ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರ ಜಾತಿಧರ್ಮ, 28 ದ್ದಾರೆ. ಅದರಂತೆ ಹಿಂದುಗಳೂ ಅವನನ್ನು ತಿರಸ್ಕರಿಸಲಿಕ್ಕೆ ಕಾರಣಗಳಿಲ್ಲದಿರಲಿಲ್ಲ. ಈ ವಿಷಯವಾಗಿ ನಾವು ಒಂದು ಸಂಗತಿಯನ್ನು ಕೆಳಗೆ ಬರೆಯುವೆವು. ಅಕಬರನು ಅನೇಕ ಸಮಯದಲ್ಲಿ ಪಾರ್ಸಿ ಧರ್ಮವನ್ನವಲಂಬಿಸುತ್ತಿದ್ದನು. ಪ್ರತಿವರ್ಷ ಮೇಷರಾಶಿಯಲ್ಲಿ ಸೂರ್ಯನು ಪ್ರವೇಶ ಮಾಡಿದ ದಿವಸವು ಇರಾನೇ ಯುಗಾದಿಯು, ಅಕಬರನೂ ಇದೇ ದಿವಸದಿಂದ ವರ್ಷಾರಂಭ ಮಾಡುತ್ತಿದ್ದನು. ಈ ದಿವಸದಿಂದ ಕೆಲವು ದಿವಸಗಳವರೆಗೆ ಆಗ್ರಾದಲ್ಲಿ ಆನಂದೋತ್ಸವವಾಗುತ್ತಿ ದ್ದಿತು. ಇದಕ್ಕೆ ನವರೋಜ ಅಧವಾ ಹೊಸ ವರ್ಷದ ಸಮಾರಂಭವನ್ನು ದ್ದರು. ಇದರ ಸಲುವಾಗಿ ಆಗ್ರಾದಲ್ಲಿ ಉತ್ತಮ ವಸ್ತುಗಳ ಪ್ರದರ್ಶನದ ಸಂತೆಯು ನೆರೆಯುತ್ತಿತ್ತು. ಇದಕ್ಕೆ ಮೀನಾಬಜಾರ ( Farivy fair ) ಅನ್ನುತ್ತಿದ್ದರು. ಈ ಬಜಾರಕ್ಕೆ ಬಾದಶಹನ ಅಂತಃಪುರದ ಸ್ತ್ರೀಯರೂ, ಪಟ್ಟಣದೊಳಗಿನ ಬೇರೆ ದೊಡ್ಡ ಮನೆತನದ ಹೆಂಗಸರೂ ಬರುತ್ತಿದ್ದರು. ಇಲ್ಲಿ ಪುರುಷರ ಪ್ರವೇಶವಾಗು ವಂತಿದ್ದಿಲ್ಲ. ಇದರಲ್ಲಿ ರಮಣಿಯರೇ ಅಂಗಡಿಕಾರರು; ನಾರಿಯರೇ ಗಿರಾಕಿಗಳು; ಮತ್ತು ಅವರೇ ಪ್ರೇಕ್ಷಕರು. ಈ ಬಜಾರದಿಂದ ಸ್ತ್ರೀಯರಿಗೆ ತಮ್ಮ ಸ್ನೇಹಿತೆಯರ ದರ್ಶನಲಾಭವಾಗುತ್ತಿದ್ದುದಲ್ಲದೆ, ವಿವಾಹಸಂಬಂಧದ ಮಾತು-ಕತೆಗಳನ್ನಾಡು ವದಕ್ಕೂ ಅನುಕೂಲವಾಗುತ್ತಿದ್ದಿತು. ಬಾದಶಹನೊಡನೆ ಮಿತ್ರತ್ವದಿಂದಿರುವ ಅಕಬರನೊಡನೆ ಒಪ್ಪಂದ ಮಾಡಿಕೊಂಡಿರುವ ಯಾವತ್ತು ರಜಪೂತರು ತಮ್ಮ ಹೆಂಡಿರು-ಮಕ್ಕಳನ್ನು ಈ ಪ್ರದರ್ಶನಕ್ಕೆ ಕಳುಹಿಸಬೇಕೆಂಬ ನಿಯಮವಿದ್ದಿತು. ಅದರಿಂದ ಈ ಪೇಟೆಯಲ್ಲಿ ದೊಡ್ಡ ಮನೆತನದ ಅಸಂಖ್ಯ ಹಿಂದು-ಮುಸಲ್ಮಾನ ರಮಣಿಯರು ನೆರೆಯುತ್ತಿದ್ದರು. ಬಾದಶಹನು ವೇಷ ಬದಲಾಯಿಸಿಕೊಂಡು, ಈ ಸಂತೆಗೆ ಬಂದು, ಸುಂದರ ಸ್ತ್ರೀಯರ ರೂಪಸುಧೆಯನ್ನು ಪಾನಮಾಡುತ್ತಿದ್ದನು; ಮತ್ತು ಕೆಲವು ಪ್ರಸಂಗದಲ್ಲಿ ಇಂದುಮುಖಿಯರಾದ ಸುಂದರ ರಮಣಿಯರ ಧರ್ಮನಾಶಮಾಡುವ ಕಾರ್ಯವನ್ನೂ ಕೈಕೊಳ್ಳುತ್ತಿದ್ದನು ! ಅಕಬರನು ಈ ಉತ್ಸವಕ್ಕೆ ಖುಷರೋಜ ಅಧವಾ ಆನಂದದ ದಿವಸವೆಂಬ ಹೆಸರನ್ನಿಟ್ಟಿದ್ದನು.*

  • ಬದಾವುನಿಯ೦ಬ ಇತಿಹಾಸಕಾರನು ಇದಕ್ಕೆ • ನವರೋಜ.ಇ.ಜಲಾಲೀ ' ಎಂದು ಹೇಳಿದ್ದಾನೆ Blochmann, PP. 183,276; Rajasthan, Vol.I, 279-280.

ಅಕಬರನು ಈ ಬಜಾರದಲ್ಲಿ ಬರುತ್ತಿದ್ದನೆಂಬದನ್ನು, ಅಬಲಫಜಲನು ತನ್ನ ಕೌಶಲ್ಯದಿಂದ ಮುಚ್ಚಿಡಲಿಕ್ಕೆ ಸಮರ್ಥನಾಗಲಿಲ್ಲ. ಒಂದು ಕಡೆಯಲ್ಲಿ ಈ ಖುಷರೋಜದ ವರ್ಣನೆಯದೆ,