ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ವನಾದರೆ ಬಹು ಆನಂದಿತನಾಗುವೆನು. ” ಎಂದು ಉತ್ತರಕೊಟ್ಟನು. ಈ ಸಮ ಯದಲ್ಲಿ ಪ್ರತಾಪನ ಹಿಂದುಗಡೆಯಲ್ಲಿ ಯಾರೋ (( ತಮ್ಮ ಬೀಗನಾದ ಅಕಬರ ನನ್ನು ಕರೆದುಕೊಂಡು ಬರುವದಕ್ಕೆ ಮರೆಯಬೇಡಿರಿ, ”ಎಂದು ನುಡಿದರು. ಮಾನ ಸಿಂಹನು ಮಾಡುತ್ತಾನೇನು? ಸುಮ್ಮನೆ ಹೊರಟುಹೋದನು. ಮಾನಸಿಂಹನು ಊಟಕ್ಕೆ ಕುಳಿತ ಸ್ಥಳವನ್ನು ಗಂಗಾಜಲದಿಂದ ಶುದ್ಧ ಮಾಡಿದರು. ಕಲಂಕಿತನಾದ ಮಾನಸಿಂಹನ ದರ್ಶನಕ್ಕೊಂಡ ರಜಪೂತರು ಸ್ನಾನಮಾಡಿ, ಬೇರೆ ವಸ್ತ್ರಗಳನ್ನು ಧರಿಸಿದರು. ರಜಪೂತರು ಮುಸಲ್ಮಾನರೊಡನೆ ಶರೀರಸಂಬಂಧವನ್ನು ಮಾಡಿದ ಸ್ವಜನಾಂಗವನ್ನು ಅತೀವ ತಿರಸ್ಕಾರದೃಷ್ಟಿ ಯಿಂದ ನೋಡುತ್ತಿದ್ದರೆಂಬದನ್ನು ಇದರಿಂದ ತಿಳಿಯಬಹುದಾಗಿದೆ. ಕ್ರೋಧಾಂಧನಾದ ಮಾನಸಿಂಹನು ಅಕಬರನಿಗೆ ತನ್ನ ಅಪಮಾನದ ಕಥೆ ಯನ್ನೂ, ಅದರೊಡನೆ ಬಾದಶಹನ ವಿಷಯವಾಗಿರುವ ಪ್ರತಾಪನ ತಿರಸ್ಕಾರ ವನ್ನೂ ವರ್ಣಿಸಿ ಹೇಳಿದನು. ಇದನ್ನು ಕೇಳಿ ಬಾದಶಹನು ಸಿಟ್ಟಾಗಿ, ಯವನರ ಕಡು ಹಗೆಯಾದ ಪ್ರತಾಪನಿಗೆ ಯೋಗ್ಯ ಶಿಕ್ಷೆಯನ್ನು ವಿಧಿಸುವದಕ್ಕಾಗಿ ದೊಡ್ಡ ಯುದ್ಧದ ಸಿದ್ದತೆಯು ನಡೆಯಿತು. ಪ್ರತಾಪನ ಗರ್ವವನ್ನು ನಾಶಮಾಡಿ, ವೀರ ಭೂಮಿಯಾದ ರಾಜಸ್ತಾನವನ್ನು ಯವನರ ಸ್ವಾಧೀನಪಡಿಸಲು ಮಾನಸಿಂಹನು ಮನಸುಮಾಡಿದನು; ಮತ್ತು ಅದರಂತೆ ಅಕಬರನಿಗೆ ಆಲೋಚನೆಯನ್ನು ಹೇಳ ತೊಡಗಿದನು. ಯಾವ ಅರಸನ ರಾಜ್ಯ ವಿಸ್ತಾರಕ್ಕಾಗಿಯೂ, ಶತ್ರುಸಂಹಾರಕ್ಕಾ ಗಿಯೂ ತನ್ನ ದೇಹದ ರಕ್ತವನ್ನು ನೀರಿನಂತೆ ವೆಚ್ಚ ಮಾಡುತ್ತಿದ್ದನೋ, ಆ ಅರ ಸನು ಒಂದು ಕಾಲದಲ್ಲಿ ತನ್ನ ಮರಣದ ಸಲುವಾಗಿ ವಿಷದಿಂದ ಕೂಡಿದ ಉಂಡಿ ಯನ್ನು ತಯಾರಿಸುವನೆಂಬದನ್ನು ಮಾನಸಿಂಹನು ಸ್ವಪ್ನದಲ್ಲಿಯೂ ಕೂಡ ಭಾವಿ ಸಿರಲಿಲ್ಲ.... ಬುಂದಿಯ ರಾಜದಪ್ರರದ ಕಾಗದ ಪತ್ರಗಳಿಂದ ತಿಳಿಯುವದೇನಂದರೆ-ಮಾನಸಿ೦ಹನು ತನ್ನ ಸಹೋದರಿಯ ಮಗನಾದ ಖುಷರುನನ್ನು ದಿಲೀಶ್ವರನನ್ನಾಗಿ ಮಾಡುವದಕ್ಕೆ ಯತ್ನಿಸಿದ್ದ ನ್ನು ತಿಳಿದು, ಅಕಬರನು ಅವನ ವಿಷಯವಾಗಿ ಸಿಟ್ಟಾದನು, ಮತ್ತು ಮಾನಸಿಂಹನನ್ನು ಕೊಲ್ಲು ವದಕ್ಕಾಗಿ ವಿಷಮಿಶ್ರಿತವಾದ ಉಂಡಿಯನ್ನು ತಯಾರಮಾಡಿಸಿದನು; ಆದರೆ ಮರವಿನಿಂದ ಉತ್ತ ಮುವಾದ ಉಂಡಿಯನ್ನು ಮಾನಸಿಂಹನಿಗೆ ಕೊಟ್ಟು, ವಿಷದಿಂದ ಕೂಡಿದ ಉಂಡಿಯನ್ನು ತಾನು