು ನೆನಪು ಮಾಡುವದಕ್ಕಾಗಿ ಇನ್ನು ಮುಂದೆ ರಣವಾದ್ಯವನ್ನು ಸೈನ್ಯದ ಹಿಂಭಾಗ ದಲ್ಲಿ ಬಾರಿಸಬೇಕು. ಈಗಲೂ ರಣವಾದ್ಯವನ್ನು ಹಿಂಭಾಗದಲ್ಲಿ ಬಾರಿಸುತ್ತಿರು ವರು; ರಾಣಾನ ವಂಶಜರಲ್ಲಿ ಯಾರೂ ಗಡ್ಡವನ್ನು ತೆಗೆಯಿಸುವದಿಲ್ಲ; ಕೆಲವರು ಧಾತುಗಳ ಪಾತ್ರೆಗಳಲ್ಲಿ ಭೋಜನ ಮಾಡುತ್ತಿದ್ದರೂ, ಅವುಗಳ ಕೆಳಗೆ ಎಲೆಗಳ ನ್ನಿಡುತ್ತಿರುವರು; ಮತ್ತು ಕೋಮಲವಾದ ಹಾಸುಗೆಗಳ ಮೇಲೆ ಮಲಗುವ ಮೊದಲು, ಅದರ ಕೆಳಗೆ ಹುಲ್ಲನ್ನು ಹಾಕುತ್ತಿರುವರು. ಈ ಮೇರೆಗೆ ರಜಪೂತರು ಸ್ವದೇಶಭಕ್ತನೂ, ವೀರಸನ್ಯಾಸಿಯೂ ಆದ ಪ್ರತಾಪನ ಕಠೋರ ವ್ರತಗಳನ್ನು ಈಗಲೂ ಆಚರಿಸುತ್ತಿರುವರು. ನಾನಾ ದೇಶಗಳಲ್ಲಿ ಬಹು ಜನರು ಜನ್ಮಭೂಮಿಯ ಉದ್ಧಾರಕ್ಕಾಗಿ ಯುದ್ಧ ಮಾಡಿದ್ದಾರೆ; ಆದರೆ ಈ ಮೇರೆಗೆ ಕಠೋರ ವ್ರತಗಳನ್ನಾಚರಿಸಿದವರು ದೊರೆಯು ವದಿಲ್ಲ. ( ಜನ್ಮಭೂಮಿಯು ಜನನಿಯ ಸ್ವರೂಪವು ' ಎಂಬ ನೀತಿಯು ಸರ್ವ