ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಮಹಾರಾಣಾ ಪ್ರತಾಪಸಿಂಹ ಯವನರಿಗೆ ತಮ್ಮ ಕನ್ನಿಕೆಯರನ್ನು ಕೊಟ್ಟು, ಜಾತಿಧರ್ಮಕ್ಕೆ ಜಲಾಂಜಲಿ ಯನ್ನು ಕೊಟ್ಟ ರಜಪೂತರೊಡನೆ, ಪ್ರತಾಪಸಿಂಹನು ಆಹಾರವ್ಯವಹಾರವನ್ನು ಬಂದುಮಾಡಿದನು; ಮತ್ತು ಅಕಬರನ ಆಧೀನದಲ್ಲಿರುವವರಲ್ಲಿ ಬುಂದಿಯ ಅರಸ ನನ್ನುಳಿದು, ಉಳಿದವರೊಡನೆ ಶಿಶೋದಿಯಾ ರಜಪೂತರು ಶರೀರಸಂಬಂಧವನ್ನು ಮಾಡಬಾರದೆಂದು ಕಟ್ಟಪ್ಪಣೆ ಮಾಡಿದನು. ಶಿಶೋದಿಯಾ ವಂಶದವರೊಡನೆ ಶರೀರಸಂಬಂಧಮಾಡುವದು ಶ್ರೇಷ್ಠವೆಂದು ರಜಪೂತರು ತಿಳಿಯುತ್ತಿದ್ದರು; ಮತ್ತು ಮೇವಾಡದ ಅರಸನಾದ ಪ್ರತಾಪಸಿಂಹನೊಡನೆ ಆಹಾರವ್ಯವಹಾರ ನಡೆಯಿಸ ಲಿಕ್ಕೆ ಬಾರದಂತಾದ ಬಳಿಕ, ತಾವು ಬಹಿಷ್ಕೃತರಾದೆವೆಂದು ತಿಳಿಯುತ್ತಿದ್ದರು. ಅದರಿಂದ ಎಷ್ಟೋ ಸಾಮಂತ-ರಾಜರು ಪ್ರತಾಪನ ಅನುಗ್ರಹಕ್ಕಾಗಿ ವಿನಯದಿಂದ ಬೇಡಿಕೊಂಡರು; ಆದರೆ ಸ್ಥಿರಪ್ರತಿಜ್ಞನಾದ ಪ್ರತಾಪನು ಅವರ ಪ್ರಾರ್ಥನೆಯನ್ನು ಮನ್ನಿಸಲಿಲ್ಲ. ಅಕಬರನ ಆಧೀನತ್ವವನ್ನೊಪ್ಪಿಕೊಂಡವರಲ್ಲಿ ಮಾನಸಿಂಹನು ಮುಖ್ಯವಾಗಿ ದ್ದನು. ಇವನು ಬುದ್ದಿವಂತನೂ, ಮಹಾಪರಾಕ್ರಮಿಯೂ ಆಗಿದ್ದನು. ಇವನು ಯವನರೊಡನೆ ಬಳಿಕೆಯನ್ನಿಟ್ಟಿದ್ದರಿಂದುಂಟಾದ ರಜಪೂತರ ಹೀನತೆಯನ್ನು ಚನ್ನಾಗಿ ತಿಳಿದುಕೊಂಡಿದ್ದನು. ರಜಪೂತರ ಆಖ್ಯಾಯಿಕೆಯಲ್ಲಿ ಚಾರಣಕವಿಗಳು ಇವನನ್ನು “ ಕಲಿಯುಗದ ಕಲಂಕ 'ನೆಂದು ವರ್ಣಿಸಿದ್ದಾರೆ. ಈ ಸಮಯದಲ್ಲಿ ಮಾನಸಿಂಹನು ಪ್ರತಾಪನನ್ನು ಸಂತುಷ್ಟ ಪಡಿಸುವದಕ್ಕೆ ಸಮಯವನ್ನು ಕಾಯ್ದು ಕೊಂಡಿದ್ದನು. ಪ್ರತಾಪನೊಡನೆ ಅಕಬರನ ಯುದ್ಧವಾಗುವ ಪೂರ್ವದಲ್ಲಿಡೊಂಗರಪುರವಿಜಯದ ತರುವಾಯ ಮಾನಸಿಂಹನು ರಾಜಧಾನಿಗೆ ಹೊರಟ ದ್ದನು. ಹಾದಿಯಲ್ಲಿ ಅವನು ಪ್ರತಾಪನ ದರ್ಶನ ತೆಗೆದುಕೊಳ್ಳುವ ಮನಸುಮಾಡಿ ದನು; ಅದರಂತೆ ಪ್ರತಾಪನಿಗೆ ಹೇಳಿ ಕಳುಹಿಸಿದನು, ಪ್ರತಾಪನಾದರೂ ಇವನ ಪ್ರಾರ್ಥನೆಯನ್ನು ಮನ್ನಿಸಿದನು. ಈ ಸಮಯದಲ್ಲಿ ಪ್ರತಾಪನು ಕಮಲಮೀರ ದುರ್ಗದಲ್ಲಿರುತ್ತಿದ್ದನು. ಅವನು ಅತಿಧಿಯ ಎದುರ್ಗೊಳ್ಳು ವದಕ್ಕಾಗಿ, ಉದಯ " That thc vassals of Boondi should be exempted from the obligation of sending their wives or female relatives “ to hold a stall in the neena-Bazar" at the palace on the feelival of Noroz8.” Rajasthan Vol. II, P. 389.