ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರ ಜಾತಿಧರ್ಮ, 2 ಕಾದಿದ್ದನ್ನು ಇವನು ಕೇಳಿದ್ದನು. ಸಂಗ್ರಾಮಸಿಂಹನಂತಹ ವೀರಜನರಿಗೆ ಜನ್ಮ ವಿತ್ತ ಈ ಜನಾಂಗವನ್ನು ನನ್ನ ಕೈವಶಮಾಡಿಕೊಂಡಲ್ಲಿ ಅನೇಕ ಲಾಭವಾಗುವ ದರಲ್ಲಿ ಸಂದೇಹವಿಲ್ಲವೆಂದು ಇವನ ಗ್ರಹಿಕೆಯಾಯಿತು; ಆದರೆ ಈ ವೀರಜಾತಿಯ ಜನರನ್ನು ವಶಮಾಡಿಕೊಳ್ಳುವದು ಸುಲಭಸಾಧ್ಯವಾದ ಕಾರ್ಯವಾಗಿರಲಿಲ್ಲ. ಆದರೂ ಅಕಬರನು ನಿರಾಶನಾಗಲಿಲ್ಲ. ಅವನು ಯಾವದೊಂದು ರೀತಿಯಿಂದ ಈ ಕೆಲಸವನ್ನು ಮಾಡಲೇಬೇಕೆಂದು ಗೊತ್ತು ಮಾಡಿಕೊಂಡನು. ಇದಕ್ಕಾಗಿ ಅವನು ತನ್ನ ಯಾವತ್ತು ಶಕ್ತಿಯನ್ನು ಪ್ರಯೋಗಿಸುವ ಮನಸು ಮಾಡಿದನು. ಈ ಕಾರ್ಯಕ್ಕಾಗಿ ಅವನು ಯಾವ ಮಾರ್ಗವನ್ನವಲಂಬಿಸುವದಕ್ಕೂ ಹಿಂದುಮುಂದೆ ನೋಡಲಿಲ್ಲ. ಈ ಸಮಯದಲ್ಲಿ ಅವನು ಸಕಲ ಜಾತಿಗಳನ್ನು ಒಂದಾಗಿ ಮಾಡು ವದಕ್ಕೆ ಎಲ್ಲ ಜನಾಂಗಗಳನ್ನು ಪ್ರೇಮಬಂಧನದಿಂದ ಕಟ್ಟುವದಕ್ಕೆ ವಿವಾಹದಂಧ ಉತ್ತಮವಾದ ಮಾರ್ಗವು ಬೇರೊಂದಿಲ್ಲವೆಂದು ಭಾವಿಸಿದನು. * ಕಾರಣ ಅವನು ಛಲದಿಂದಲೂ, ಬಲದಿಂದಲೂ, ಕೌಶಲ್ಯದಿಂದಲೂ ರಾಜಸ್ತಾನದ ಯಾವತ್ತು ಮುಖ್ಯ ಕ್ಷತ್ರಿಯರೊಡನೆ, ವಿವಾಹಸಂಬಂಧವನ್ನುಂಟುಮಾಡುವದಕ್ಕೆ ಯತ್ನಿಸಿ ದನು. ಇದರಿಂದ ರಜಪೂತರು ತಮ್ಮ ಜಾತಿಧರ್ಮಕ್ಕೆ ಕ್ರಮವಾಗಿ ಜಲಾಂಜಲಿ ಯನ್ನು ಕೊಡಹತ್ತಿದರು, ಆದರೆ ಅವರು ಅಕಬರನ ಮೋಹಿನೀ ಶಕ್ತಿಯ ಪ್ರಭಾ ವದಿಂದ ಇದನ್ನು ತಿಳಿಯಲಿಲ್ಲ. ಮಹಾರಾಣಾ ಪ್ರತಾಪಸಿಂಹನೊಬ್ಬನು ಮಾತ್ರ ಈ ಸಂಗತಿಯನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದನು. $ ರಜಪೂತರಂತಹ ಶತ್ರುಗಳು ಒಕ್ಕಟ್ಟಿನಿಂದಿದ್ದರೆ, ಅವರನ್ನು ಸೋಲಿಸು ವದು ಅಸಾಧ್ಯವು; ಕಾರಣ ಇವರನ್ನು ಪರಾಜಿತರನ್ನಾಗಿ ಮಾಡಬೇಕಾದರೆ, ಇವ ರಲ್ಲಿ ಗೃಹಕಲಹವನ್ನುಂಟುಮಾಡುವದು ಅವಶ್ಯವು; ಈ ಭೇದನೀತಿಯನ್ನು ಅಕಬರನು ಪೂರ್ಣವಾಗಿ ಬಲ್ಲವನಾಗಿದ್ದನು. ಜಾತಿಧರ್ಮದಲ್ಲಿ ಕೈ ಹಾಕಿದರೆ, ರಜ ಪೂತರನ್ನು ಹೀನಬಲರನ್ನಾಗಿ ಮಾಡುವದು ಸಾಧ್ಯವಿಲ್ಲವೆಂಬದನ್ನು ಅವನು ತಿಳಿ ದಿದ್ದನು. ಕಾರಣ ಅವನು ರಜಪೂತರೊಡನೆ ಸ್ನೇಹದಿಂದಲೂ, ಸೌಜನ್ಯದಿಂದಲೂ & Indian Historical studies, Rawliu8on, PP, 108-9, * Malleson's Akbar, PP. 129-31.

  1. Blphinstone, P. 495; Kaye 8 life of Lord Metcalfe, Vol. 1, 2, 416,