೫೨ ಕರ್ಣಾಟಕ ಕಾವ್ಯಕಲಾನಿಧಿ ಕಾರ ಮುಗಿಲೊಡ್ಡವಣೆ ಪವನನ || ಸಾರಿ ಬದುಕುವುದುಂಟಿ ತುರಗದ | ಭಾರಣೆಯ ಮೋಹರವ ತೊಅದುದನಾಹನುಮ ||೪|| ತಾಳವೃಕ್ಷವ ಕಿತ್ತು ಧಾಳಾ ! ಧೂಳಿ ಮಸಗಲು ಹನುಮನೆಗಿದು | ಧೂಳಿಪಟಮಾಡಿದನು ಖಳರಾವುತರ ಹಯದೊಡನೆ || ಕಾಲುಡಿದು ಶಿರವೊಡೆದು ತುರಗದ | ಹೋಟತೆಸೆಯೆ ದುರದುರಿಪ ರಕುತದ || ಕಾಲುವೆಯೊಳು ತೇಲಿದುವು ಹಯರಾವರಟ್ಟೆಗಳು|| ೪೯|| ತುರಗತತಿ ನುಗ್ಗಾಗೆಯಾಕ್ಷಣ | ಕರಿಘಟಾವಳಿ ನೂಂಕಿದುದು ಕರಿ | ಕರದ ಬಗ್ಗೆ ಹ ಲೌಡಿ ಕೊಂತದ ದಂತ ಸೂನಗೆಯ || ಸರಳ ಸಾರದ ಜೋದರೆಸುಗೆಯೊ | ಉರವಣಿಸಿದರನಂತರಾವಣ | ರಿರದೆ ಹಳಚಿದರಂದು ಹನುಮನನೆಂಟು ದಿಕ್ಕಿನಲಿ ||೫|| ಹನುಮ ನಿರುಕಿಸಿ ದೇವಿಯಿದಿರಲಿ | ಕನಕ ದೀಪಸ್ತಂಭವನು ತುದಿ | ಮನೆಯ ಜಾಡಿಸಿ ನೋಡಿ ಕಿತ್ಯನು ಬಾಲದಂಡದಲಿ || ಕನಲಿ ಸುರಪತಿ ಗಿರಿಗಳೆಕೆಯ | ಚಿನಕಡಿಯ ಮಾಟ್ಟಂತೆ ಜೋದರ | ನನುವರದೆ ದಂತವಳಂಗಳ ಕಡೆಯೊಪಿಸಿದನು ||೫೧|| ಉಡಿದ ದಾಡೆಯ ನೆಲಕೆ ತುಂಡಿಸಿ | ಕೆಡೆದ ಬರಿಕೈಗಳನು ಗಾಯದೆ | ಕಡಿವಡೆದ ಕಾಲಾಳನಿಬ್ಬಗೆಯಾದ ದೇಹಗಳ || ಮಡಿದ ಜೋದರ ಹರಿವ ರಕುತದ | ಕಡಲನೆಗೆ ಸಖತೊಳಗೆ ಹೊರಟಿತ | ದಡಿಗದಂತಿಯ ಶಿರಗಳೆಸೆದುವು ಕೆಳನ ಚೌಕದಲಿ - ||೫೨||
ಪುಟ:ಮಹಿರಾವಣನ ಕಾಳಗ.djvu/೬೫
ಗೋಚರ