ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರ ಜಾತಿಧರ್ಮ ೭೭ ಮುಚ್ಚಿಟ್ಟು ಕೊಂಡಿದೊಂದು ತೀಕ್ಷ ಆಯುಧವನ್ನು ಹೊರಗೆ ತೆಗೆದು, ಅದನ್ನು ಅಕಬರನಿಗೆ ತೋರಿಸಿ, ಉಗ್ರರ್ಮೂತಿಯನ್ನು ಧಾರಣಮಾಡಿ, ಕ್ರೋಧದಿಂದ ( ಪಾಪಿಷ್ಟ ! ನರಾಧಮ! ಇನ್ನು ಮುಂದೆ ರಜಪೂತ ರಮಣಿಯರ ಸತೀತ್ವವ ನ್ನೆಂದಿಗೂ ನಾಶಮಾಡೆನೆಂದು ಪ್ರತಿಜ್ಞೆ ಮಾಡು; ಇಲ್ಲವಾದರೆ ಈ ಶಸ್ತ್ರದಿಂದ ನಿನ್ನ ಭವಲೀಲೆಯನ್ನು ಕೊನೆಗಾಣಿಸಿಬಿಡುವೆನು. ” ಎಂದು ಗದ್ದರಿಸಿದಳು. ಅಕ ಬರನು ಸ್ತಂಭಿತನೂ, ಭೀತನೂ ಆಗಿ, ಅವಳನ್ನು ಹೊರಗೆ ಬಿಟ್ಟು ಕೊಟ್ಟನು. ಈ ಸಂಗತಿಯಿಂದ ಅಕಬರನಿಗೆ ಸುಬುದ್ದಿಯುಂಟಾಯಿತು. ಈ ಮೇರೆಗೆ ಓರ್ವ ರಜಪೂತ ಕುಲಲಕ್ಷ್ಮಿಯು ತನ್ನ ಪಿತೃ-ವಂಶದ ಪವಿ ತತೆಯನ್ನು ಕಾಯ್ದು ಕೊಂಡಳು; ಆದರೆ ಸಕಲ ನಾರಿಯರಲ್ಲಿಯೂ ಈ ತರದ ಮನೋಧೈರ್ಯವಿರದ ಮೂಲಕ, ಎಲ್ಲರೂ ತಮ್ಮ ಪತಿವ್ರತಾಧರ್ಮವನ್ನು ಕಾಯ್ದು ಕೊಳ್ಳಲು ಸಮರ್ಥರಾಗುತ್ತಿದ್ದಿಲ್ಲ. ಪೃಥ್ವಿರಾಜನ ಲಲನೆಯಂತೆ, ರಾಯ - ಸಿಂಹನ ಹೆಂಡತಿಯು ತನ್ನ ಸತೀತ್ವವನ್ನು ರಕ್ಷಿಸಿಕೊಳ್ಳಲಿಲ್ಲ. ರಾಯಸಿಂಹನ ಹೆಂಡತಿಯು ರತ್ನಾಲಂಕಾರಗಳ ಆಶೆಯಿಂದ ತನ್ನ ಸತೀಧರ್ಮವನ್ನು ಮಾರಿಕೊಂಡ ಳೆಂದು ಹೇಳುತ್ತಿರುವರು. ಇದರಂತೆ ಎಷ್ಟು ರಜಪೂತ ಕುಲಸ್ತ್ರೀಯರು ತಮ್ಮ ಧರ್ಮಕ್ಕೆ ಜಲಾಂಜಲಿಯನ್ನು ಕೊಟ್ಟರೆಂಬದನ್ನು ಹೇಗೆ ಹೇಳಬೇಕು ? ಅಕಬ ರನು ಅನೇಕ ಪರಸ್ತ್ರೀಯರನ್ನು ಪರೂಪವಾಗಿ ಗ್ರಹಿಸಿದ್ದನೆಂದು ಹೇಳುತ್ತಿರು ವರು. ಅಕಬರನ ಆಧೀನತ್ವವನೊಪ್ಪಿಕೊಂಡು, ಅವನೊಡನೆ ಸಖ್ಯತ್ವದಿಂದಿರಬೇ ಕಾದ ರಜಪೂತರು, ಬಾದಶಹನ ಅಂತಃಪುರಕ್ಕೆ ಕನ್ಯಾದಾನ ಮಾಡಬೇಕಾಗುತ್ತಿ ದ್ದಿತು; ಮತ್ತು ತಮ್ಮ ಹೆಂಡಿರು-ಮಕ್ಕಳನ್ನು ನವರೋಜದ ಮೀನಾಬಾಜಾರಕ್ಕೆ ಕಳಿಸಬೇಕಾಗುತ್ತಿದ್ದಿತು. ಒಬ್ಬ ಬುಂದಿಯ ಅರಸನು ಮಾತ್ರ ಅಕಬರನ ಆಧೀನ ತ್ವವನ್ನೊಪ್ಪಿಕೊಂಡಿದ್ದರೂ, “ಈ ಸಂಗತಿಗಳನ್ನು ಒಪ್ಪಿಕೊಂಡಿರಲಿಲ್ಲ. ಅವನ ಒಪ್ಪಂದದ ಪತ್ರದಲ್ಲಿ - ಬುಂದಿಯ ಅರಸರು ದಿಲ್ಲಿಯ ಬಾದಶಹನಿಗೆ ಕನೈಯನ್ನು ಮಾರತಕ್ಕವರಲ್ಲ; ಮತ್ತು ತಮ್ಮ ಪರಿವಾರದ ಸ್ತ್ರೀಯರನ್ನು ನವರೋಜದ ಮೀನಾ ಬಾಜಾರಕ್ಕೆ ಕಳಿಸುವವರಲ್ಲ. ” { ಎಂದು ಸ್ಪಷ್ಟವಾಗಿ ಬರೆದದೆ. $" That the chief of Boondi should be exempted from that custom, degrading to 8 Rajput, of Bending 8 dola ( ಅಂತಃ ಪುರಕ್ಕೆ ಕೊಡಬೇಕಾದ ಕನ್ಯ ) to the royal harem”