ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಮಹಾರಾಣಾ ಪ್ರತಾಪಸಿಂಹ, ಇರುವವನಂತೆ ತೋರಿಸುವದಕ್ಕಾಗಿ ರಾಜಪುತ್ರ-ರಮಣಿಯರನ್ನು ವಿವಾಹ ಮಾಡಿ ಕೊಂಡನು. ಇವನು ರಾಜ್ಯ, ದೊಡ್ಡ ಅಧಿಕಾರ, ಹಣ ಮೊದಲಾದವುಗಳ ಆಶೆ ಯನ್ನು ತೋರಿಸಿ, ಕ್ರಮವಾಗಿ ರಜಪೂತ ಸಾಮಂತ ನೃಪರನ್ನು ವಶಮಾಡಿ ಕೊಂಡನು. ಇದರಿಂದ ರಜಪೂತರು ಕ್ರಮವಾಗಿ ದುರ್ಬಲರಾಗುತ್ತ ನಡೆದರು. ಔರಂಗಜೇಬನು ಹಿಂದುಗಳ ದ್ವೇಷಿಯಾಗಿದ್ದನು; ಅದರಿಂದ ಹಿಂದುಗಳು ಅವನನ್ನು ತಿರಸ್ಕರಿಸುತ್ತಿದ್ದರು; ಮತ್ತು ಅವನ ಸಮೀಪಕ್ಕೆ ಯಾರೂ ಹೋಗು ತಿದ್ದಿಲ್ಲ. ಆದರೆ ಅಕಬರನು ಮಿತ್ರನಂತೆ ವರ್ತಿಸುತ್ತಿದ್ದುದರಿಂದ, ಬಾಹ್ಯ ವ್ಯವಹಾ ರಗಳಿಗೆ ಮೋಸಹೋಗಿ, • ತಮ್ಮ ಮಿತ್ರನೆಂದು ತಿಳಿದು, ರಜಪೂತರು ಅವನನ್ನಾ ಶ್ರಯಿಸಿದರು; ಮತ್ತು ಕಡೆಯಲ್ಲಿ ತಮ್ಮ ಜಾತಿಧರ್ಮಕ್ಕೆ ಜಲಾಂಜಲಿಯನ್ನು ಕೊಡುತ್ತಿದ್ದರು. ಇತಿಹಾಸವನ್ನು ತೆಗೆದು ನೋಡಿರಿ. ಔರಂಗಜೇಬನು ನಿಷ್ಟು ರನ್ನೂ, ಅತ್ಯಾಚಾರಿಯೂ ಆಗಿದ್ದರೂ, ಅಕಬರನಂತೆ ವಿಲಾಸಿಯೂ, ಇಂದ್ರಿಯ ನಿರತನೂ ಆಗಿರಲಿಲ್ಲ; ↑ ಅಕಬರನಂತೆ ನೃತ್ಯಗೀತಗಳನ್ನು ಪ್ರೀತಿಸಲಿಲ್ಲ; + ಅಕ ಬರನಂತೆ ಹಿಂದೂ ರಮಣಿಯರ ಧರ್ಮನಾಶಕ್ಕಾಗಿ ಕೌಶಲ್ಯಮಯವಾದ ಜಾಲವನ್ನು ಪಸರಿಸಲಿಲ್ಲ. ಔರಂಗಜೇಬನು ಹಿಂದುಗಳನ್ನು ದ್ವೇಷಿಸುತ್ತಿರುವದನ್ನು ಅವನ ಮಾತಿನಿಂದಲೂ, ಕೃತಿಯಿಂದಲೂ ಕಂಡುಹಿಡಿಯಬಹುದಾಗಿದ್ದಿತು; ಆದರೆ ಅಕಬರನು ಹಿಂದುಗಳ ವಿಷಯದಲ್ಲಿ ಸದಾಚಾರವನ್ನು ತೋರಿಸುತ್ತಿದ್ದರೂ, ಅವರನ್ನು ಬಲಹೀನರನ್ನಾಗಿಯೂ, ಧರ್ಮಹೀನರನ್ನಾಗಿಯೂ ಮಾಡುವದು ಅವನ ಉದ್ದೇಶವಾಗಿತ್ತು. ಮುಸಲ್ಮಾನರಲ್ಲನೇಕರು ಅಕಬರನನ್ನು ತಿರಸ್ಕರಿಸಿ ↑ ಔರಂಗಜೇಬನು ತನ್ನ ಉಪಜೀವನವನ್ನು ಶಿಲ್ಪಕಾರ್ಯದಿಂದಲೂ, ಸಾಹಿತ್ಯ ಸೇವೆ ಯಿಂದಲೂ ಬಂದ ಹಣದಿಂದ ಸಾಗಿಸುತ್ತಿದ್ದನುಇವನು ಧರ್ಮವಿಷಯಕವಾದ ಪುಸ್ತಕಗ ಳನ್ನು ಬರೆದು, ಮತ್ತು ಟೊಪ್ಪಿಗೆಗಳನ್ನು ತಯಾರಿಸಿ, ಇವುಗಳನ್ನು ಮಾರುತ್ತಿದ್ದನೆಂದು ಹೇಳು ತಿರುವರು, ( Rajasthan, Vol. I, P. 279 ) ಇವನು ಮೃತ್ಯು ಕಾಲದಲ್ಲಿ ಹೇಳಿದ್ದೇ ನಂದರೆ ನಾನು ತಯಾರ ಮಾಡಿದ ಟೊಪ್ಪಿಗೆಗಳನ್ನು ಮಾರಿ, ಅದರಿಂದ ಬಂದ ಹಣದಿಂದ ನನ್ನ ಸಮಾಧಿಕ್ರಿಯೆಯನ್ನು ಮುಗಿಸಿರಿ ” ಭಾರತವರ್ಷದ ಪ್ರಬಲ ಪ್ರತಾಪಾನ್ವಿತನಾದ ಈ ಮೊಗಲ ಸಾಮ್ರಾಟನ ಸಮಾಧಿಗಾಗಿ ಮೇಲೆ ಹೇಳಿದ ಉಪಾಯದಿಂದ ನಾಲ್ಕೂವರೆ ರೂಪಾಯಿ ಸಂಗ್ರಹವಾಗಿತ್ತು. + History of Aurangzeb, Sarkar, Vol. III, P, 96,