ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ || ಕರ್ಣಾಟಕ ಕಾವ್ಯಕಲಾನಿಧಿ ಕೆಡಹಿದನ ಕುಸುಕಿದು ಹೊಟ್ಟೆಯ | ಮಡದೊಳಗೆ ಘಟ್ಟಿಸಲು ಬಲು ತನು || ವೊಡೆದು ಸುರಿದುದು ಕುರುಳು ಖಳ ಕಾದನುಶೋಣಿತವು ಮಡಿದನೈ ಖಳನೆನುತ ಹನುಮನು | ಬಿಡಲು ಮತ್ತಾ ಕರುಳು ಮಾಂಸದೆ | ಳೊಡನೆ ತನುವನು ತುಂಬಿ ಬೊಬ್ಬಿರಿಯುತ್ತೆ ಎಂದಿರ್ದು || ಒಡನೆ ಹನುಮನ ತಿವಿಯೆ ಗಾಯವ | ತಡೆದು ಜೊಕ್ಕೆಯದೊಳಗೆ ಮುಂದಲೆ | ವಿಡಿದು ತಿವಿದಾಡಿದರು ಕೇಶಾಕೇಶಿಯುದ್ದದಲಿ ||೭೬|| ಹೊಕ್ಕು ಮೈರಾವಣನು ಕೋಪದೆ | ತಕ್ಕವಿಸಿ ಕೆಡಹಿದನು ಹನುಮನ || ನಿಕ್ಕೆಲದ ಮೆಲುಮುರಿಯೆ ತಿವಿದನು ಕೂಡ ತಿವಿತಿವಿದು || ಬಿಕ್ಕುಳಿನ ಮೇಲುಸಿರು ನೂಕಲು | ಸಿಕ್ಕಿದನು ಮಗನೆನುತ ಮಾರುತ | ನಕ್ಕಿ ೦ ಬಲವೀಯೆ ದನುಜನ ಕೊಡಹಿ ಸಿಂದಿರ್ದ {೭೭|| ಖಳನ ಬಲವತಿ ಬಲುಹು ದನು ಜನ | ಗೆಲುವ ಪರಿಯೆಂತನುತ ಚಿಂತಿಸಿ | ಕಲಿಹನುಮ ರಾಘವನ ಚರಣವ ನೆನೆದು ಮನದೊಳಗೆ ! ಬಲುಹು ನೂರ್ಮಡಿಯಾಗೆ ರೋಷದಿ | ಹಲು ಮೊರೆದು ಪುಟನೆಗೆದು ಬೊಬ್ಬಿ' | ದಲಘುಭುಜಬಲ ಹನುಮ ನೆನೆದನು ಮನದೆ ಸಿಜಪಿತನ || ಮುಚ್ಚಿದನು ಕಂಗಳನು ರೋಷವ | ಹೆಚ್ಚಿಸಿದ ಹೃದಯದಲಿ ಪವನನ || ಬೆಚ್ಚಿ ಬಿಡಿಸಿದ ತಾನು ಮಾರುತಮಂತ್ರಪಠಣೆಯಲಿ || ಸಚ್ಚರಿತನಾಗಲೆನೆ ತನಯಗೆ || ಮೆಚ್ಚಿ ನಿಜವನು ತೋಕಾರಿಯ || ದಿಜ್ಜೆಯನು ತಾನೀವೆ ಬೇಡೆನೆ ಹನುಮನಿಂತೆಂದ ||೭೯||