೪೪ ಕರ್ಣಾಟಕ ಕಾವ್ಯಕಲಾನಿಧಿ ತುಂಗವಿಕ್ರಮ ಕೇಳು ದನುಜರು ! ಸಂಗರಕೆ ಬಹರೆಂದು ಖಳಪತಿ | ಯಂಗನೆಯರನು ತೂಗಿ ಬಿಡುವನು ಪ್ರರದ ಬಾಗಿಲಲಿ ||೧೨|| ತೂಗಿ ಬಿಡುವರು ಮೊದಲು ಪುನರಪಿ | ತೂಗಿದರೆ ಘನವಾಗಲವರನು | ಬೇಗದಲಿ ಕಡಿಖಂಡವನು ಮಾಡುವರು ನಿಮಿಷದಲಿ | ನಾಗಭೂಷಣಗರಿದು ಹೋಗುವೊಡೆ | ನಾಗರಿಂಗರಿದೆನಲು ನಿಚ್ಚವು | ಬಾಗಿಲೊಳು ಕಾದಿಹರು ಬಹುಶತಕೋಟಿದಾನವರು ||೧೩|| ತೂಗಿ ಬಿಡುವರನೊಹಿಸಿ ಕೊಲುವೆನು | ಬೇಗದಲಿ ಮೈರಾವಣನ ಹಿರಿ | ದಾಗಿ ನೊಸಲಕ್ಕರವ ತೊಡೆವೆನು ಸೇನೆಸಹಿತೆನು | ರಾಗದಿಂ ದೋರ್ದಂಡಿ ನುಡಿದಳು || ಬಾಗಿಲನು ಕಳೆದೈದಿ ಬರೆ ಹೊ | ಕ್ಯಾಗ ತೋಸು ದನುಜವೀರಗೆ ಭುಜಪರಾಕ್ರಮವ ||೧೪|| ಕುಂಭದೊಳು ಮರೆಮಾಡಿ ನಿನ್ನವ || ಲಂಬಿಸುತ ಕೊಂಡುಯ್ಯನೆನಲಾ | ಅಂಬುಜಾಕ್ಷಿಯ ಕೊಡನೊಳಗೆ ಕಪಿ ಪುಗಲು ಸೂಕ್ಷ್ಮದಲಿ | ಸಿಂಬಿಯೊಳು ನೆರೆ ಧರಿಸಿ ನಡೆಯಲು | ತುಂಬಿ ಪರಿಮಳಕೆಯಗುವಂದದಿ | ಡಂಭದನುಜರು ನಿಲಿಸಿದರು ಬಾಗಿಲಲಿ ಬಾಲಕಿಯ ||೧೫|| ಕೊಡವೆರಸಿ ತೂಗಿದರು ಬಾಲೆಯ | ಗಡಣದಿಂ ಹನುಮಂತ ಬಳೆದು | ಕೊಡನೊಡೆದು ಕೊಲೆ ಮುರಿದು ಬಿದ್ದರು ದನು ಜಕೋಟೆಗಳು! ಮಡಮುರಿದು ಮೊಲಕಾಲ ಕೀಳು | ಪುಡಿವಡೆದು ಕೈ ಮುರಿದು ಕಾಲುಗ | ಕುಡಿದು ಮಸ್ತಕ ಹಿಡಿದು ಕೆಡೆದುದು ಕೋಟಿ ಖಳನಿಕರ ||೧೬||
ಪುಟ:ಮಹಿರಾವಣನ ಕಾಳಗ.djvu/೫೭
ಗೋಚರ