ರ್೫ ಮೈರಾವಣನ ಕಾಳಗ ದೇವ ಬಿನ್ನಹ ಚಿತ್ರವಿಸು ಮೈ | ರಾವಣನ ತಡೆಗಡಿದು ರಾಘವ || ದೇವ ಲಕ್ಷ್ಮಣರಿಬ್ಬರನು ಕೊಂಡುಯ್ಯ ಕಾರ್ಯವನು || ನೀವು ಕೃಪೆಮಾಡುವುದೆನಲು ಕರು | ಹಾವಲೋಕನದಿಂದೆ ಮಗನೊಳು | ತೀವಿದುತ್ಸಾಹದಲಿ ಮರ್ಮವನರುಹಿದನು ಮರುತ ||೮|| ಖಳನ ಮಧ್ಯದ ನೆತ್ತಿಯೊಳು ನೀ || ರ್ಮಳದ ಮಾಣಿಕವೊಗೆದಿಹುದು ನೀ | ನಳುಕದದ ಕಿಡಲು ದನುಜನ ಶಕ್ತಿ ಕುಂದುವುದು || ಬಳಿಕ ಕೈಕಾಲುಗಳ ತುಂಡಿಸಿ | ನೆಲಕೆ ದಿಗುಬಲಿಗುಡಲು ಹರಣವು ! ಕಟ ದುಹೋಹುದು ತಥ್ಯವೆಂದು ಹಿದನು ತನಯಂಗೆ ||೮೧!! ಮಗನ ಕರ್ಣವ ಸಾರಿ ಮಾರುತ | ನಗುತ ಹೇಳಿದ ಮರ್ಮವೆಲ್ಲ ವ | ವಿಗಡ ಮೈರಾವಣನು ಮಾಯಾತತ್ವದಿಂದ ದು || ಜಗದೊಡೆಯ ರಾಘವನ ಕೊಡುವ || ಬಗೆಯನೇ ನಿಶ್ಚಯಿಸಿ ಮನದೊಳು || ತೆಗೆದು ಹರಿಮೂರ್ತಿಯನ್ನು ಮುಕುತಿಗೆ ಮನವ ಕೈಕೊಂಡ|| ಎತಗಿದನು ಹನುಮಂತದೇವನ | ಬಸಿಡಿಲು ಹೊಯ್ಕಂತೆ ಹೊಯ್ಯಲು || ತಳಹರಿಸಿ ಹನುಮಂತ ಹಿಡಿದನು ಖಳನ ಮುಂದಲೆಯ || ಬರಸೆಳೆದು ಕೆಡಹಿದನು ಮಧ್ಯದೆ || ಮೆರೆವ ಗೊಂಡವ ಕಿತ್ತು ರತುನವ | ಮುಕ್' ದು ಬಿಸುಟನು ಹನುಮ ಶ್ರೀರಘುರಾಮ ಶರಣೆನುತ|| ಕ್ರೂರ ಕೈಕಾಲುಗಳ ತುಂಡಿಸಿ | ಧಾರಿಣಿಗೆ ದಿಗುಬಲಿಯ ಕೊಟ್ಟನು || ವೀರದಾನವನೊಡಲಿನಿಂ ವರಕಾಂತಿಪಂಜವದು ||
ಪುಟ:ಮಹಿರಾವಣನ ಕಾಳಗ.djvu/೭೨
ಗೋಚರ