ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತರ ಜಾತಿಧರ್ಮ, ಸಾಗರದ ಹತ್ತಿರ ಬಂದನು; ಮತ್ತು ಅಲ್ಲಿ ಅತಿಥಿಸತ್ಕಾರದ ಯೋಗ್ಯ ವ್ಯವಸ್ಥೆ ಯನ್ನು ಮಾಡಿಸಿದ್ದನು. ಅಡಿಗೆಯು ಸಿದ್ಧವಾಯಿತು. ಮಾನಸಿಂಹನನ್ನು ಭೋಜ ನಕ್ಕೆಬ್ಬಿಸಿದರು. ಮಾನಸಿಂಹನ ಸತ್ಕಾರಮಾಡುವದಕ್ಕೆ ಪ್ರತಾಪನ ಹಿರಿಯ ಮಗ ನಾದ ಯುವರಾಜ ಅಮರಸಿಂಹನು ಸಿದ್ಧನಾಗಿದ್ದನು. ಅವನು ವಿನಯದಿಂದ ಮಾನಸಿಂಹನಿಗೆ ಇಂದು ತಂದೆಯವರ ತಲೆನೋಯಿಸುತ್ತಿರುವದು; ಅದರಿಂದ ವರು ತಮ್ಮೊಡನೆ ಊಟಕ್ಕೆ ಬರಲಾರರು; ನೀವು ಯಾವ ಸಂಕೋಚವನ್ನು ತೆಗೆ ದುಕೊಳ್ಳದೆ, ಆತಿಧ್ಯವನ್ನು ಸ್ವೀಕರಿಸಿ, ನಮ್ಮನ್ನು ಕೃತಾರ್ಥರನ್ನಾಗಿ ಮಾಡಿರಿ. ” ಎಂದು ಹೇಳಿದನು. ತೀಕ್ಷ ಬುದ್ದಿಯ ಮಾನಸಿಂಹನು ಪ್ರತಾಪನ ಇಂಗಿತವನ್ನರಿ ತನು. ಅವನು ಗಂಭೀರಸ್ವರದಿಂದ ಪ್ರತಾಪನ ತಲೆಶೂಲಿಯ ಕಾರಣವನ್ನು ನಾನು ಕಂಡುಹಿಡಿದಿದ್ದೇನೆ. ಆಗಿಹೋದ ಮಾತನ್ನು ತಿರುಗಿಸಲಿಕ್ಕೆ ಬರುವಂತಿಲ್ಲ. ಕಾರಣ ಅವನು ನನ್ನೊಡನೆ ಭೋಜನಕ್ಕೆ ಬರಲೇ ಬೇಕು. ಈ ಮಾತನ್ನು ನಿಮ್ಮ ತಂದೆಯವರಿಗೆ ತಿಳಿಸು. ” ಎಂದನು. ಅಮರಸಿಂಹನು ಪ್ರತಾಪನಿಗೆ ಈ ಮಾತನ್ನು ತಿಳಿಸಲು ಪ್ರತಾಪನು ಹೇಳಿಕಳುಹಿಸಿದ್ದೇನಂದರೆ'- ಯವನರಿಗೆ ಸಹೋದರಿ ಯನ್ನು ಮಾರಿದ, ದಿನಾಲು ಯವನರೊಡನೆ ಅನ್ನ ಪಾನಮಾಡುವ ರಜಪೂತರೊಡನೆ ಪ್ರತಾಪನು ಭೋಜನಮಾಡಲಾರನು. ?? ಮಾನಸಿಂಹನು ತಾನಾಗಿಯೇ ಪ್ರತಾಪನ ಆತಿಥ್ಯ ಸ್ವೀಕಾರಮಾಡುವದಕ್ಕೆ ಬಂದು ಈ ಅಪಮಾನಕ್ಕೆ ತಾನೇ ಕಾರಣನಾಗಿದ್ದನು. ಅವನು ಒಂದು ತುತ್ತನ್ನು ಕೂಡ ಬಾಯಿಯಲ್ಲಿಟ್ಟು ಕೊಳ್ಳಲಿಲ್ಲ. ಚಿತ್ರಾವತಿಯಾಗಿಟ್ಟ ಕೆಲವು ಅಗಳುಗಳನ್ನು ತನ್ನ ಉದ್ದೀಯದಲ್ಲಿಟ್ಟು ಕೊಂಡು, ಸ್ಥಳವನ್ನು ಬಿಟ್ಟು ಹೊರಟನು. ಹೋಗುವ ಮುಂದೆ ರಾಣಾನನ್ನುದ್ದೇಶಿಸಿ ತಮ್ಮ ಸನ್ಮಾನವು ಬಳೆಯುವದಕ್ಕಾಗಿ, ನಾವು ನಮ್ಮ ಮರ್ಯಾದೆಗೆ ಜಲಾಂಜಲಿಯನ್ನು ಕೊಟ್ಟು, ನಮ್ಮ ಸಹೋದರಿಯರನ್ನು ತುರ್ಕರಿಗೆ ಕೊಟ್ಟಿದ್ದೇವೆ. ವಿಪತ್ತನ್ನು ತಂದುಕೊಳ್ಳುವದೇ ತಮ್ಮ ಇಚ್ಛೆಯಿದ್ದಲ್ಲಿ ಉಪಾಯವಿಲ್ಲ. ಈ ರಾಜ್ಯದಲ್ಲಿ ಇನ್ನು ನೀವು ಬಹುಕಾಲವಿರಲಾರಿರಿ. ” ಎಂದನು. ಮಾನಸಿಂಹನು ಕುದುರೆಯನ್ನು ಹತ್ತತಕ್ಕವನಿದ್ದನು. ಅಷ್ಟರಲ್ಲಿ ಪ್ರತಾಪನು ಬಂದು ಅವನ ದರ್ಶನ ತಕ್ಕೊಂಡನು. ಆಗ ಮಾನಸಿಂಹನು ಸಿಟ್ಟಿನಿಂದ ಅಂದದ್ದೇ ನಂದರೆ ತಮ್ಮ ಗರ್ವವನ್ನು ಖಂಡಿಸದಿದ್ದಲ್ಲಿ ನನ್ನ ಹೆಸರು ಮಾನಸಿಂಹನಲ್ಲ.” ಇದಕ್ಕೆ ಪ್ರತಾಪನು ಗಂಭೀರತೆಯಿಂದ ತಮ್ಮನ್ನು ಯುದ್ಧಕ್ಷೇತ್ರದಲ್ಲಿ ನೋಡು